ಬದಿಯಡ್ಕ: ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ಜಾಗತಿಕ ಕೈ ತೊಳೆಯುವ ದಿನವನ್ನು ಆಚರಿಸಲಾಯಿತು.
ರೋಗವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಾಗಿ ಸಾಬೂನು ಉಪಯೋಗಿಸಿ ಕೈ ತೊಳೆಯುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯಕರ ಅಭ್ಯಾಸಗಳನ್ನು ವಿದ್ಯಾರ್ಥಿ ಜೀವನದಲ್ಲೇ ಅಳವಡಿಸಿಕೊಳ್ಳುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಾಬೂನು ಉಪಯೋಗಿಸಿ ಕೈ ತೊಳೆಯುವ ಸಾಮಾನ್ಯ ಸಂಸ್ಕøತಿಯನ್ನು ಬೆಳೆಸಿಕೊಳ್ಳುವುದು ಮತ್ತು ಸೋಪು ಉಪಯೋಗಿಸಿ ಕೈ ತೊಳೆಯುವುದು ತುಂಬಾ ಪರಿಣಾಮಕಾರಿ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಕ ಅವಿನಾಶ ಕಾರಂತ ಎಮ್ ತಿಳಿಸಿಕೊಟ್ಟರು. ಸಾಬೂನಿನಿಂದ ಕೈ ತೊಳೆಯುವ ಪ್ರಮುಖ 7 ಹಂತಗಳ ಬಗ್ಗೆ ಶಿಕ್ಷಕಿ ಸುಲಲಿತ ಪಿ ಕೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

