ಮುಳ್ಳೇರಿಯ: ದೇಲಂಪಾಡಿಯಲ್ಲಿ ಗುಂಪೆÇಂದು ಪೆÇಲೀಸರನ್ನು ಆಕ್ರಮಿಸಿದ ಘಟನೆ ನಡೆದಿದೆ. ಆಕ್ರಮಣದಲ್ಲಿ ನಾಲ್ವರು ಪೆÇಲೀಸರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಪೆÇಲೀಸರು ಬಂಧಿಸಿದ್ದಾರೆ.
ಕೊರೊನಾ ಹರಡುವುದನ್ನು ತಡೆಯುವ ಉದ್ದೇಶದಿಂದ ಕರ್ನಾಟಕದ ಅಧಿಕೃತರು ದೇಲಂಪಾಡಿ ಕಲ್ಲಡ್ಕದಲ್ಲಿ ರಸ್ತೆಗೆ ಮಣ್ಣು ತುಂಬಿಸಿದ್ದರು. ಇದರ ಸಮೀಪವೇ ಕಾಲನಿಗಿರುವ ರಸ್ತೆ ತಡೆಯುಂಟಾಗಿತ್ತು. ಈ ಸಂಬಂಧ ವಿವಾದ ಹುಟ್ಟಿಕೊಂಡಿತ್ತು. ಈ ಈ ಕುರಿತು ಜಿಲ್ಲಾಧಿಕಾರಿಗಳ ನಿರ್ದೇಶದಂತೆ ಪೆÇಲೀಸರು ಕಾಲನಿಗೆ ತಲುಪಿದ್ದರು. ಈ ಸಂದರ್ಭದಲ್ಲಿ ಮರದ ಕುಂಟೆಯಿಂದ ಪೆÇಲೀಸರಿಗೆ ಹಲ್ಲೆ ಮಾಡಿದ್ದಾಗಿ ಆರೋಪಿಸಲಾಗಿದೆ. ಗಾಯಗೊಂಡಿರುವ ಪೆÇಲೀಸರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.


