ಕಾಸರಗೋಡು: ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 2736 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 85 ಮಂದಿ ಆಸ್ಪತ್ರೆಗಳಲ್ಲಿ, 2651 ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ನೂತನವಾಗಿ 99 ಮಂದಿಯ ಸ್ಯಾಂಪಲ್ ಗಳನ್ನು ತಪಾಸಣೆಗೆ ಕಳುಹಿಸಲಾಗಿದೆ. 202 ಮಂದಿಯ ತಪಾಸಣೆಯ ಫಲಿತಾಂಶ ಇನ್ನೂ ಬರಬೇಕಿದೆ. ಈ ವರಗೆ 38 ಮಂದಿಗೆ ಕೊರೋನಾ ಸೋಂಕು ಬಾಧೆ ಖಚಿತವಾಗಿದೆ.
ನೌಕರರ ಸುರಕ್ಷತೆ, ಸೌಲಭ್ಯಗಳು ಖಚಿತತೆ: ನೌಕರಿ ಇಲಾಖೆಯಿಂದ ಕಠಿಣ ಸಲಹೆ-ಸೂಚನೆ
ಕೋವಿಡ್-19 ಪ್ರತಿರೋಧ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಘೋಷಿಸಿರುವ ಕಟ್ಟುನಿಟ್ಟುಗಳ ಅಂಗವಾಗಿ ತುರ್ತುಪರಿಸ್ಥಿತಿಯಿದ್ದು, ಈ ಹಿನ್ನೆಲೆಯಲ್ಲಿ ಕಾರ್ಮಿಕರ ಮತ್ತು ಕಾಯಕಗಳ ಮಾಲೀಕರ ಜೊತೆಗೆ ಮಾತುಕತೆ ನಡೆಸಿ ನೌಕರಿ ಇಲಾಖೆ ಕೆಲವು ಮಾನದಂಡಗಳನ್ನು ಪ್ರಕಟಿಸಿದೆ.
ಅರ್ಹವಾಗಿರುವ ಎಲ್ಲ ರಜೆಗಳು, ವಿಶೇಷ ರಜೆಗಳು ಕಾರ್ಮಿಕರಿಗೆ ಮಂಜೂರುಮಾಡಬೇಕು. ವೇತನ ಕಡಿತ ಯಾ ನೌಕರಿಗೆ ಮರಳುವಂತೆ ಒತ್ತಾಯಿಸಕೂಡದು ಎಂದು ಸಕ್ರ್ಯುಲರ್ ನಲ್ಲಿ ತಿಳಿಸಲಾಗಿದೆ. ಕಾಯಗಳಲ್ಲಿ ಯಾವುದೇ ಟಾರ್ಗೆಟ್ಗಳನ್ನು ತಿಳಿಸಬಾರದು, ಅದನ್ನು ನಡೆಸುವಂತೆ ಕಾರ್ಮಿಕರನ್ನು ಒತ್ತಾಯಿಸಕೂಡದು. ರಾಜ್ಯದ ಸಾರ್ವಜನಿಕ/ಖಾಸಗಿ ವಯಗಳ ನಿರ್ಮಾಣವಲಯ, ತೋಟ ವಲಯ, ಗೇರುಬೀಜ, ಮೀನು ಸಂಸ್ಕರಣೆ, ತೆಂಗಿನನಾರು ಸಹಿತ ಸಂಸ್ಥೆಗಳ ಮಾಲೀಕರು, ಕಾರ್ಖಾನೆಗಳ ಮಾಲೀಕರು ಕಾರ್ಮಿಕರು ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಸಾಧ್ಯತೆಯಿರುವ ಎಲ್ಲ ಸಿಬ್ಬಂದಿ ಮನೆಗಳಿಂದಲೇ ನೌಕರಿ ನಡೆಸುವಂತೆ(ವರ್ಕ್ ಎಟ್ ಹೋಂ) ಅಗತ್ಯವಿರುವ ಸೌಲಭ್ಯ ನೌಕರಿ ಮಾಲೀಕರು ನಡೆಸಬೇಕು. ಇನ್ ಫಾ ಪಾರ್ಕ್, ಟೆಕ್ನೋ ಪಾರ್ಕ್ ಇತ್ಯಾದಿಗಳ ಸಂಸ್ಥೆಗಳಲ್ಲಿ ಸೇರಿರುವ ಐ.ಟಿ.ಸಂಸ್ಥೆಗಳು, ಸ್ಟಾರ್ಟ್ ಅಪ್ ಕಂಪನಿಗಳು, ಸೇಲ್ಸ್ ಪ್ರಮೋಷನ್ಕಾರ್ಮಿಕರನ್ನು ನೇಮಿಸಿರುವ ಸಂಸ್ಥೇಗಳುನೌಕರರಿಗೆ "ವರ್ಕ್ ಪ್ರಂ ಹೋಂ" ಸೌಲಭ್ಯ ಒದಗಿಸಲು ಪ್ರತ್ಯೇಕ ಗಮನಹರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮನಿ ಎಕ್ಸ್ ಚೇಂಜ್ ಘಟಕಗಳ್ಲಿ ಕಡ್ಡಾಯ ಸುರಕ್ಷೆ ಸೌಲಭ್ಯ ಗಳೊಂದಿಗಷ್ಟೇ ಚಟುವಟಿಕೆಗಳು ನಡೆಸಬೇಕು. ಸಂಸ್ಥೆಗಳ ಪ್ರವೇಶ ದ್ವಾರಗಳಲ್ಲಿ ಸಾಬೂನು, ಹ್ಯಾಂಡ್ ವಾಷ್, ನೀರು ಇತ್ಯಾದಿಗಳನ್ನು ಕೈತೊಳೆಯುವ ಉದ್ದೇಶದಿಂದ ಇರಿಸಬೇಕು. ನೌಕರಿ ಮಾಲೀಕರು, ಸಿಬ್ಬಂದಿಗೆ ಮಾಸ್ಕ್, ಗ್ಲೌಸ್ ಇತ್ಯಾದಿ ಸುರಕ್ಷಾ ಸೌಲಭ್ಯ ಒದಗಿಸಬೇಕು.
ನಿಯಂತ್ರಣ ಏರ್ಪಡಿಸಲಾದ ಅವಧಿಗಳಲ್ಲಿ ಯಾವ ರೀತಿಯಲ್ಲೂ ಲೇ-ಆಫ್, ಲಾಕ್-ಔಟ್, ರೀಟ್ರಂಚ್ ಮೆಂಟ್, ಟರ್ಮಿನೇಷನ್ ಸಹಿತ ಕ್ರಮಗಳನ್ನು ಕೈಗೊಳ್ಳಬಾದು. ಕ್ಯಾಷ್ವಲ್, ಟೆಂಪರರಿ, ಬದಲಿ, ಕಾಂಟ್ರ್ಯಾಕ್ಟ್, ಟ್ರೈನಿ, ದಿನವೇತನ ಕರಾರಿನ ಸಿಬ್ಬಂದಿಯನ್ನು ಕೈಬಿಡಬಾರದು ಮತ್ತು ವೇತನ ಹಿಡಿದಿರಿಸಬಾರದು. ಈ ವಿಚಾರಗಳಲ್ಲಿ ಉಲ್ಲಂಘನೆ ನಡೆಸಿದರೆ ನೌಕರಿ ಮಾಲೀಕರು, ಗುತ್ತಿಗೆದಾರರು ಮೊದಲಾದವರ ವಿರುದ್ಧ ಜಿಲ್ಲಾ ಕರ್ಮಿಕ ಅಧಿಕಾರಿ ಕ್ರಮಕೈಗೊಳ್ಳುವರು.
ವೇತನದಲ್ಲಿ ಕಡಿತ ನಡೆಸಿದರೆ ಕಾರ್ಮಿಕ ಮಾನಸಿಕ ಧೈರ್ಯ ಕುಸಿಯುವ ಸಾಧ್ಯತೆಯಿದ್ದು, ಅದು ಅಂಟುರೋಗ ವಿರುದ್ಧ ನಡೆಯುತ್ತಿರುವ ಪ್ರತಿರೋಧ ಚಟುವಟಿಕೆಗಳಿಗೆ ತೊಡಕಾಗಲಿದೆ. ನೌಕರಿ ಸಂಬಂಧ ವಿವಾದಗಳು, ಮುಷ್ಕರಗಳು ಇತ್ಯಾದಿಗಳನ್ನು ಈ ವೇಳೆ ಕೈಬಿಡಬೇಕು. ಪರಸ್ಪರ ಸಹಕಾರ ಖಚಿತಪಡಿಸಬೇಕು. ಅವರ ಕುಟುಂಬಗಳು ಸಮಸ್ಯೆಯಿಂದ ಪಾರಾಗುವಂತೆ ನೌಕರಿ ಮಾಲೀಕರು ಯತ್ನ ನಡೆಸಬೇಕು.
ಹತ್ತು ಯಾ ಅದಕ್ಕಿಂತ ಅಧಿಕ ನೌಕರರು ಮಾತ್ರ ಇರುವ, 1947ರ ಇಂಡ್ರಸ್ಟ್ರಿಯಲ್ ಡಿಸ್ ಪ್ಯೂಟ್ಸ್ ಕಾಯಿದೆ ಚಾಪ್ಟರ್ 5ಎ, 5ಬಿ ನಿಬಂಧನೆಗಳು ಅನ್ವಯವಾಗದ ಶಾಪ್ ಆಂಡ್ ಕಮರ್ಷಿಯಲ್ ಎಸ್ಟಾಬ್ಲಿಷ್ ಮೆಂಟ್ ಗಳು, ಲೇ-ಆಫ್ ನಿಬಂಧನೆ ಅನ್ವಯವಲ್ಲದ, 50ಕ್ಕಿತ ಕಡಿಮೆ ನೌಕರರಿರುವ ಕಾರ್ಖಾನೆಗಳು ಕೋವಿಡ್-19 ಸೋಂಕಿನ ಕಾರಣ ಮುಚ್ಚುಗಡೆ ನಡೆಸಬೇಕಾದ ಪರಿಸ್ಥಿತಿ ಇದ್ದರೆ ನೌಕರಿ ಮಾಲೀಕರು ಸಿಬ್ಬಂದಿಗೆ ಪೂರ್ಣ ವೇತನ ನೀಡಬೇಕು.
ಬಯೋಮೆಟ್ರಿಕ್ ಸೌಲಭ್ಯ ಜಾರಿಯಲ್ಲಿ ಜಾರಿಗೊಳಿಸರುವ ಶಾಲೆಗಳ ಸಹಿತ ಸಂಸ್ಥೆಗಳಲ್ಲಿ ಈ ತಿಂಗಳ 31 ವರೆಗೆ ಬಯೋಮೆಟ್ರಿಕ್ ಸೌಲಭ್ಯ ನಿಲುಗಡೆ ಮಾಡಬೇಕು. ಸಂಸ್ಥೆಗಳ ನೌಕರರ ಆರೋಗ್ಯ ಮತ್ತು ಸುರಕ್ಷತೆ ಖಚಿತಪಡಿಸಬೇಕಾಗದ ಹಿನ್ನೆಲೆಯಲ್ಲಿ, ಕೊರೋನಾ ವೈರಸ್ ಹರಡುತ್ತಿರುವ ಕಾರಣ 1961ರ ಕೇರಳ ಶಾಪ್ಸ್ ಆಂಡ್ ಕಮರ್ಷಿಯಲ್ ಎಸ್ಟಾಬ್ಲಿಷ್ ಮೆಂಟ್ ಸಂಹಿತೆಯ 6(4) ಡಿ ಪ್ರಕಾರದ ನಾನ್ ಆಲ್ಕೋಹಾಲಿಕ್ ಕ್ಲೀನಿಂಗ್ ಪೈಪ್ಸ್, ಡಿಸ್ಪಾಸಿಬಲ್ ಲಾಕ್ಸ್ ಗ್ಲೌಸ್, ಮಾಸ್ಕ್ ಇತ್ಯಾದಿ ನೌಕರರಿಗೆ ಒದಗಿಸುವುದನ್ನು ಖಚಿತಪಡಿಸಬೇಕು.
ಸಾಧ್ಯತೆಯಿರುವ ಎಲ್ಲ ಸಂಸ್ಥೆಗಳಲ್ಲೂ ಪ್ರವೇಶ ದ್ವಾರಗಳಲ್ಲಿ ವಾಷ್ ಬೇಸಿನ್ಗಳು, ಸಾಬೂನು, ಹ್ಯಾಂಡ್ವಾಷ್, ನೀರು ಇತ್ಯಾದಿ ಸಜ್ಜುಗೊಳಿಸಬೇಕು. ಕೈತೊಳೆಯುವ ಅಭ್ಯಾಸವನ್ನು ಗರಿಷ್ಠ ಮಟ್ಟದಲ್ಲಿ ಪೆÇ್ರೀತ್ಸಾಹಿಸಬೇಕು. ನೌಕರಿ , ಆರೋಗ್ಯ ಖಾತೆಗಳು, ಇತರ ಸರಕಾರಿ ಸಂಸ್ಥೆಗಳು, ಚೀಫ್ ಪ್ಲಾಟೇಷನ್ ಇನ್ಸ್ ಪೆಕ್ಟರ್, ಫ್ಯಾಕ್ಟರೀಸ್, ಡೈರೆಕ್ಟರ್ ಮೊದಲಾದವರು ಸುರಕ್ಷಾಸಲಹೆಗಳನ್ನು ಆಯಾ ಜಿಲ್ಲಾಧಿಕಾರಿಗಳು ಪ್ರಕಟಿಸುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ನೌಕರಿ ಮಾಲೀಕರು 20-03.2020 ರಿಂದ 10.04.2020 ವರೆಗಿನ ಕಾಲಾವಧಿಯಲ್ಲಿ ಸಂಸ್ಥೆಗಳಲ್ಲಿ ಚಟುವಟಿಕೆ ನಡೆಸಿದ ಸಂಬಂಧ ಮಾಹಿತಿಗಳನ್ನು ಸಂಗ್ರಹಿಸಿ ಇರಿಸಬೇಕು. ಇದು ನೌಕರಿ ಇಲಾಖೆ ಪ್ರಕಟಿಸಿರುವ ಪ್ರಫೆÇೀರ್ಮಾದಲ್ಲಿ ಆಯಾ ಜಿಲ್ಲಾ ಲೇಬರ್ ಆಫೀಸರ್ ಗಳಿಗೆ ನೀಡಬೇಕು.
ಇತರ ರಾಜ್ಯಗಳ ಕಾರ್ಮಿಕರ ಶಿಬಿರಗಳು(ವಸತಿ ಸೌಲಭ್ಯ), ಆಹಾರ ವ್ಯವಸ್ಥೆಗಳು, ನೌಕರಿ ಮಾಲೀಕರು/ಗುತ್ತಿಗೆದಾರರು ಒದಗಿಸಬೇಕು. ಮಾಹಿತಿಗಳು ನೌಕರಿ ಇಲಾಖೆ ನೀಡುವ ಪ್ರಫೆÇೀರ್ಮಾದಲ್ಲಿ ಆಯಾ ಜಿಲ್ಲಾ ಲೇಬರ್ ಅಧಿಕಾರಿಗೆ ನೀಡಬೇಕು.
ಕಾರ್ಮಿಕರು ಸರಕಾರದ ವವಿಧ ಇಲಾಖೆಗಳ ಮೂಲಕ ನೀಡುವ ಮಾಹಿತಿಗಳನ್ನು ಬಳಸಿ ಕೋವಿಡ್-19 ಹರಡುತ್ತಿರುವ ಬಗ್ಗೆ, ಪ್ರತಿರೋದ ಚಟುವಟಿಕೆಗಳ ಬಗ್ಗೆ ಖಚಿತವಾಗಿ ನವರಿಕೆ ಆಡಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುತ್ತಿರುವ ಕೆಲವು ತಪ್ಪು ಮಾಹಿತಿಗಳನ್ನು ನಂಬಕೂಡದು ಮತ್ತು ಅವನ್ನು ಇತರರಿಗೆ ರವಾನಿಸಕೂಡದು. ಸರಕಾರದ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಾಗರೂಕತೆ ಪಾಲಿಸಬೇಕು. ಗುಂಪುಸೇರಕೂಡದು. ಯಾತ್ರೆಗಳನ್ನು ಗರಿಷ್ಟ ಮಟ್ಟದಲ್ಲಿ ಕೈಬಿಡಬೇಕು. ಯಾವುದೇ ರೀತಿಯ ರೋಗಲಕ್ಷಣಕಂಡುಬಮದಲ್ಲಿ ಸ್ವಯಂ ನಿಯಂತ್ರಣ ಪಾಲಿಸಿ , ಜನಸಂಪರ್ಕ ತಪ್ಪಿಸಿ, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಸಲಹೆಗಳನ್ನು ಪಾಲಿಸಬೇಕು. ನೌಕರಿ ಸಂಬಂಧ ವಿವಾದಗಳು, ಮುಷ್ಕರಗಳು ಇತ್ಯಾದಿ ಈ ಸಂದರ್ಭ ನಡೆಸಕೂಡದು. ರೋಗ ಸಂಬಂಧ ತಲೆದೋರಿರುವ ಮುಗ್ಗಟ್ಟು ಪರಿಹರಿಸುವ ನಿಟ್ಟಿನಲ್ಲಿ ಜತಗೂಡಿ ನೌಕರಿ ಮಾಲೀಕರಿಗೆ ಸಹಾಯಮಾಡಬೇಕು ಎಂದು ಲೇಬರ್ ಕಮೀಷನರ್ ಸಕ್ರ್ಯುಲರ್ ನಲ್ಲಿ ತಿಳಿಸಿದರು.


