ಕಾಸರಗೋಡು: ಸಾಮಾಜಿಕ ಮಧ್ಯಮಗಳಲ್ಲಿ ಕೋವಿಡ್-19 ಸಂಬಂಧ ಕೆಲವು ತಪ್ಪು ಮಾಹಿತಿಗಳು ಹರಡುತ್ತಿದ್ದು, ಇವನ್ನು ಕಂಡು ನಂಬಬಾರದು. ಸರಿಯಾ ಮಾಹಿತಿ ತಿಳಿಯುವ ಮೂಲಕ ಸಂಶಯಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ "ದಿಶಾ" ಸಂಸ್ಥೆಯ ಟಾಲ್ಫ್ರೀ ನಂಬ್ರ: 1056ನ್ನು ಸಂಪರ್ಕಿಸಬಹುದು.
ಮನೆಯಲ್ಲಿ ಹೆತ್ತವರ ,ಮಕ್ಕಳ ಮುಂದೆ ರೋಗ ಹರಡುವಿಕೆ ಸಂಬಂಧ ಭೀತಿ ಮೂಡಿಸುವ ಸುದ್ದಿಗಳನ್ನು ಚರ್ಚಿಸಬೇಡಿ. ಇಂದಿನ ದುಸ್ಥಿತಿ ಕೇವಲ ತಾತ್ಕಾಲಿಕ. ಇದನ್ನು ಶೀಘ್ರದಲ್ಲೇ ಪರಿಹರಿಸಿಕೊಂಡು ಸಮಾಜ ಹಿಂದಿನಂತೆಯೇ ಸುಧಾರಿತಗೊಳ್ಳಲಿದೆ ಎಂಬ ಶುಭವಿಶ್ವಾಸ ಅವರಲ್ಲಿ ಮೂಡಿಸಬೇಕು. ಉತ್ತಮ ಮುಂಜಾಗರೂಕತೆ, ರಾಜ್ಯ ಸರಕಾರದ ಸಲಹೆ-ಸೂಚನೆಗಳ ಅನುಸರಣೆ ಮೂಲಕ ಇಂದಿನ ಪರಿಸ್ಥಿತಿಯನ್ನು, ಮಾನಸಿಕ ಒತ್ತಡ ಇತ್ಯಾದಿಗಳನ್ನು ಮೀರಲು ಸಾಧ್ಯ.
ಆತಂಕ ನಿವಾರಣೆಗೆ ಸುಲಭ ಮಾರ್ಗಗಳು
* ಟೀವಿ ಮೂಲಕ ಸಿನಿಮಾ ವೀಕ್ಷಣೆ, ಸಂಗೀತ ಆಲಿಸುವಿಕೆ.
* ಪ್ರಿಯವಾದ ಪುಸ್ತಕ ವಾಚನ.
* ಮಾನಸಿಕ ಭೀತಿ ಹೊಂದಿರುವವರು ಕೊರೋನಾ ಸಂಬಂಧ ವಾರ್ತೆಗಳನ್ನು ಆಲಿಸದಿರುವುದು ಉತ್ತಮ.
* ಅಗತ್ಯಕ್ಕೆ ಬೇಕಾದಷ್ಟು ನಿದ್ದೆ ಮಾಡಿ.
* ಮನೆಮಂದಿಯೊಂದಿಗೆ ಕುಶಲೋಪರಿ ಮಾತನಾಡಿ.
* ವ್ಯಾಯಾಮ ಮಾಡಿ.
* ಮಾನಸಿಕ ಒತ್ತಡ ನಿವಾರಣೆಯ ಉದ್ದೇಶದಿಂದ ಮದ್ಯ, ಕಾಫಿ ಇತ್ಯಾದಿ ಸೇವನೆ ನಡೆಸಬೇಡಿ.
* ಭೀತಿ ಮೂಡಿಸುವ ಚಿಂತನೆಗಳನ್ನು ಕೈಬಿಡಿ.
* ಕುಟುಂಬದ ಸದಸ್ಯರೊಂದಿಗೆ ಶುಭ ನುಡಿಗಳನ್ನೇ ಆಡಿ.



