ಪೆರ್ಲ:ಸಂಘಟಿತರಾಗಿ ದುಡಿದಲ್ಲಿ ಯಾವುದನ್ನೂ ಸಾಧಿಸಲು ಸಾಧ್ಯ ಎಂಬುದನ್ನು ಮರಾಟಿ ಸಮುದಾಯದ ಜನರು ತೋರಿಸಿ ಕೊಟ್ಟಿದ್ದಾರೆ ಎಂದು ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಹೇಳಿದರು.
ಪೆರ್ಲ ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಮತ್ತು ಶಾರದಾ ಮರಾಟಿ ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಜರಗಿದ ಮರಾಟಿ ಬೋಡಿರ್ಂಗ್ ಹಾಲ್ ವಾರ್ಷಿಕೋತ್ಸವ ಮತ್ತು ಶ್ರೀ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮಲ್ಲಿನ ಸೀಮಿತ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿ ಬೋಡಿರ್ಂಗ್ ಹಾಲ್ ನಿರ್ಮಿಸಿ ಸಮಾಜಕ್ಕೆ ನೀಡಿರುವ ಶ್ರೀ ಶಾರದಾ ಮರಾಟಿ ಸಂಘ ತನ್ನ ಸಂಘಟನಾ ಸಾಮಥ್ರ್ಯವನ್ನು ಸಮಾಜದ ಮುಂದಿರಿಸಿದೆ. ಮರಾಟಿ ಬಾಂಧವರು ತಮ್ಮ ಆಚಾರ ವಿಚಾರ, ಸಂಸ್ಕøತಿ, ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.ಪರಿಶ್ರಮ, ಛಲ, ನಿಷ್ಟೆಯಿಂದ ಮರಾಟಿ ಸಮುದಾಯ ಗೆಲುವು ಸಾಧಿಸಿದೆ. ಸೇವಾಸಂಘದಿಂದ ಇನ್ನಷ್ಟು ಉತ್ತಮ ಕಾರ್ಯಗಳು ನಡೆದು ಬರಲಿ ಎಂದು ಹಾರೈಸಿದರು.
ಶಾರದಾ ಮರಾಟಿ ಸಮಾಜ ಸೇವಾ ಸಂಘ ಹಾಗೂ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಜಿ.ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಬಾಂಧವರು ಎಷ್ಟೇ ಉನ್ನತ ಸ್ಥಾನ ಮಾನಗಳಿಸಿದ್ದರೂ ಮರಾಟಿ ಸಂಪ್ರದಾಯಗಳನ್ನು ಕೈ ಬಿಡಬಾರದು.ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಸಮುದಾಯದ ಎಲ್ಲರ ಸಹಕಾರದಿಂದ ಭವ್ಯ ಸಭಾಂಗಣ ನಿರ್ಮಾಣವಾಗಿದೆ. ಸಮುದಾಯದ ಆರಾಧ್ಯ ಮಾತೆ ಮಹಮ್ಮಾಯಿ ದೇವಿಯ ಕೃಪೆಯಿಂದ ಇನ್ನಷ್ಟು ಸಮಾಜಿಕ ಕಾರ್ಯಗಳು ನಡೆಯಲಿ ಎಂದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ. ಅತಿಥಿಯಾಗಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾ ಅಮ್ಮೆಕ್ಕಳ, ಕೆ.ಎಂ.ಎಸ್.ಎಸ್. ಸ್ಥಾಪಕ ಅಧ್ಯಕ್ಷ ಬಾಲಕೃಷ್ಣ ಮಾಸ್ತರ್ ಕಯ್ಯಾರ್, ಕೇರಳ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪೈಕ, ಕೆ.ಕೆ.ಟಿ.ಎಂ.ಎಫ್.ಅಧ್ಯಕ್ಷ ಸುಬ್ರಾಯ ನಾಯ್ಕ, ನಿವೃತ್ತ ಅಬಕಾರಿ ಇಲಾಖೆ ಆಯುಕ್ತ ಎಂ.ಜಿ. ಕೃಷ್ಣಪ್ಪ, ಶಾರದೋತ್ಸವ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ ಪೆರಡಾಲ, ನಾರಾಯಣ ನಾಯ್ಕ ಇಳಂತೋಡಿ, ಡಾ.ಸಂಧ್ಯಾ ಕುಮಾರಿ, ಲಕ್ಷ್ಮಿ ಟೀಚರ್ ಮತ್ತಿತರರು ಶುಭ ಹಾರೈಸಿದರು. ಎಸ್.ಎಂ.ಎಚ್.ಟ್ರಸ್ಟ್ ಪದಾಧಿಕಾರಿ ಡಾ.ನಾರಾಯಣ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿದರು.
ಮಂಜುಶ್ರೀ ನಲ್ಕ, ದಿವ್ಯ ಜ್ಯೋತಿ ಕಾಡಮನೆ ಪ್ರಾರ್ಥಿಸಿದರು. ರಾಜಗೋಪಾಲ್ ಸ್ವಾಗತಿಸಿ, ಸತೀಶ್ ಕುಮಾರ್ ಕಯ್ಯಾರ್ ನಿರೂಪಿಸಿ ವಂದಿಸಿದರು.
ಬೆಳಿಗ್ಗೆ ಗಣಹೋಮ, ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ಭೋಜನ ಶಾಲೆ ಲೋಕಾರ್ಪಣೆ, ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ನಡೆಯಿತು. ಸಮಾಜದ ಹಿರಿಯರು, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಸಂಜೆ ಭರತನಾಟ್ಯ, ನೃತ್ಯ ರೂಪಕ, ಜಾನಪದ ನೃತ್ಯ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.




