HEALTH TIPS

ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಕೋಟಿ ರೂ. ಅನುದಾನ- ನೂತನ ಕಟ್ಟಡ ನಿರ್ಮಾಣ


      ಕಾಸರಗೋಡು: ಕಳೆದ ಹಲವು ವರ್ಷಗಳಿಂದ ಸಾಕಷ್ಟು ಸೌಕರ್ಯಗಳಿಲ್ಲದೆ ಸಮಸ್ಯೆ ಎದುರಿಸುತ್ತಿದ್ದ ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಕೋಟ ರೂ. ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗುವುದು.
       ಜಿಲ್ಲೆಯಲ್ಲಿ ಅತ್ಯಧಿಕ ರೋಗಿಗಳು ಆಶ್ರಯಿಸಿರುವ ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯದ ಮೂಲಭೂತ ಸೌಲಭ್ಯಗಳಿಲ್ಲದಿದ್ದುದರಿಂದ ರೋಗಿಗಳು ಮತ್ತು ಸಿಬ್ಬಂದಿಗಳು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಸಮಸ್ಯೆಗಳಿಗೆ ಪರಿಹಾರವಾಗಿ ನೂತನ ಕಟ್ಟಡ ತಲೆಯೆತ್ತಲಿದೆ.
      ಗ್ರಾಮ ಪಂಚಾಯತ್ ಆಡಳಿತ ಸಮಿತಿ ವಿಶೇಷ ಆಸಕ್ತಿಯಿಂದ ಪ್ರಯತ್ನಿಸಿದ ಫಲವಾಗಿ ಈ ಕಟ್ಟಡ ನಿರ್ಮಾಣಕ್ಕೆ ಆಡಳಿತಾನುಮತಿ ಲಭಿಸಿದೆ. ನೂತನ ಆಡಳಿತ ಸಮಿತಿ ಅ„ಕಾರಕ್ಕೆ ಬಂದ ತತ್‍ಕ್ಷಣದಿಂದ ಅಧ್ಯಕ್ಷೆ ಶಾಹೀನಾ ಸಲೀಂ ಅವರ ನೇತೃತ್ವದಲ್ಲಿ ಪ್ರಥಮವಾಗಿ ಪರಿಗಣಿಸಿದ ವಿಷಯಗಳಲ್ಲೊಂದಾಗಿತ್ತು ಪಿಎಚ್‍ಸಿ ಅಭಿವೃದ್ಧಿ. ನಿರಂತರವಾಗಿ ಸರಕಾರಕ್ಕೆ ಮನವಿ ಸಲ್ಲಿಕೆ ಮತ್ತು ಸರಕಾರದೊಂದಿಗೆ ನಿರಂತರ ಸಂಪರ್ಕದಿಂದಾಗಿ ಪಿಎಚ್‍ಸಿ ಅಭಿವೃದ್ಧಿ ಗೈಗೆತ್ತಿಕೊಳ್ಳಲು ಸಾಧ್ಯವಾಗಿದೆ.
        ಅತ್ಯಾಧುನಿಕ ಸೌಕರ್ಯ :
    ನೂತನ ಕಟ್ಟಡದಲ್ಲಿ ನಾಲ್ಕು ಮಂದಿ ವೈದ್ಯರ ತಪಾಸಣಾ ಕೊಠಡಿ, ವಿಶಾಲವಾದ ಅಂಗಣ, ರೋಗ ಪ್ರತಿರೋಧ ಚುಚ್ಚು ಮದ್ದು ನೀಡಿಕೆ ಹಾಲ್, ಫಾರ್ಮಸಿ, ಲ್ಯಾಬ್, ಪಾಲಿಯೇಟಿವ್ ವಿಂಗ್, ಪಬ್ಲಿಕ್ ಹೆಲ್ತ್ ವಿಂಗ್, ಕಚೇರಿ, ಕಾನರೆನ್ಸ್ ಹಾಲ್, ಜೀವನ ಶೈಲಿ ರೋಗ ಚಿಕಿತ್ಸೆ ಸೌಕರ್ಯ, ವಿಶಾಲವಾದ ಪಾರ್ಕಿಂಗ್ ಸೌಕರ್ಯ ಮೊದಲಾದವುಗಳು ಲಭ್ಯವಿರುವುದು. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಪಿಎಚ್‍ಸಿಯಲ್ಲಿ ಹೂದೋಟ ನಿರ್ಮಾಣವೂ ನಡೆಯಲಿದೆ.
     ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿ ಅಂಗೀಕಾರ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries