HEALTH TIPS

ಎರಿಯಾಲ್ ನಿವಾಸಿಯ ರೂಟ್ ಮ್ಯಾಪ್ ಜಿಲ್ಲಾಡಳಿತದಿಂದ ಪ್ರಕಟ


                                       
          ಕಾಸರಗೋಡು:  ಜಿಲ್ಲೆಯಲ್ಲಿ ಕೊರೋನ ಬಾಧೆ ಖಚಿತಗೊಂಡಿರುವವರಲ್ಲಿ ಎರಿಯಾಲ್ ನಿವಾಸಿಯ ರೂಟ್ ಮ್ಯಾಪ್ ಜಿಲ್ಲಾಡಳಿತೆ ಪ್ರಕಟಿಸಿದೆ. ಮಾ.19ರಂದು ಇವರಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು. ಮಾ.11ರಂದು ನಸುಕಿನ 2.30ಕ್ಕೆ ಇವರು ದುಬಾಯಿಯಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ 344 ವಿಮಾನ ಏರಿದ್ದು, 7.45ಕ್ಕೆ ಕರಿಪುರ ನಿಲ್ದಾಣದಲ್ಲಿ ಬಂದಿಳಿದಿದ್ದರ. ನಂತರ ಮಾವೇಲಿ ಎಕ್ಸ್ ಪ್ರೆಸ್ ರೈಲಿನಲ್ಲಿ ಎಸ್-9 ಭೋಗಿಯಲ್ಲಿ ಮರುದಿನ ಬೆಳಗ್ಗೆ 7 ಗಂಟೆಗೆ ಕಾಸರಗೋಡಿಗೆ ತಲಪಿದ್ದರು. ಅಲ್ಲಿಂದ ಆಟೋರಿಕ್ಷಾ ಮೂಲಕ ಮನೆಗೆ ಬಂದಿದ್ದರು. ನಂತರ ಮಾಯಿಪ್ಪಾಡಿಯಲ್ಲಿರುವ ಸಹೋದರಿಯ ನಿವಾಸಕ್ಕೆ , ಸಂಜೆ ಗ್ರೀನ್ ಸ್ಟಾರ್ ಕ್ಲಬ್ ಗೆ ತೆರಳಿದ್ದರು. ಮಾ.13ರಂದು ಮಕ್ಕಳೊಂದಿಗೆ ಫುಟ್ ಬಾಲ್ ಆಟವಾಡಿದ್ದರು. ನಂತರ ಎರಿಯಾಲ್ ನ ಕ್ಷಾರದಂಗಡಿಗೆ, ಆಝಾದ್ ನಗರದ ಗೆಳೆಯನ ಮನೆಗೆ , ಎರಿಯಾಲ್ನ ಜುಮಾ ಮಸಿದಿ, ಸಿ.ಪಿ.ಸಿ.ಆರ್.ಐ. ಬಳಿಯ ರೆಸ್ಟಾರೆಂಟ್ ಒಂದಕ್ಕೆ, ಎಸ್.ಬಿ.ಐ.ಯ ಎ.ಟಿ.ಎಂ.ಗೆ ತೆರಳಿದ್ದರು. ಸಂಜೆ ಎರಿಯಾಲ್ ಗ್ರೀನ್ ಸ್ಟಾರ್ ಕ್ಲಬ್ ಗೆ ಭೇಟಿ ನೀಡಿದ್ದರು. ಮಾ.14ರಂದು ಮಂಜನಡ್ಕದ ಮದುವೆ ಮನೆಯೊಂದಕ್ಕೆ ಭೇಟಿ ನೀಡಿದ್ದರು. ರಾತ್ರಿ 10.06ಕ್ಕೆ ಉಳಿಯತ್ತಡ್ಕದ ಪೆಟ್ರೋಲ್ ಬಂಕ್ ಗೆ, 11 ಗಂಟೆಗೆ  ಅಡೂರಿನ ಮದುವೆ ಮನೆಯೊಂದಕ್ಕೆ ತೆರಳಿದ್ದರು. ಮಾ.16ರಂದು ಬೆಳಗ್ಗೆ 7 ಗಂಟೆಗೆ ಕುಳಂಗರ ಎರಿಯಾಲ್ ನ ಗೃಹಪ್ರವೇಶ ಕಾರ್ಯಕ್ರಮಕ್ಕೆ, ಮಧ್ಯಾಹ್ನ 12.15ಕ್ಕೆ ಕುಳಂಗರದ ನಿಧನರಾದವರ ಮನೆಯೊಂದಕ್ಕೆ, ರಾತ್ರಿ 9 ಗಂಟೆಗೆ ಕಾಸರಗೋಡು ನಸಿರ್ಂಗ್ ಹೋಂಗೆ ಬೇಟಿ ನೀಡಿದ್ದರು. ಮಾ.17ರಂದು ಕಾಸರಗೋಡು ಜನರಲ್ ಆಸ್ಪತ್ರೆಗೆ ತೆರಳಿ ಸ್ಯಾಂಪಲ್ ತಪಾಸಣೆಗಾಗಿ ನೀಡಿದ್ದರು. ಮಾ.17,18,19ರಂದು ಕುಳಂಗರದ ಎರಿಯಾಲ್ ನ ಸಹೋದರ ನಿವಾಸದಲ್ಲಿ ನಿಗಾದಲ್ಲಿದ್ದರು. 19ರಂದು ಬೆಳಗ್ಗೆ 8.30ಕ್ಕೆ ರೋಗ ತಗುಲಿರುವ ಕಚಿತಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯ ನಿಗಾ ವಾರ್ಡ್ ಗೆ ವರ್ಗಾವಣೆಗೊಂಡರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries