ಕಾಸರಗೋಡು: ಜಿಲ್ಲೆಯ ಎಲ್ಲ ವ್ಯಾಪಾರ ಸಂಸ್ಥೆಗಳು ಸರ್ಕಾರದ ಆದೇಶ ಪ್ರಕಾರ ಚಟುವಟಿಕೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕೊರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲಲಿ ನಡೆಸಲಾಗುತ್ತಿರುವ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಎಲ್ಲ ವ್ಯಾಪಾರ ಸಂಸ್ಥೆಗಳೂ ರಾಜ್ಯ ಸರಕಾರ ತಿಳಿಸಿದ ನಿಬಂಧನೆ ಪ್ರಕಾರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಮಾತ್ರ ತೆರೆದು ಚಟುವಟಿಕೆ ನಡೆಸಬೇಕು. ಈ ಆದೇಶ ಉಲ್ಲಂಘಿಸುವವರ, ಕಾಳಸಂತೆ, ಅಕ್ರಮ ದಾಸ್ತಾನು ಇತ್ಯಾದಿ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ಎಚ್ಚರಿಕೆ ನೀಡಿದ್ದಾರೆ.
ಎಲ್ಲ ಬ್ಯಾಂಕ್ ಗಳೂ ಕಾರ್ಯಾಚರಿಸಬೇಕು: ಕೊರೋನಾ ಕೋರ್ ಸಮಿತಿ ಸಭೆ
ಜಿಲ್ಲೆಯಲ್ಲಿ ಈಗ ಬ್ಯಾಂಕ್ ಗಳು ಕಾರ್ಯಾಚರಿಸಬೇಕಿದ್ದು, ಮುಂದಿನ ಒಂದು ವಾರ ಬ್ಯಾಂಕ್ ಶಾಖೆಗಳ ಮುಚ್ಚುಗಡೆನಡೆಸಲಾಗುವುದು ಎಂದು ಕೊರೋನಾ ಕೋರ್ ಸಮಿತಿ ಸಭೆ ತಿಳಿಸಿದೆ.
ಮುಂದಿನ 2 ವಾರಗಳ ಅವಧಿಯಲ್ಲಿ ನೂತನ ಖಾತೆ ತೆರೆಯುವ ಉದ್ದೇಶದಿಂದ ಯಾರೂ ಬ್ಯಾಂಕ್ ಗೆ ತೆರಳಕೂಡದು ಎಂದು ಸಭೆ ಸಲಹೆ ಮಾಡಿದೆ. ಈ ವಿಚಾರವನನು ಬ್ಯಾಂಕ್ ಪ್ರತಿನಿಧಿಗಳ ಸಲಹೆಯನ್ನು ಸಭೆ ಅಂಗೀಕರಿಸಿದೆ. ಹಣದ ವ್ಯವಹಾರಗಳಿದ್ದಲ್ಲಿ ಎ.ಟಿ.ಎಂ.,ಕ್ಯಾಷ್ ಡೆಪಾಸಿಟ್ ಮೆಷಿನ್ ಗಳನ್ನು ಈ ಅವದಿಯಲ್ಲಿ ಬಳಸಬಹುದು ಎಂದು ತಿಳಿಸಲಾಗಿದೆ.
ಕೇಂದ್ರ ಸರಕಾರದ ಆದೇಶ ಲಭಿಸುವವರೆಗೆ ಸಿ.ಪಿ.ಸಿಆರ್.ಐ., ಎಚ್.ಎ.ಎಲ್., ಭೆಲ್ ಸಂಸ್ಥೆಗಳ ಮುಚ್ಚುಗಡೆ ಬಗ್ಗೆ ಮಧ್ಯಸ್ಥಿಕೆ ನಡೆಸುವುದಿಲ್ಲ ಎಂದು ಸಭೆ ತಿಳಿಸಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಪಡೆಯಬಹುದಾದ ಚಿಕಿತ್ಸೆಗಳಿಗಾಗಿ ರೋಗಿಗಳು ಕಾಞಂಗಾಡಿನ ಜಿಲ್ಲಾ ಆಸ್ಪತ್ರೆಗೆ, ಕಾಸರಗೋಡು ಜನರಲ್ ಆಸ್ಪತ್ರೆಗಳಿಗೆ ತೆರಳಕೂಡದು. ಈ ಆಸ್ಪತ್ರೆಗಳಲ್ಲಿ ಕೊರೋನಾ ಪ್ರತಿರೋಧ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಭೆ ಸಾರ್ವಜನಿಕರಲ್ಲಿ ವಿನಂತಿಸಿದೆ.
ಹೆಚ್ಚುವರಿ ಮಂದಿ ಸೇರುವ ಸೂಪರ್ ಮಾರ್ಕೆಟ್, ಬಝಾರ್ ಇತ್ಯಾದಿಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕಿದ್ದು, ಗ್ರಾಹಕರಿಗೆ ಕೈತೊಳೆಯಲು ಹ್ಯಾಂಡ್ ವಾಷ್, ಸಾನಿಟೈಸರ್ ಇತ್ಯಾದಿ ನೀಡಬೇಕು. ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಜಿಲ್ಲಾಧಿಕಾರಿ, ಆರ್.ಡಿ.ಒ. ಅವರ ನೇತೃತ್ವದಲ್ಲಿ ಚಟುವಟಿಕೆ ನಡೆಸುತ್ತಿರುವ ಕೊರೋನಾ ಪ್ರತಿರೋಧ ದಳಗಳ ಚಟುವಟಿಕೆ ಚುರುಕುಗೊಳಿಸಲಾಗುವುದು. ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳನ್ನೂ ಬಲಪಡಿಸಲಾಗುವುದು. ಮನೆಗಳಲ್ಲಿ ನಿಗಾದಲ್ಲಿರುವವರು ಸರಕಾರದ ಆದೇಶ ಉಲ್ಲಂಘಿಸಿ ಹೊರಗಡೆ ಸಂಚಾರ ನಡೆಸಿದರೆ ವಾರ್ಡ್ ಮಟ್ಟದ ಜಾಗೃತಿ ಸಮಿತಿ ಕೊರೋನಾ ನಿಯಂತ್ರಣ ಘಟಕಕ್ಕೆ ಮಾಹಿತಿ ನೀಡಬೇಕು. ನಿಗಾದಲ್ಲಿರುವವರನ್ನು ಪ್ರತ್ಯೇಕವಾಗಿ ಸಜ್ಜುಗೊಳಿಸಿರುವ ಕೊರೋನಾ ನಿಯಂತ್ರಣ ಕೇಂದ್ರಕ್ಕೆ ಅವರನ್ನು ದಾಖಲಿಸಲಾಗುವುದು. ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಬಲ್ಲ ಸರಕಾರಿ ಶಾಲೆಗಳಲ್ಲಿ ಈ ಕೇಂದ್ರಗಳಿವೆ.
ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಎರಡು ಖಾಸಗಿ ಆಸ್ಪತ್ರೆಗಳನ್ನೂ ವಹಿಸಿಕೊಂಡು 22 ಬೆಡ್ ಗಳನ್ನು ಕೊರೋನಾ ರೋಗಿಗಳಿಗಾಗಿ ಮೀಸಲಿಡಲಾಗುವುದು. ಕಾಞಂಗಾಡಿನ ಕೊರೋನಾ ನಿಯಂತ್ರಣ ಕೇಂದ್ರಕ್ಕೆ ಬಿ.ಎಸ್.ಎನ್.ಎಲ್. ಸಂಪರ್ಕ ಒದಗಿಸಲಾಗುವುದು. ಇದರಲ್ಲಿ ಮೂರು ದೂರವಾಣಿಗಳು ನಿಯಂತ್ರಣ ಕೊಠಡಿಗೆ ಬರುವ ಕರೆಗಳಿಗೆ ಉತ್ತರ ನೀಡಲು ಬಳಸಲಾಗುವುದು. ಎರಡು ದೂರವಾಣಿಗಳನ್ನು ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳ ಚಟುವಟಿಕೆ ಸಂಬಂಧ ಮಾಹಿತಿ ನೀಡಿಕೆಗೆ ಬಳಕೆಯಾಗಲಿವೆ. ಭಾನುವಾರ ವೇಳೆಗೆ ಈ ದೂರವಾಣಿಗಳ ಸಂಖ್ಯೆ ಖಚಿತವಾಗಲಿವೆ.
ಜಿಲ್ಲಾಧಿಕಾರಿ ಕಚೇರಿಯ ಕರೋನಾ ನಿಯಂತ್ರಣ ಕೊಠಡಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಎ.ಟಿ.ಮನೋಜ್ ಉಪಸ್ಥಿತರಿದ್ದರು.


