ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರೆರಿಯ ನಿರ್ದೇಶನದ ಪ್ರಕಾರ ನಡೆಸಲಾಗುವ `ನನ್ನ ಪುಸ್ತಕ, ನನ್ನ ಲೇಖನ, ನನ್ನ ಪೆಟ್ಟಿಗೆ' ಎಂಬ ಶಾಲಾ ಮಕ್ಕಳಿಗಿರುವ ಸ್ಪರ್ಧೆಯನ್ನು ಮಿತ್ರ ವೃಂದ ಲೈಬ್ರೆರಿಯಲ್ಲಿ ಕಳೆದ ಐದು ತಿಂಗಳಿನಿಂದ ನಡೆಸಲಾಗಿತ್ತು. ಅದರ ಎಲ್ಲಾ ವಿಜೇತರಿಗೆ ನಗದು ಬಹುಮಾನವನ್ನು ಲೈಬ್ರೆರಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿತರಿಸಿ ಅಭಿನಂದಿಸಲಾಯಿತು.
ವಿಜೇತ ಮಕ್ಕಳಾದ ದೀಕ್ಷಾ, ಸ್ಪರ್ಶ, ಪ್ರಶ್ವಿತ, ಮನಿಶಾ, ಜುಮಾನಾ ಅವರನ್ನು ತಾಲೂಕು ಲೈಬ್ರೆರಿಯ ಕಾರ್ಯಕಾರೀ ಸಮಿತಿ ಸದಸ್ಯೆ ಶ್ರೀಕುಮಾರಿ ಟೀಚರ್ ಅವರು ನೀಡಿ ಅಭಿನಂದಿಸಿದರು. ಲೈಬ್ರೆರಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಜ್ವ ಅವರು ಅಧ್ಯಕ್ಷತೆ ವಹಿಸಿದ್ದರು. ಸಂತೋಷ್ ಮಾಸ್ಟರ್ ಸ್ವಾಗತಿಸಿ, ಆರತಿ ಟೀಚರ್ ವಂದಿಸಿದರು. ಗಣೇಶ್ ಪ್ರಸಾದ್ ಮತ್ತು ರಘು ಕಾರ್ಯಕ್ರಮ ನಿರೂಪಿಸಿದರು.


