ಪೆರ್ಲ: ಪರಿಶಿಷ್ಠ ವರ್ಗ ಅಭಿವೃದ್ಧಿ ಇಲಾಖೆ ಯಲ್ಲಿ ಕಳೆದ ಒಂದೂವರೆ ವರ್ಷದಿಂದ ಪರಿಶಿಷ್ಟ ವರ್ಗ ವಿಸ್ತರಣಾಧಿಕಾರಿಯಲ್ಲಿ ಸೇವೆ ಸಲ್ಲಿಸಿ ಇದೀಗ ಕಾಸರಗೋಡಿನ ಎಣ್ಮಕಜೆ ಯಿಂದ ಸ್ವಂತ ಜಿಲ್ಲೆ ಮಲಪ್ಪುರಂ ನ ಎಡವಣ್ಣದ ಸಹಾಯಕ ಪರಿಶಿಷ್ಟ ವರ್ಗ ಅಧಿಕಾರಿಯಾಗಿ ವರ್ಗಾವಣೆಗೊಂಡ ಮೊಹಮ್ಮದ್ ಶಾಹಿದ್ ಅವರಿಗೆ ಎಣ್ಮಕಜೆ ಪ.ವರ್ಗ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು.
ಸಮಾರಂಭದಲ್ಲಿ ಹಿರಿಯ ಪ.ವರ್ಗ ಪೆÇ್ರಮೋಟರ್ ಗೋಪಾಲ ಕಾರ್ಯಾಡ್ ಅಧ್ಯಕ್ಷತೆ ವಹಿಸಿದ್ದರು. ನೂತನವಾಗಿ ಅಧಿಕಾರ ಸ್ವೀಕರಿಸಿದ ಪರಿಶಿಷ್ಟ ವರ್ಗ ವಿಸ್ತರಣಾಧಿಕಾರಿ ಚಂದ್ರಮತಿ ಹಾಗೂ ಕಛೇರಿ ಕ್ಲರ್ಕ್ ವಿನೀತಾ ಅವರು ಶುಭಾಶಂಸನೆಗೈದರು. ಕಛೇರಿ ಸಹಾಯಕ ಚನಿಯಪ್ಪ ನಾಯ್ಕ, ಕಾರ್ಯಕರ್ತೆ ದೀಪ್ತಿ, ಪ.ವರ್ಗ ಪ್ರೊಮೋಟರ್ ನಾರಾಯಣ ನಾಯ್ಕ ಅಭಿನಂದಿಸಿದರು. ಕಛೇರಿ ನಿರ್ವಹಣಾ ತರಬೇತಿ ನೌಕರ ಹಾಗೂ ಎಲ್ಲಾ ಪ.ವರ್ಗ ಪೆÇ್ರಮೋಟರ್‍ಗಳ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಪ.ವರ್ಗ ಪ್ರೊಮೋಟರ್ ಚಂದ್ರ ನಾಯ್ಕ ಸ್ವಾಗತಿಸಿ, ಅಶೋಕ್ ಚವರ್ಕಾಡ್ ವಂದಿಸಿದರು.


