HEALTH TIPS

ಕರೊನಾ ನಿಯಂತ್ರಣ : ಜಿಲ್ಲೆಗೆ ಹೆಚ್ಚುವರಿ ಪೆÇಲೀಸ್

 
         ಕಾಸರಗೋಡು: ಮಾರಣಾಂತಿಕ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲು ಪೆÇಲೀಸ್ ಇಲಾಖೆ ಮುಂದಾಗಿದ್ದು, ಇದರಂತೆ ಕಾಸರಗೋಡು ಜಿಲ್ಲೆಗೆ ಹೆಚ್ಚವರಿ ಪೆÇಲೀಸರನ್ನು ನೇಮಿಸಲಾಗುವುದು.
     ಸರ್ಕಾರದ ಆದೇಶಗಳನ್ನು ಮತ್ತು ನಿಯಂತ್ರಣಗಳನ್ನು ಪಾಲಿಸಲು ಹೆಚ್ಚುವರಿ ಪೆÇಲೀಸರು ಅಗತ್ಯವಾಗಿದೆ ಎಂದು ಕಂಡುಕೊಂಡು ಹೆಚ್ಚುವರಿ ಪೆÇಲೀಸರನ್ನು ನೇಮಿಸಲಾಗುವುದೆಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು ಅವರು ಹೇಳಿದ್ದಾರೆ. ಉತ್ತರ ವಲಯ ಐ.ಜಿ.ಅಶೋಕ್ ಯಾದವ್, ಎರ್ನಾಕುಳಂ ಸಿಟಿ ಪೆÇಲೀಸ್ ಕಮೀಷನರ್ ವಿಜಯ ಸಖಾರೆ, ಡಿಐಜಿ ಸೇತುರಾಮನ್, ಕೋಟ್ಟಯಂ ಕ್ರೈಂಬ್ರಾಂಚ್ ಎಸ್.ಪಿ.ಸಾಬು ಮ್ಯಾಥ್ಯೂ, ಟೆಲಿಕಮ್ಯೂನಿಕೇಶನ್ ಎಸ್.ಪಿ. ಡಿ.ಶಿಲ್ಪಾ ಅವರು ಪೆÇಲೀಸ್ ಪಡೆಗೆ ನೇತೃತ್ವ ನೀಡುವರು.
    ಅನಗತ್ಯವಾಗಿ ಮನೆಯಿಂದ ಹೊರಗೆ ಬಂದು ತಿರುಗಾಡುವವರನ್ನು ಬಂಧಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 10 ವಾಹನಗಳಲ್ಲಿ 50 ಮಂದಿ ಪೆÇಲೀಸರನ್ನು ನೇಮಿಸಲಾಗುವುದು. ಮನೆಯಿಂದ ಹೊರಗೆ ಬಂದವರನ್ನು ಪ್ರಶ್ನಿಸಿ ಅವರು ಯಾಕಾಗಿ ಮನೆಯಿಂದ ಹೊರಗೆ ಬಂದಿದ್ದಾರೆ ಎಂದು ವಿಚಾರಿಸಿ ಅಗತ್ಯಕ್ಕೆ ಬಂದ ಬಗ್ಗೆ ಸ್ಪಷ್ಟವಾದರೆ ಮಾತ್ರವೇ ಕಳುಹಿಸಲಾಗುವುದು. ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಅಂಗಡಿಗಳಿಂದ ಅವಶ್ಯ ಸಾಮಾಗ್ರಿಗಳನ್ನು ಖರೀದಿಸಲು ಹೋಗುವ ಗ್ರಾಹಕರನ್ನು ಪೆÇಲೀಸರು ಅಂಗಡಿಯ ಮುಂದೆ ನಿಯಂತ್ರಿಸುವರು.
     ಕಾಸರಗೋಡು ಜಿಲ್ಲೆಯಲ್ಲಿ ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯ ವರೆಗೆ ಬೇಕರಿಗಳು ತೆರೆದು ಕಾರ್ಯಾಚರಿಸಬೇಕೆಂದು ಜಿಲ್ಲಾಧಿಕಾರಿ ಡಾ|ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಆದರೆ ಬೇಕರಿ ಅಂಗಡಿಗಳಲ್ಲಿ ಚಾಯ, ಕಾಫಿ ಸಹಿತ ಪಾನೀಯಗಳನ್ನು ವಿತರಿಸಬಾರದು. ಯಾವುದೇ ಕಾರಣಕ್ಕೂ ಅಂಗಡಿಗಳಲ್ಲಿ ಗುಂಪು ಸೇರಬಾರದೆಂದು ಮನವಿ ಮಾಡಿದ್ದಾರೆ.
      ಜನರು ಅನಾವಶ್ಯವಾಗಿ ಪೇಟೆಗೆ ಬಾರದೆ ಮನೆಯಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದ ಅವರು ಅಗತ್ಯ ಸಾಮಾಗ್ರಿಗಳಿಗೆ ಅಂಗಡಿಗಳಿಗೆ ಬರುವವರು ಪೆÇಲೀಸರು ನೀಡುವ ನಿರ್ದೇಶವನ್ನು ಪಾಲಿಸಬೇಕೆಂದೂ ತಿಳಿಸಿದ್ದಾರೆ. ಅಂಗಡಿಗಳಲ್ಲಿ ಒಂದು ಮೀಟರ್ ಅಂತರ ಕಾಯ್ದುಕೊಂಡು ಕ್ಯೂ ನಿಲ್ಲಬೇಕು. ಚಿಕನ್, ಮೊಟ್ಟೆ, ಬೀಫ್ ಅಂಗಡಿಗಳೂ ತೆರೆಯಬೇಕು. ಅಂತಹ ಅಂಗಡಿಗಳಲ್ಲಿ ಗುಂಪು ಸೇರಿದರೆ ಆ ಅಂಗಡಿಗಳನ್ನು ಮುಚ್ಚಲು ನಿರ್ದೇಶ ನೀಡಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
       ಕಾಸರಗೋಡಿನಲ್ಲಿ ನಿಯಂತ್ರಣ ಉಲ್ಲಂಘಿಸಿದ ಇಬ್ಬರು ಕೊರೊನಾ ವೈರಸ್ ಸೋಂಕು ಬಾಧಿತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುಲಾಗುವುದು. ಪಾಸ್‍ಪೆÇೀರ್ಟ್ ಮಾಹಿತಿ ಕಲೆ ಹಾಕಲು ನಿರ್ದೇಶ ನೀಡಲಾಗಿದೆ. ರೋಗ ಹರಡಿದ್ದರೂ ನಿಯಂತ್ರಣ ಪಾಲಿಸದೆ ತಿರುಗಾಡಿದ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವಿದೇಶಕ್ಕೆ ಹೋಗುವುದನ್ನು ತಡೆಯುವ ಸಹಿತ ಕ್ರಮ ತೆಗೆದುಕೊಳ್ಳಲು ಚಿಂತಿಸಲಾಗುತ್ತಿದೆ.
      ವಿದೇಶದಿಂದ ಬರುವವರು ನಿರ್ಬಂಧವಾಗಿ ನಿಯಂತ್ರಣವನ್ನು  ಪಾಲಿಸಬೇಕು. ಅವರೆಲ್ಲಾ ನಿಗಾದಲ್ಲಿರಬೇಕು. ನಿಗದಿತ ದಿನಗಳ ತನಕ ಐಸೋಲೇಶನ್‍ನಲ್ಲಿರಬೇಕು. ಈ ಸಂದರ್ಭದಲ್ಲಿ ಯಾರೊಂದಿಗೂ ಸಂಪರ್ಕ ಬೆಳೆಸಬಾರದು. ಸರಕಾರಿ ಆದೇಶಗಳನ್ನು ಪಾಲಿಸದವರ ವಿರುದ್ಧ ಪಾಸ್‍ಪೆÇೀರ್ಟ್ ರದ್ದು ಮಾಡುವ ಸಹಿತ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.
2470 ಮಂದಿ ನಿಗಾದಲ್ಲಿ : ಕೊರೊನಾ ವೈರಸ್ ಹರಡುತ್ತಿರುವಂತೆ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 38 ಮಂದಿಗೆ ಸೋಂಕು ಬಾ„ಸಿದೆ. ಜಿಲ್ಲೆಯಲ್ಲಿ 2470 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 61 ಮಂದಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‍ಗಳಲ್ಲಿದ್ದಾರೆ. 825 ಮಂದಿಯನ್ನು ಕೊರೊನಾ ನಿಯಂತ್ರಣಕ್ಕಿರುವ ಜಿಲ್ಲಾ ಕೇಂದ್ರದಲ್ಲಿ ನೇರವಾಗಿ ನಿಗಾದಲ್ಲಿದ್ದಾರೆ. ಉಳಿದ 1584 ಮಂದಿ ವಿವಿಧ ಪಂಚಾಯತ್, ನಗರಸಭೆ ವಾರ್ಡ್‍ಗಳ ಜಾಗ್ರತಾ ಸಮಿತಿಗಳ ನೇತೃತ್ವದಲ್ಲಿ ನಿಗಾದಲ್ಲಿದ್ದಾರೆಂದು ಡಿ.ಎಂ.ಒ. ಡಾ|ಎ.ವಿ.ರಾಮದಾಸ್ ತಿಳಿಸಿದ್ದಾರೆ.
ವಿದೇಶದಿಂದ ಬಂದವರು ಪೆÇಲೀಸ್ ನಿಗಾದಲ್ಲಿ : ವಿದೇಶಗಳಿಂದ ಮಾರ್ಚ್ 1 ರಿಂದ ಕಾಸರಗೋಡು ಜಿಲ್ಲೆಗೆ ತಲುಪಿದವರ ಹೆಸರು ಸಹಿತ ಪೂರ್ಣ ವಿವರಗಳನ್ನು ಜಿಲ್ಲಾ ಪೆÇಲೀಸರು ಸಂಗ್ರಹಿಸಿದ್ದಾರೆ. 4000 ದಷ್ಟು ಮಂದಿ ಮಂಗಳೂರು, ಕಣ್ಣೂರು, ಕರಿಪ್ಪೂರ್, ನೆಡುಂಬಾಶ್ಶೇರಿ, ತಿರುವನಂತಪುರ ವಿಮಾನ ನಿಲ್ದಾಣಗಳ ಮೂಲಕ ಬಂದವರಾಗಿದ್ದಾರೆ.
     ಇವರ ಮನೆಗಳಿಗೆ ಆಯಾಯ ಪೆÇಲೀಸ್ ಠಾಣೆಗಳ ಪೆÇಲೀಸರು ತೆರಳಿ ಅವರ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಂತವರು ಪೆÇಲೀಸ್ ನಿಗಾದಲ್ಲಿರುತ್ತಾರೆ. ನಿರೀಕ್ಷಣಾ ಕಾಲಾವ„ಗೂ ಮುನ್ನವೇ ಹೊರಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಉತ್ತರ ವಲಯ ಡಿಐಜಿ ಸೇತುರಾಮನ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಪೆÇಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
      (ಚಿತ್ರ ಮಾಹಿತಿ:  ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ನಗರದಲ್ಲಿ ಶುಚೀಕರಣ,  ಪೆÇಲೀಸರಿಂದ ಮಾಹಿತಿ ಸಂಗ್ರಹ, : ನಿಯಂತ್ರಣ ಸಮಯದಲ್ಲಿ ರಸ್ತೆಗಿಳಿದ ಯುವಕನಿಗೆ ಎಚ್ಚರಿಕೆ ನೀಡುವ ಪೆÇಲೀಸ್,  ಹಾಲು ಇಳಿಸುತ್ತಿರುವುದು,  ಬಿಕೋ ಎನ್ನುತ್ತಿದ್ದ ನುಳ್ಳಿಪ್ಪಾಡಿ ರಾ.ಹೆದ್ದಾರಿ, : ಪೆÇಲೀಸರಿಂದ ಲಾರಿ ತಪಾಸಣೆ,  ವಿಶ್ರಾಂತಿಯಿಲ್ಲದೆ 108 ಆ್ಯಂಬುಲೆನ್ಸ್ ಸರ್ವೀಸ್, : ಮಾಸ್ಕ್ ಧರಿಸಿ ಆ್ಯಂಬುಲೆನ್ಸ್ ಚಲಾಯಿಸುವ ಚಾಲಕ,  ಕಾಸರಗೋಡಿಗೆ ಹೆಚ್ಚುವರಿ ಪೆÇಲೀಸ್, : ಕಾಸರಗೋಡು ಸಿ.ಐ.ಯಿಂದ ಮಾರ್ಗದರ್ಶನ,  : ಕಾಸರಗೋಡು ನಗರಠಾಣೆಯ ಎಸ್.ಐ. ಅಜಿತ ಕೆ. ಅವರು ರಸ್ತೆಯಲ್ಲಿ ಅನಗತ್ಯವಾಗಿ ತಿರುಗುವವರ ವಿರುದ್ಧ ಕ್ರಮ,  ಬಿಕೋ ಎನ್ನುತ್ತಿರುವ ಕಾಸರಗೋಡು ಹೊಸ ಬಸ್ ನಿಲ್ದಾಣ,  ಕರಂದಕ್ಕಾಡ್‍ನಲ್ಲಿ ರಸ್ತೆಗಿಳಿದವರನ್ನು ಚದುರಿಸುತ್ತಿರುವ ಪೆÇಲೀಸರು) 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries