HEALTH TIPS

ತೆಂಗಿನ ಗರಿ ತಿನ್ನುವ ಕೀಟಗಳ ವಿರುದ್ಧ ಜೈವಿಕ ನಿಯಂತ್ರಣ ಕಾರ್ಯಾಗಾರ


         ಕಾಸರಗೋಡು: ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯತ್ ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿನ ತೆಂಗಿನ ತೋಟಗಳಲ್ಲಿ ತೆಂಗಿನ ಗರಿ ತಿನ್ನುವ ಕ್ಯಾಟರ್ಪಿಲ್ಲರ್ ಎಂಬ ಕೀಟ ಪತ್ತೆಯಾಗಿದೆ.  ತೆಂಗಿನ ಗರಿಗಳ ಕೆಳಭಾಗದ ಹರಿತವನ್ನು ತಿನ್ನುತ್ತದೆ. ಇದರಿಂದಾಗಿ ತೆಂಗು ಗರಿಯ ಮೇಲ್ಭಾಗ ಬಿಳಿ ಬಣ್ಣಕ್ಕೆ ಬದಲಾಗುತ್ತದೆ. ಇದು ತೆಂಗು ಇಳುವರಿ ಕಡಿಮೆಯಾಗಲು ಕಾರಣವಾಗುತ್ತದೆ.
     ತೆಂಗಿಗೆ ಮಾರಕವಾಗಿರುವ ಕೀಟ ನಿಯಂತ್ರಣಕ್ಕೆ ಜೈವಿಕ ರೀತಿಯನ್ನು ಬಳಸುವ ಕುರಿತಾಗಿ ಕಾರ್ಯಾಗಾರ ಚೌಕಿಯಲ್ಲಿ ನಡೆಯಿತು.
        ಕೇಂದ್ರ ತೋಟ ಬೆಳೆ ಸಂಶೋಧನಾ ಸಂಸ್ಥೆ (ಸಿಪಿಸಿ ಆರ್ ಐ) ಕೃಷಿ ಇಲಾಖೆಯ ಸಹಯೋಗದೊಂದಿಗೆ ಚೌಕಿಯಲ್ಲಿ ಆಯೋಜಿಸಿತು. ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್, ಸಿಪಿಸಿಆರ್‍ಐ ನಿರ್ದೇಶಕಿ ಡಾ.ಅನಿತಾ ಕರುಣ್, ಕಾಸರಗೋಡು ಪ್ರಧಾನ ಕೃಷಿ ಅ„ಕಾರಿ ಸಜನಿ ಮೋಲ್  ಕೆ, ಕೃಷಿ ಅಧಿಕಾರಿ ನರಸ್ಮಲು, ಸಿಪಿಸಿ ಆರ್ ಐ ವಿಜ್ಞಾನಿಗಳಾದ ಡಾ.ವಿನಾಯಕ ಹೆಗ್ಡೆ, ಡಾ.ಕೆ.ಮುರಳಿಧರನ್, ಡಾ.ತಂಬನ್ ಸಿ. ಮತ್ತು ಡಾ.ಪಿ.ಎಸ್. ಪ್ರತಿಭಾ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries