ಬದಿಯಡ್ಕ: ಗಾಂಧಿಜಯಂತಿ ಪಕ್ಷಾಚರಣೆ ಅಂಗವಾಗಿ ಜಿಲ್ಲಾ ವಾರ್ತಾ ಇಲಾಖೆ ವತಿಯಿಂದ ಬದಿಯಡ್ಕ ಬಳಿಯ ಪೆರಡಾಲ ಕೊರಗ ಕಾಲನಿಯ ಎಂ.ಜಿ.ಎಲ್.ಸಿ. ಏಕೋಪಾಧ್ಯಾಯ ಶಾಲೆಯಲ್ಲಿ ಮಂಗಳವಾರ ವಿವಿಧ ಕಾರ್ಯಕ್ರಮಗಳು ಜರುಗಿದುವು.
ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿಯ ಸಹಭಾಗಿತ್ವದೊಂದಿಗೆ ನಡೆದ ಸಮಾರಂಭವನ್ನು ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ.ಎ.ಶ್ರೀನಾಥ್ ಉದ್ಘಾಟಿಸಿ, ಗಾಂಧಿ ಸ್ಮರಣೆ ನಡೆಸಿದರು. ಜಿಲ್ಲಾ ವಾರ್ತಾ ಇಲಾಖೆಯ ಛಾಯಾಗ್ರಾಹಕ ಅಖಿಲೇಷ್ ನಗುಮುಗಂ ಅಧ್ಯಕ್ಷತೆ ವಹಿಸಿದ್ದರು.
ಅಕಾಡೆಮಿ ಕಾರ್ಯದರ್ಶಿ ವಿದ್ಯಾ ಗಣೇಶ್ ಅಣಂಗೂರು, ಎಂ.ಜಿ.ಎಲ್.ಸಿ. ಶಾಲೆಯ ಶಿಕ್ಷಕ ರಾಜೇಶ್ ಮಾಸ್ತರ್, ನಿಷಾ, ಕಾಲನಿ ಪ್ರತಿನಿಧಿ ವಿಮಲಾ ಮೊದಲಾದವರು ಉಪಸ್ಥಿತರಿದ್ದರು. ಬದಿಯಡ್ಕ ನವಜೀವನ ಶಾಲೆ ಮತ್ತು ಎಂ.ಜಿ.ಎಲ್.ಸಿ. ಶಾಲೆಯ ವಿದ್ಯಾರ್ಥಿಗಳು ಶಾಲಾ ಆವರಣದ ಶುಚೀಕರಣ ನಡೆಸಿದರು. ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.


