HEALTH TIPS

ಕರೊನಾ ಭೀತಿಯ ಮಧ್ಯೆ ಹೀಗೊಂದು ಮಾನವೀಯತೆ-ತುರ್ತಾಗಿ ವೈದ್ಯರ ಕಾಣಬೇಕೆ?;'ವಾಟ್ಸಪ್ ಮೂಲಕ ಔಷಧಿ' - ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೇವೆ


      ಮಂಗಳೂರು:  ಕೊರೋನಾ ಹರಡುವಿಕೆ ನಿಯಂತ್ರಿಸತಾಲು ದೇಶದಲ್ಲಿ ಲಾಕ್ ಡೌನ್ ಘೋಷಣೆಯ ಬಳಿಕ ಮಂಗಳೂರಲ್ಲಿ ಹಲವು ಆಸ್ಪತ್ರೆಗಳು ತಮ್ಮ ಹೊರ ರೋಗಿಗಳಿಗೆ ನೀಡುವ ಚಿಕಿತ್ಸಾ ಸೇವೆಯನ್ನು ಸ್ಥಗಿತಗೊಳಿಸಿವೆ. ಇದರಿಂದ ಅನೇಕ ರೋಗಿಗಳಿಗೆ ಸಕಾಲಕ್ಕೆ ವೈದ್ಯರ ಸಲಹೆ ಔಷಧಗಳು ಸಿಗದೆ ತೊಂದರೆಗೀಡಾಗಿದ್ದಾರೆ.
      ಇದಕ್ಕಾಗಿ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆ ವಿನೂತನವಾಗಿ ರೋಗಿಗಳ ಸೇವೆಗೆ ನಿಂತಿದೆ. ಸಾರ್ವಜನಿಕರಿಗೆ ಓಡಾಟಕ್ಕೆ ಅವಕಾಶ ಇಲ್ಲದ ಕಾರಣ ಕೆ.ಎಸ್.ಹೆಗ್ಡೆ ಆಸ್ಪತ್ರೆ ಆನ್ ಲೈನ್ ನ ಮೂಲಕ ರೋಗಿಗಳ ಸೇವೆಗೆ ಮುಂದಾಗಿದೆ. ಆಸ್ಪತೆಯಿಂದ ಎಲ್ಲಾ ವಿಭಾಗದ ವೈದ್ಯರ ವಾಟ್ಸಪ್ ನಂಬರ್ ನೀಡಿದ್ದು, ಆಯಾ ವಿಭಾಗದ ವೈದ್ಯರಿಗೆ ಯಾವುದಾದರೂ ರೋಗಗಳಿಂದ ಬಳಲುತ್ತಿರುವ ರೋಗಿಗಳು ವಾಟ್ಸಾಪ್ ನಲ್ಲಿ ತಮ್ಮ ರೋಗ ಲಕ್ಷಣ ಮಾಹಿತಿನ್ನು ರವಾನಿಸಬೇಕು. ಇದರೊಂದಿಗೆ ಹೆಸರು, ವಯಸ್ಸು, ಲಿಂಗ, ತೂಕ, ಖಾಯಿಲೆಯ ಮಾಹಿತಿ ಹಾಗೂ ಹಳೆಯ ಪ್ರಿಸ್ಕ್ರಿಪ್ಷನ್ ಗಳಿದ್ದರೆ ತಪ್ಪದೆ ನೀಡಬೇಕು. ಇವೆಲ್ಲವೂ ನೋಡಿದ ಬಳಿಕ ಅಗತ್ಯವಿದ್ದರೆ ವೈದ್ಯರೇ ನಿಮಗೆ ಕರೆ ಮಾಡುತ್ತಾರೆ ಇಲ್ಲವಾದರೆ, ಯಾವ ಔಷಧಿಸೂಕ್ತವೆಂದು ಅಥವಾ ವೈದ್ಯರ ಸಲಹೆಯನ್ನು "ವೈದ್ಯರ ನೊಂದಣೆ ಸಂಖ್ಯೆವಿರುವ ಚೀಟಿಯಲ್ಲಿ" ಬರೆದು ರೋಗಿಗಳ ಸಂಖ್ಯೆಗೆ ವೈದ್ಯರು ವಾಟ್ಸಾಪ್ ಮಾಡಲಿದ್ದಾರೆ. ಬಳಿಕ ಔಷಧಿಯನ್ನು ಸಮೀಪದ ಮೆಡಿಕಲ್ ನಲ್ಲಿ ಪಡೆಯಬಹುದಾಗಿದೆ.
       ಮಾರಕ ಕೊರೊನಾದಿಂದ ಪಾರಾಗಲು , ಸಾಮಾಜಿಕ ಅಂತರ ಕಾಯ್ದುಗೊಳ್ಳುವುದು ಹಾಗೂ ಮನೆಯಲ್ಲಿರುವುದು ಸಧ್ಯದ ಮುನ್ನೆಚ್ಚರಿಕಾ ಕ್ರಮವಾಗಿರುವ ಹಿನ್ನಲೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ದೇರಳಕಟ್ಟೆಯಲ್ಲಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆಯೂ ಮೊತ್ತಮೊದಲ ಬಾರಿಗೆ ಈ ವಿನೂತನ ಸೇವೆಗೆ ಮುಂದಾಗಿದೆ.ಇದರಿಂದ ಕಾಸರಗೋಡು ಸಹಿತ ದಕ್ಷಿಣ ಕನ್ನಡ-ಉಡುಪಿಯ ಜನರಿಗೆ ಆರೋಗ್ಯ ಪರ ಕಾಳಜಿಗೆ ಬೆಂಬಲ ದೊರೆತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries