ಕಾಸರಗೋಡು: ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಿಗೂ, ಡಿ.ಎಂ.ಒ. ಕಚೇರಿಗೂ ಸಹಿತ ವಿವಿಧ ಆರೋಗ್ಯ ಕೇಂದ್ರಗಳಿಗೆ ಕೆಲಸಕ್ಕೆ ಹೋಗುವ ಡಾಕ್ಟರ್‍ಗಳನ್ನು ಮತ್ತು ಸಿಬ್ಬಂದಿಗಳನ್ನು ತಡೆದು ಹಲ್ಲೆಗೊಳಿಸಿದ ಪೆÇಲೀಸ್ ಕ್ರಮವನ್ನು ಕೆ.ಜಿ.ಎಂ.ಒ.ಎ. ಪ್ರತಿಭಟಿಸಿದೆ.
ಆಸ್ಪತ್ರೆಗೆ ಹೋಗುವ ನೌಕರರನ್ನು ತಡೆದು ನಿಲ್ಲಿಸಿದ ಪೋಲೀಸರು ಕೊರೊನಾ ಹರಡುವುದನ್ನು ತಡೆಯುವುದು ಹೇಗೆಂದು ನಿಮಗೆ ತಿಳಿದಿಲ್ಲವೇ ಎಂದು ಹೇಳಿ ಬದಿಯಡ್ಕ ಸಿ.ಎಚ್.ಸಿ.ಯ ಡಾ.ಅರವಿಂದನ್ ಅವರಿಗೆ ಗುರುವಾರ ಬೆಳಗ್ಗೆ ವಿದ್ಯಾನಗರ ಬಿ.ಸಿ. ರೋಡ್‍ನಲ್ಲಿ ತಡೆದು ಪೆÇಲೀಸರು ಹಲ್ಲೆ ಮಾಡಿದ್ದಾಗಿ ಕೆಜಿಎಂಒಎ ಆರೋಪಿಸಿದೆ.
ಕೊರೊನಾ ಮಾರಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆತ್ಮಾರ್ಥವಾಗಿ ದುಡಿಯುತ್ತಿರುವ ಡಾಕ್ಟರ್‍ಗಳ ಮತ್ತು ಸಿಬ್ಬಂದಿಗಳ ಆತ್ಮವಿಶ್ವಾಸವನ್ನು ಕುಂದಿಸುವ ಪ್ರವೃತ್ತಿಯಾಗಿದೆ ಎಂದು ಹೇಳಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಪೆÇಲೀಸ್ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕೆಜಿಎಂಒಎ ಆಗ್ರಹಿಸಿದೆ.

