ಮುಳ್ಳೇರಿಯ: ಕೃಷಿ ಅಭಿವೃದ್ಧಿ ಮತ್ತು ಕೃಷಿಕರ ಕ್ಷೇಮ ಇಲಾಖೆಯ 'ವಿಷ ರಹಿತ ಹಸಿರು ತರಕಾರಿಯತ್ತ ಕೇರಳ- ನಮ್ಮ ಕೃಷಿ ನಮ್ಮ ಆರೋಗ್ಯ' 'ಜೀವನಿ' ಯೋಜನೆ ಭಾಗವಾಗಿ ಬೆಳ್ಳೂರು ಕೃಷಿ ಭವನದಲ್ಲಿ ನುಗ್ಗೆ ಹಾಗೂ ಕರಿಬೇವಿನ ಗಿಡ ಸಬ್ಸಿಡಿ ದರದಲ್ಲಿ ವಿತರಣೆಗೆ ಲಭ್ಯವಿದೆ.ಅಗತ್ಯವಿರುವ ಕೃಷಿಕರು ಆದಷ್ಟು ಶೀಘ್ರದಲ್ಲಿ ಕೃಷಿ ಭವನ ಸಂಪರ್ಕಿಸುವಂತೆ ಕೃಷಿ ಅಧಿಕಾರಿ ತಿಳಿಸಿದ್ದಾರೆ.