HEALTH TIPS

ಕೇರಳದಲ್ಲಿ ಸಂಪೂರ್ಣ ಲಾಕ್‍ಡೌನ್- ಕಾಸರಗೋಡಿನಲ್ಲಿ ಮತ್ತೆ 19 ಮಂದಿಗೆ ಕೊರೊನಾ


         ಕಾಸರಗೋಡು: ಮಾರಣಾಂತಿಕ ಕೊರೊನಾ ವೈರಸ್ ಸೋಂಕು ದೇಶದಾದ್ಯಂತ ವೇಗದಲ್ಲಿ ಹರಡುತ್ತಿರುವಂತೆ ಕೇರಳದಲ್ಲಿ ಮಾ.31 ರ ವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಮಾತ್ರ 19 ಮಂದಿಗೆ ಕೊರೊನಾ ದೃಢಪಡಿಸಲಾಗಿದೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಬಾಧಿತರ ಒಟ್ಟು ಸಂಖ್ಯೆ 38 ಕ್ಕೇರಿದೆ.
        ರಾಜ್ಯದಲ್ಲಿ ಸೋಮವಾರ ಒಟ್ಟು 28 ಜನರಿಗೆ ಕೊರೊನಾ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ 5, ಪತ್ತನಂತಿಟ್ಟ-1, ಎರ್ನಾಕುಳಂ - 2, ತೃಶ್ಶೂರು -1, ಕಾಸರಗೋಡು-19 ಎಂಬಂತೆ ಕೊರೊನಾ ದೃಢಪಡಿಸಲಾಗಿದೆ. ಇವರಲ್ಲಿ 25 ಮಂದಿ ದುಬೈಯಿಂದ ಬಂದವರು. ರಾಜ್ಯದಲ್ಲಿ ಒಟ್ಟು 91 ಮಂದಿ ಕೊರೊನಾ ಪತ್ತೆಹಚ್ಚಲಾಗಿದೆ. ನಾಲ್ವರು ರೋಗ ಮುಕ್ತರಾಗಿದ್ದಾರೆ.
       ಸೋಮವಾರ ರಾಜ್ಯದಲ್ಲಿ 64320 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 63937 ಮಂದಿ ಮನೆಯಲ್ಲೂ, 383 ಮಂದಿ ಆಸ್ಪತ್ರೆಯಲ್ಲೂ ನಿಗಾದಲ್ಲಿದ್ದಾರೆ. ಸೋಮವಾರ 122 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಒಟ್ಟು 4291 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದ್ದು, ಅದರಲ್ಲಿ 2987 ಮಂದಿಗೆ ನೆಗೆಟಿವ್ ಫಲಿತಾಂಶ ಬಂದಿದೆ.
ಲಾಕ್ ಡೌನ್ ಘೋಷಣೆಯ ಹಿನ್ನೆಲೆಯಲ್ಲಿ ಸಾರಿಗೆಯನ್ನು ಸಂಪೂರ್ಣವಾಗಿ ನಿಲುಗಡೆಗೊಳಿಸಲಾಗಿದೆ. ಕೆಎಸ್‍ಆರ್‍ಟಿಸಿ, ಖಾಸಗಿ ಬಸ್ ಸರ್ವೀಸ್ ಸಂಪೂರ್ಣ ನಿಲುಗಡೆಗೊಳಿಲಾಗಿದೆ. ಖಾಸಗಿ ವಾಹನವನ್ನು ಬಳಸಬಹುದು. ಔಷ„, ಹಾಲು, ಆ್ಯಂಬುಲೆನ್ಸ್, ವೈದ್ಯಕೀಯ, ಪತ್ರಿಕೆಗಳಿಗೆ ಯಾವುದೇ ನಿಷೇಧವಿಲ್ಲ. ಆರಾಧನಾಲಯಗಳಿಗೆ ನಿಬಂಧನೆ ಜಾರಿಗೊಳಿಸಲಾಗಿದೆ. ಜನರು ಸೇರುವ ಕಾರ್ಯಕ್ರಮಗಳನ್ನು ಆರಾಧನಾಲಯಗಳಲ್ಲಿ ಆಯೋಜಿಸಬಾರದು. ಸರಕಾರಿ ಕಚೇರಿಗಳು ಸಂಪೂರ್ಣ ಭದ್ರತೆಯಲ್ಲಿ ಕಾರ್ಯಾಚರಿಸಲಿದೆ. ರಾಜ್ಯದ ಎಲ್ಲಾ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಲಾಕ್ ಡೌನ್ ಘೋಷಿಸಿರುವುದರಿಂದಾಗಿ ಯಾರೂ ಮನೆಯಿಂದ ಹೊರಗಿಳಿಯಬಾರದು. ಅನಗತ್ಯವಾಗಿ ಹೊರಗೆ ಬಂದರು ಕಠಿಣ ಕ್ರಮ ಸಹಿತ ಬಂ„ಸಲಾಗುವುದು. ಜನರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಒಂದು ಮೀಟರು ಅಂತರ ಕಾಯ್ದುಕೊಳ್ಳಬೇಕು.
     ರೆಸ್ಟಾರೆಂಟ್‍ಗಳಲ್ಲಿ ಕುಳಿತುಕೊಂಡು ಆಹಾರ ಸೇವನೆಯನ್ನು ನಿಷೇಧಿಸಲಾಗಿದೆ. ಅಗತ್ಯವಿದ್ದಲ್ಲಿ ಹೋಮ್ ಡೆಲಿವರಿ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೆಡಿಕಲ್, ಆಸ್ಪತ್ರೆಗಳು, ದಿನನಿತ್ಯದ ಆಹಾರ ವಸ್ತುಗಳಿಗಿರುವ ದಿನಸಿ ವಸ್ತುಗಳು, ತರಕಾರಿ ಅಂಗಡಿ, ಪತ್ರಿಕೆ ವಿತರಣೆ, ಇಂಟರ್ ನೆಟ್, ಟೆಲಿಕಾಂ ಸೇವೆಗಳು, ಬ್ಯಾಂಕ್, ಎಟಿಎಂ, ಅಂಚೆಕಚೇರಿ ಮತ್ತು ಮಾಧ್ಯಮಗಳು ಕಾರ್ಯಾಚರಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries