ಕಾಸರಗೋಡು: ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕು ತಡೆಯುವ ವಿಷಯದಲ್ಲಿ ಸ್ಥಿತಿಗತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ತಿಳಿಸಿದ್ದಾರೆ. ಇದಕ್ಕಾಗಿ ಜನರ ಸಹಕರ ಅತ್ಯಗತ್ಯ ಬೇಕೆಂದು ಹೇಳಿದರು.
ಅನಗತ್ಯವಾಗಿ ಜನರು ಮನೆಯಿಂದ ಹೊರಗೆ ಬರಬಾರದು. ಅವಶ್ಯ ಸಾಮಗ್ರಿಗಳಿಗೆ ಯಾವುದೇ ಕೊರತೆಯಿಲ್ಲ ಎಂದ ಅವರು ಸಾಮಗ್ರಿಗಳನ್ನು ಇಳಿಸುವ ತಲೆಹೊರೆ ಕಾರ್ಮಿಕರು ಎಲ್ಲಾ ಸಹಾಯ ಮತ್ತು ಭರವಸೆ ನೀಡಿದ್ದಾರೆ. ಅಗತ್ಯವಿದ್ದಲ್ಲಿ ಪೆÇಲೀಸರು ಸಾಮಗ್ರಿ ಇಳಿಸುವ ಕೆಲಸಕ್ಕೆ ಪೆÇಲೀಸರ ನೆರವನ್ನು ಪಡೆಯಲಾಗುವುದು. ಇನ್ನು ಯಾವುದೇ ಕಾರಣಕ್ಕೂ ವಿನಂತಿಯಿಲ್ಲ. ಆ್ಯಕ್ಷನ್ ಮಾತ್ರವೇ ಇದೆ ಎಂದೂ, ಇದಕ್ಕಾಗಿ ಪೆÇಲೀಸರು ಸಜ್ಜಾಗಿದ್ದಾರೆಂದರು.
ನಿಯಂತ್ರಣವನ್ನು ಉಲ್ಲಂಘಿಸಿದ ಹಲವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನು ಉಲ್ಲಂಘಿಸಿದ ಇಬ್ಬರು ಮುಂದಿನ ದಿನಗಳಲ್ಲಿ ಕೊಲ್ಲಿ ರಾಷ್ಟ್ರಕ್ಕೆ ಹೋಗುವ ಹಾಗಿಲ್ಲ. ಅವರ ಪಾಸ್‍ಪೆÇೀರ್ಟ್ ರದ್ದುಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ಮೂರು ದಿನಗಳಲ್ಲಿ ಎಲ್ಲಾ ನಿಯಂತ್ರಣಕ್ಕೆ ಸಾಧ್ಯವಾಗಿದೆ. ಪ್ರಾದೇಶಿಕ ಮಟ್ಟದಲ್ಲಿ ಜಾಗೃತಿ ಸಮಿತಿಗಳ ನಿರ್ವಹಣೆಯ ಫಲವಾಗಿ ವಿದೇಶದಿಂದ ಬಂದವರ ಯಾದಿ ತಯಾರಿಸಲಾಗುತ್ತಿದೆ ಎಂದರು.

