ಮಂಜೇಶ್ವರ/ ಉಪ್ಪಳ: ಮಾರಣಾಂತಿಕ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮುಂದಿನ ಆದೇಶ ಬರುವ ತನಕ 144 ಕಾಯ್ದೆಯಂತೆ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಿಂದಾಗಿ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಈ ಹಿಂದೆ ಸೂಚಿಸಿದಂತೆ ಬೆಳಗ್ಗೆ 11 ಗಂಟೆಯಿಂದ ಸಂಜೆ ಐದು ಗಂಟೆಯ ವರೆಗೆ ಮಾತ್ರವೇ ಅತ್ಯಗತ್ಯ ಸಾಮಗ್ರಿಗಳ ಅಂಗಡಿಗಳನ್ನು ತೆರೆದು ಕಾರ್ಯಾಚರಿಸಬಹುದೆಂಬ ನಿರ್ದೇಶದಂತೆ ಸೋಮವಾರ ಈ ಆದೇಶವನ್ನು ಎಲ್ಲೆಡೆ ಪಾಲಿಸಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಅವರು ಸಿ.ಆರ್.ಪಿ.ಸಿ. 114 ಪ್ರಕಾರ ಜಿಲ್ಲೆಯಲ್ಲಿ ನಿಷೇದಾಜ್ಞೆಯನ್ನು ಮಾ.22 ರಂದು ರಾತ್ರಿಯಿಂದ ಜಾರಿಗೊಳಿಸಿದ್ದರು. ಜಿಲ್ಲೆಯ 17 ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲೂ ಎಲ್ಲಾ ಗೃಹ, ಸಾರ್ವಜನಿಕ ಸಂಚಾರ ಸೌಲಭ್ಯಗಳೂ, ಅನಿವಾರ್ಯ ಸಾಮಾಗ್ರಿಗಳಲ್ಲದೇ ಇರುವ ಎಲ್ಲ ವ್ಯಾಪಾರ ಸಂಸ್ಥೆಗಳು, ಕ್ಷೌರದಂಗಡಿಗಳು, ಬ್ಯೂಟಿ ಪಾರ್ಲರ್‍ಗಳು, ಸಾರ್ವಜನಿಕ ಕೇಂದ್ರಗಳಲ್ಲಿ ಗುಂಪು ಸೇರುವುದು, ಅನಾವಶ್ಯಕ ಅಲೆದಾಟ, ಎಲ್ಲ ಆರಾಧನಾಲಯ, ಧಾರ್ಮಿಕ ಸಂಸ್ಥೆಗಳು, ಕ್ಲಬ್‍ಗಳು, ಚಲನಚಿತ್ರ ಮಂದಿರಗಳು, ಉದ್ಯಾನಗಳು ಸಹಿತ ಮನರಂಜನೆ ಕೇಂದ್ರಗಳು ಮುಂದಿನ ಆದೇಶ ಪ್ರಕಟಗೊಳ್ಳುವ ತನಕ ಮುಚ್ಚುಗಡೆಯಲ್ಲಿರುವುವು. ಆದರೆ ಸರ್ಕಾರ ನೀಡಿರುವ ಆದೇಶ ಪ್ರಕಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಹಾಲಿನ ಬೂತ್‍ಗಳು, ಪಡಿತರ ಅಂಗಡಿಗಳು, ಪೆಟ್ರೋಲ್ ಬಂಕ್‍ಗಳು, ಮೆಡಿಕಲ್ ಸ್ಟೋರ್‍ಗಳು, ಆಹಾರ ಖಾದ್ಯಗಳು ಲಭಿಸುವ ವ್ಯಾಪಾರ ಸಂಸ್ಥೆಗಳು ಇತ್ಯಾದಿ ಚಟುವಟಿಕೆ ನಡೆಸಬಹುದಾಗಿದೆ. ಆದರೆ ಅಂಥಾ ಅಂಗಡಿಗಳಲ್ಲಿ ಜನ ಕನಿಷ್ಠ ಒಂದೂವರೆ ಮೀ. ಅಂತರ ಪಾಲಿಸಬೇಕು. ಸಾನಿಟೈಸರ್, ಮಾಸ್ಕ್ ಇತ್ಯಾದಿ ಬಳಸಿ ನಂತರವಷ್ಟೇ ಅಂಗಡಿಗಳ ಪ್ರವೇಶ ನಡೆಸಬೇಕು. ಈ ನಿಟ್ಟಿನಲ್ಲಿ ಪೆÇಲೀಸರು ಖಚಿತಪಡಿಸಿಕೊಳ್ಳಲಿದ್ದಾರೆ.
ಇದರಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಗುಂಪು ಸೇರುವುದು, ಅನಾವಶ್ಯಕ ಅಲೆದಾಟ ನಡೆಸಕೂಡದು ಎಂಬ ಆದೇಶ ಉದ್ಯೋಗ ಖಾತರಿ ಯೋಜನೆ ಕಾರ್ಮಿಕರಿಗೆ, ಸರ್ಕಾರ ನಿಯೋಜಿಸಿರುವ ಸ್ವಯಂ ಸೇವಾ ಕಾರ್ಯಕರ್ತರಿಗೆ ಜನಜಾಗೃತಿ ಕಾರ್ಯಕರ್ತರಿಗೆ ವಾರ್ಡ್ ಮಟ್ಟದ ಆರೋಗ್ಯ ಕಾರ್ಯಕರ್ತರಿಗೆ, ಮೊಬೈಲ್ ಫೆÇೀನ್ ಸೇವೆ ಖಚಿತಪಡಿಸಲು ನೇಮಕಗೊಂಡವರಿಗೆ ಅನ್ವಯವಾಗುವುದಿಲ್ಲ. ಇವರ ಗುರುತು ಚೀಟಿ ಪರಿಶೀಲಿಸಿ ಪೆÇಲೀಸರು ಈ ಸಂಬಂಧ ಖಚಿತಪಡಿಸಿಕೊಳ್ಳಬೇಕು.
ಡಿ.ಐ.ಜಿ. ಕಾಸರಗೋಡಿಗೆ : ಜಿಲ್ಲೆಯಲ್ಲಿ ಕೋವಿಡ್-19 ಪ್ರತಿರೋಧಕ ಕ್ರಮದಂತೆ ಪೆÇಲೀಸರಿಗೆ ವಹಿಸಿಕೊಡಲಾಗಿರುವ ಹೊಣೆ ಮತ್ತು ಆ ವಿಷಯದಲ್ಲಿ ಅವರ ಕರ್ತವ್ಯ ನಿರ್ವಹಣೆಗಳ ಬಗ್ಗೆ ಅವಲೋಕಿಸಲು ಡಿಐಜಿ ಸೇತುರಾಮನ್ ಕಾಸರಗೋಡಿಗೆ ಆಗಮಿಸಿದ್ದಾರೆ. ಜಿಲ್ಲಾ ಪೆÇಲೀಸ್ ಕಚೇರಿಗೆ ಆಗಮಿಸಿದ ಅವರು ವರಿಷ್ಠ ಪೆÇಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅಗತ್ಯದ ನಿರ್ದೇಶ ನೀಡಿದ್ದಾರೆ.
(ಚಿತ್ರ ಮಾಹಿತಿ : ಪೆÇಲೀಸ್ ಬಂದೋಬಸ್ತು, ಅನಗತ್ಯವಾಗಿ ನಗರದಲ್ಲಿ ಸುತ್ತಾಡುವವರನ್ನು ಮನೆಗೆ ತೆರಳುವಂತೆ ಸೂಚಿಸುತ್ತಿರುವುದು, : ಪೆÇಲೀಸರು ಸಾನಿಟೈಸರ್ ಬಳಸಿ ಕೈತೊಳೆಯುವುದು, : ಜಿಲ್ಲಾಧಿಕಾರಿ ಮಾರ್ಗದರ್ಶನ, ಜಿಲ್ಲಾಧಿಕಾರಿ ರಂಗಕ್ಕಿಳಿದು ಅನಗತ್ಯವಾಗಿ ವಾಹನಗಳಲ್ಲಿ ತಿರುಗುವವರನ್ನು ತೆರಳಲು ತಿಳಿಸುತ್ತಿರುವುದು,ಒಂದು ಮೀಟರ್ ದೂರದಲ್ಲಿ ನಿಂತು ಸುಪರ್ ಬಜಾರ್‍ನಿಂದ ಸಾಮಗ್ರಿ ಖರೀದಿಸುತ್ತಿರುವುದು, ಔಷಧಿ ಅಂಗಡಿಯಲ್ಲಿ ಔಷಧಿಗಾಗಿ ಉದ್ದನೆಯ ಕ್ಯೂ, : ತರಕಾರಿ ಅಂಗಡಿಯಲ್ಲಿ ಖರೀದಿ, : ಮಾರುಕಟ್ಟೆಯಲ್ಲಿ ಭಾರೀ ಜನಸಂದಣಿ, : ಪೆಟ್ರೋಲ್ ಬಂಕ್‍ನಲ್ಲಿ ಉದ್ದನೆಯ ಕ್ಯೂ)
(ಚಿತ್ರಗಳು:Éಕ್ಷನ್ 144 ಜಾರಿಯಲ್ಲಿದ್ದರೂ ಸರತಿಯಲ್ಲಿ ನಿಂತಿರುವ ಮುಳ್ಳೇರಿಯ ಬಿವರೇಜ್ ಮದ್ಯದಂಗಡಿ-ಔಟ್ ಲೆಟ್ ನಲ್ಲಿ ಜನರು, ನೀರ್ಚಾಲು ಪೇಟೆ ಸೋಮವಾರ ಸಂಜೆ ಐದು ಗಂಟೆಯ ವೇಳೆಗೆ ದಿನಸಿ ವಸ್ತುಗಳಿಗೆ ಜನರು ಆಗಮಿಸಿರುವುದು.)




