ಕಾಸರಗೋಡು: ಪ್ರಯಾಣಿಕರ ಸಂಖ್ಯೆಯಲ್ಲಿ ಉಂಟಾದ ಕೊರತೆಯ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವನ್ನು ಕಡಿತಗೊಳಿಸಲಾಗಿದೆ.
ಕಾಸರಗೋಡು ಡಿಪೆÇೀದಿಂದ ವಿವಿಧೆಡೆಗೆ ಪ್ರತಿದಿನ ಸಂಚಾರ ನಡೆಸುತ್ತಿದ್ದ ಕೇರಳ ರಾಜ್ಯ ಸಾರಿಗೆ ನಿಗಮದ 92 ಬಸ್‍ಗಳ ಪೈಕಿ ಈಗ 20 ಬಸ್‍ಗಳ ಸಂಚಾರ ಕಡಿತಗೊಳಿಸಲಾಗಿದೆ. 72 ಬಸ್‍ಗಳು ಮಾತ್ರವೇ ಸಂಚರಿಸುತ್ತಿವೆ. ಅದೇ ರೀತಿ ಕರ್ನಾಟಕ ರಾಜ್ಯ ಸಾರಿಗೆ ನಿಗಮದ 40 ಬಸ್‍ಗಳು ಕಾಸರಗೋಡಿಗೆ ಬರುತಿದ್ತು, ಈ ಪೈಕಿ 30 ಬಸ್‍ಗಳ ಸಂಚಾರ ರದ್ದುಗೊಳಿಸಲಾಗಿದೆ.
ಕಾಸರಗೋಡಿನಿಂದ ಮಂಗಳೂರು, ಸುಳ್ಯ, ಪುತ್ತೂರು ಭಾಗಕ್ಕೆ ಬಸ್‍ಗಳ ಸಂಚಾರವಿದೆ. ಆದರೆ ಧರ್ಮಸ್ಥಳ ಭಾಗಕ್ಕಿರುವ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಾಸರಗೋಡು ಡಿಪೆÇ್ಪೀದಿಂದ ಸಂಚಾರ ನಡೆಸಿದ ರೂಪದಲ್ಲಿ ಕೇರಳ ರಾಜ್ಯ ಸಾರಿಗೆ ಸಂಸ್ಥೆಗೆ ಈ ಹಿಂದೆ ಪ್ರತಿದಿನ 13 ಲಕ್ಷ ದಿಂದ 14 ಲಕ್ಷ ರೂ. ವರೆಗೆ ಸಂಗ್ರಹವಾಗುತ್ತಿತ್ತು. ಆದರೆ ಈ ಮೊತ್ತವೀಗ 8 ಲಕ್ಷಕ್ಕೆ ಇಳಿದಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

