HEALTH TIPS

ವಿಶ್ವ ಮಹಿಳಾ ದಿನಾಚರಣೆ

     ಮಂಜೇಶ್ವರ:  ಇಲ್ಲಿನ ಮಿತ್ರವೃಂದ ಗ್ರಂಥಾಲಯ ಮತ್ತು ವಾಚನಾಲಯದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಲೈಬ್ರೆರಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
      ಸಮಾರಂಭದ ಅಧ್ಯಕ್ಷತೆಯನ್ನು ಲೈಬ್ರೆರಿಯ ಕಾರ್ಯಕಾರಿ ಸಮಿತಿ ಸದಸ್ಯೆ ಶಶಿಪ್ರಭಾ ಟೀಚರ್ ವಹಿಸಿದ್ದರು. ಕಾರ್ಯಕ್ರಮವನ್ನು ಮಂಜೇಶ್ವರ ತಾಲೂಕು ಲೈಬ್ರೆರಿಯ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಕುಮಾರಿ ಟೀಚರ್ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಶಾ ದಿಲೀಪ್ ಸುಳ್ಯಮೆ ಭಾಗವಹಿಸಿ ಮಹಿಳಾ ದಿನಾಚರಣೆಯ ಮಹತ್ವವನ್ನು ವಿವರಿಸಿದರು.
      ಅತಿಥಿಗಳಾಗಿ ಕಿಟ್ಟಣ್ಣ ಶೆಟ್ಟಿ ಮಾಸ್ಟರ್, ಗೋಪಾಲಕೃಷ್ಣ ಪಜ್ವ, ರಹಮತ್ ರಝಾಕ್ ಮೋಹನ ಮಾಸ್ಟರ್ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಹಿರಿಯ ಅಂಗನವಾಡಿ ಅಧ್ಯಾಪಿಕೆ ಜಯಶ್ರೀ ಆರ್.ಬಲ್ಲಾಳ್ ಅವರನ್ನು ಮತ್ತು ಕೇರಳ ತುಳು ಅಕಾಡೆಮಿಯ ನೂತನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬೋಳ್ನ ಅವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಲೈಬ್ರೆರಿಯ ಸದಸ್ಯರಾದ ಆರತಿ ಟೀಚರ್ ಸ್ವಾಗತಿಸಿದರು. ಸಂತೋಷ್ ಮಾಸ್ಟರ್ ವಂದಿಸಿದರು. ಜಮಾಲುದ್ದೀನ್ ಎನ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಲೈಬ್ರೆರಿಯ ಹಿರಿಯ ಸದಸ್ಯ ಪದ್ಮನಾಭ ಮಾಸ್ಟರ್ ಅವರ ಮನೆಗೆ ತೆರಳಿ ಅವರಿಗೆ ಖಾದಿ ವಸ್ತ್ರ ನೀಡಿ ಗೌರವಿಸಲಾಯಿತು. ಶ್ರೀಕುಮಾರಿ ಟೀಚರ್ ಅವರು ಖಾದಿ ವಸ್ತ್ರವನ್ನು ತಾಲೂಕು ಲೈಬ್ರೆರಿಯ ನಿರ್ದೇಶನದಂತೆ ವಿತರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries