ಕಾಸರಗೋಡು: ಕೊರೋನಾ ಹರಡುವಿಕೆಯ ಹಿನ್ನೆಲೆಯಲ್ಲಿ ಮುಂದಿನ 2 ವಾರಗಳ ಅವಧಿಗೆ ಜಿಲ್ಲೆಯ ಆರಾಧನಾಲಯಗಳು, ಕ್ಲಬ್ ಗಳು ತೆರದು ಕಾರ್ಯಾಚರಿಸಕೂಡದು ಎಂದು ಜಿಲ್ಲಾಧಿಕಾರಿ ಡಾ.ಡಿಸಜಿತ್ ಬಾಬು ಆದೇಶ ನೀಡಿದರು.
ಹಾಲಿನ ಬೂತ್ ಗಳು ಅಂತೆಯೇ ಕಾರ್ಯಾಚರಿಸಬೇಕು: ಜಿಲ್ಲಾಧಿಕಾರಿ
ಜಿಲ್ಲೆಯ ಕೆಲವು ಮಿಲ್ಮಾ ಹಾಲಿನ ಬೂತ್ ಗಳು ಚಹಾದಂಗಡಿಯಾಗಿ ಚಟುವಟಿಕೆ ನಡೆಸುತ್ತಿದ್ದು, ಇಲ್ಲಿ ಜನ ಸೇರುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಹಾಲಿನಬೂತ್ ಗಳಾಗಿ ಮಾತ್ರ ಈ ಸಂಸ್ಥೆಗಳು ಕಾರ್ಯಾಚರಿಸಬೇಕು. ಈ ಆದೇಶ ಉಲ್ಲಂಘಿಸಿದಲ್ಲಿ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ನೂತನ ವಾರ್ಡ್ ಗಳ ಆರಂಭ:
ಪೆರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೋನಾ ನಿಗಾ ವಾರ್ಡ್ ಗಳು ಆರಂಭಗೊಳ್ಳಲಿವೆ. ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಶಿಫಾರಸು ನಡೆಸುವ ರೋಗಿಗಳನ್ನು ಇಲ್ಲಿ ದಾಖಲಾತಿ ನಡೆಸಲಾಗುವುದು. ಜಿಲ್ಲೆಯಲ್ಲಿ ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತೆ ಅತೀವ ಜಾಗರೂಕತೆಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

