ಮಂಜೇಶ್ವರ: ಮಾರಕ ರೋಗವಾಗಿ ಹರಡುತ್ತಿರುವ ಕೊರೋನಾ ವೈರಸ್ ಬಗ್ಗೆ ಜನರಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಡಿ.ವೈ.ಯಫ್.ಐ ಮಿಂಜ ವಿಲೇಜ್ ಸಮಿತಿಯಿಂದ ಜನ ಜಾಗೃತಿ ವಾಹನ ಪ್ರಚಾರ ನಡೆಸಲಾಯಿತು. ಮಿಂಜ ಪಂಚಾಯತಿಗೆ ಒಳಪಟ್ಟ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ವಾಹನ ಪ್ರಚಾರ ಮತ್ತು ಹೆಚ್ಚಿನ ಮುನ್ನೆಚ್ಚರಿಕೆ ಬಗ್ಗೆ ಕರ ಪತ್ರ ವಿತರಿಸಲಾಯಿತು.