ಬದಿಯಡ್ಕ: ಚುಟುಕುಗಳ ಮೂಲಕ ಸಮಾಜದ ಡೊಂಕುಗಳನ್ನು ತಿದ್ದ ಬೇಕು. ಆದರೆ ಯಾರನ್ನೂ ನೋಯಿಸಬಾರದು. ಚುಟುಕುಗಳು ಜೀವನೊತ್ಸಾಹ ಮೂಡಿಸ ಬೇಕು ಎಂದು ವೇದಮೂರ್ತಿ ಜನಾರ್ದನ ಭಟ್ ಹೇಳಿದರು.
ದೆಹಲಿ ಕರ್ನಾಟಕ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚು.ಸಾ.ಪ ಸಹಯೋಗದಲ್ಲಿ ದೆಹಲಿ ಕರ್ನಾಟಕ ಸಂಘ ಸಭಾಂಗಣದಲ್ಲಿ ಭಾನುವಾರ ನಡೆದ ಅಂತರ್ ರಾಜ್ಯ ಚುಟುಕು,ಕವನ ವಾಚನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಆಥಿತಿಗಳಾಗಿ ಕವಿ,ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಚು.ಸಾ.ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹ.ಸು ಒಡ್ಡಂಬೆಟ್ಟು ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಕಾಸರಗೋಡು ಇದರ ಸಂಚಾಲಕ ಸುಭಾಷ್ ಪೆರ್ಲ, ಚು.ಸಾ.ಪ ಕಡಬ ಘಟಕದ ಗೌರವ ಅಧ್ಯಕ್ಷ ಜಯಾನಂದ ಪೆರಾಜೆ ಬಾಗವಹಿಸಿದ್ದರು.
ಸಾಹಿತಿ, ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಕವಿಗಳನ್ನು ಪರಿಚಯಿಸಿ ನಿರೂಪಿಸಿದರು. ಬಳಿಕ ನಡೆದ ಕವಿಗೋಷ್ಠಿಯಲ್ಲಿ ಆಕೃತಿ.ಐ.ಎಸ್ ಭಟ್, ಶಾಂತ ಪುತ್ತೂರು, ಗುಣವತಿ ಕಿನ್ಯಾ, ಮಲ್ಲಿಕಾ ಜೆ. ರೈ, ಹುಂಡೆ ಕೃಷ್ಣ ದೆಹಲಿ, ಪವಿತ್ರ ತಮಣ್‍ಕರ್, ಪ್ರಮೀಳಾ ಚುಳ್ಳಿಕ್ಕಾನ, ಪ್ರಭಾವತಿ ಕೆದಿಲಾಯ, ಪ್ರೇಮ ಉದಯ ಕುಮಾರ್, ಕುಶಾಲಾಕ್ಷಿ ಕಣ್ವತೀರ್ಥ, ಚಂದ್ರಿಕಾ ಡಿ. ಕೈರಂಗಳ, ರತ್ನ ಹಾಲಪ್ಪ ಗೌಡ, ಗಾಯತ್ರಿ ಕದಂಬ, ಪರಮೇಶ್ವರ ನಾಯ್ಕ ಬಾಳೆಗುಳಿ, ಹರೀಶ್ ಸುಲಾಯ ಒಡ್ಡಂಬೆಟ್ಟು, ಅಭಿ ಪೆರ್ಲ, ಅಭ್ಯುದಯ.ಎಮ್. ಜೈನ್, ಸುಭಾಷ್ ಪೆರ್ಲ, ಆನಂದ ಪೆರ್ಲ, ಬದ್ರುದ್ದೀನ್ ಕುಳೂರು, ತಾರಾನಾಥ ಬೋಳಾರ,ದೇವರಾಜ ಆಚಾರ್ಯ ಕುಂಬಳೆ, ಹರ್ಷಿತ್ ಕುಮಾರ್, ಅಭಿಷೇಕ್, ಲಾಲಿತ್ಯಾ ಜಿಕೆ, ಅಪರ್ಣಾ ಅಳ್ವ, ಜಯಾನಂದ ಪೆರಾಜೆ, ಸುರೇಖಾ ಯೆಳವಾರ, ಮಾದವ ಉಳ್ಳಾಲ, ಡಾ.ಜಗದೀಶ್ ಶೆಟ್ಟಿ, ಮೊದಲಾದವರು ಸ್ವ ರಚಿತ ಚುಟುಕು, ಕವನಗಳನ್ನು ವಾಸಿಸಿದರು. ಸುರೇಖಾ ಯೆಳವಾರ, ಪೂಜ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ದ.ಕ.ಜಿಲ್ಲಾ ಚುಸಾಪ ಅಧ್ಯಕ್ಷ ತಾರಾನಾಥ ಬೋಳಾರ್, ಗೌರವ ಅಧ್ಯಕ್ಷ ಇರಾ ನೇಮು ಪೂಜಾರಿ ಉಪಸ್ಥಿತರಿದ್ದರು. ಚು.ಸಾ ವೇ ಕಡಬ ಘಟಕದ ಉಪಾಧ್ಯಕ್ಷೆ ಶಾಂತಾ ಪುತ್ತೂರು ವಂದಿಸಿದರು.


