HEALTH TIPS

ಉದ್ಘಾಟನೆ ಹಂತದಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕೊರೊನಾ ವೈರಸ್ ಕೇರ್ ಸೆಂಟರ್ ಆಗಿ ಕಾರ್ಯಾಚರಣೆಗೆ ಸಜ್ಜು


     ಪೆರ್ಲ: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪೆರ್ಲದಲ್ಲಿ ಉದ್ಘಾಟನೆ ಹಂತದಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಮಂಗಳವಾರದಿಂದ ತಾತ್ಕಾಲಿಕ ಕೊರೊನಾ ವೈರಸ್ ಕೇರ್ ಸೆಂಟರ್ ಆಗಿ ಕಾರ್ಯಾರಂಭಿಸಲು ಸಜ್ಜುಗೊಂಡಿದೆ.
      ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ದುಷ್ಪರಿಣಾಮಕ್ಕೊಳಗಾದ ಪಂಚಾಯಿತಿಗಳಿಗೆ ಎಂಡೋಸಲ್ಫಾನ್ ಪ್ಯಾಕೇಜ್ ಅಡಿಯಲ್ಲಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಎಣ್ಮಕಜೆ ಪಂಚಾಯಿತಿಗೆ ನಾಲ್ಕು ವರ್ಷದ ಹಿಂದೆ ಲಭಿಸಿದ ಎರಡು ಕೋಟಿ ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಈ ಕಟ್ಟಡ ನಿರ್ಮಿಸಲಾಗಿದೆ. ಪೆರ್ಲ ಬಜಕೂಡ್ಲು ರಸ್ತೆ ಬದಿಯಲ್ಲಿ ಪ್ರಸ್ತುತ ಕಾರ್ಯಾಚರಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆ ಕಟ್ಟಡದ ಸಮೀಪ ಒಂದು ವರ್ಷದ ಹಿಂದೆ ಈ ಕಟ್ಟಡದ ನಿರ್ಮಾಣ ಪೂರ್ತಿಯಾಗಿದ್ದು ವಿಶಾಲವಾದ ಹಾಲ್, ವಿಶ್ರಾಂತಿ ಕೋಣೆ, ನೀರಿನ ಸೌಕರ್ಯ ಒದಗಿಸಲಾಗಿದೆ.ನೆಲಕ್ಕೆ ಟೈಲ್ಸ್ ಹಾಸಲಾಗಿದೆ. ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಕರ್ಯಗಳು ಪೂರ್ತಿಯಾಗದ ಹಿನ್ನೆಲೆಯಲ್ಲಿ ನಿರ್ಮಾಣ ಪೂರ್ತಿಯಾಗಿ ಒಂದು ವರ್ಷ ಕಳೆದರೂ ಕಟ್ಟಡಕ್ಕೆ ಈ ವರೆಗೆ ಉದ್ಘಾಟನೆ ಭಾಗ್ಯ ಲಭಿಸಿರಲಿಲ್ಲ.
      ಪ್ರಸ್ತುತ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಮಾರೋಪಾದಿ ಸಿದ್ಧತೆ ಎಂಬಂತೆ ಎಣ್ಮಕಜೆ ಪಂಚಾಯಿತಿ ಅಧ್ಯಕ್ಷೆ ಶಾರದಾ ವೈ. ಅಧ್ಯಕ್ಷತೆಯಲ್ಲಿ ಸೋಮವಾರ ಜನ ಪ್ರತಿನಿಧಿಗಳು, ಆರೋಗ್ಯ ಅಧಿಕಾರಿಗಳು, ಜಿಲ್ಲಾ ಇಂಪ್ಲಿಮೆಂಟ್ ಅಧಿಕಾರಿಗಳ ತುರ್ತು ಸಭೆ ನಡೆದಿದ್ದು ಜನ ಪ್ರತಿನಿಧಿಗಳಿಗೆ ಕಟ್ಟಡದ ಸೌಕರ್ಯ ವ್ಯವಸ್ಥೆಗಳ ಜವಾಬ್ದಾರಿ ವಹಿಸಿಕೊಡಲಾಗಿದೆ.ಜನಪ್ರತಿನಿಧಿಗಳು ಮತ್ತು ಸುಮಾರು 15ಮಂದಿ ಸ್ಥಳೀಯ ಯುವಕರು ಕಟ್ಟಡವನ್ನು ಶುಚಿಗೊಳಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರ ದಿನಗಳಲ್ಲಿ ವಿದ್ಯುತ್, ನೀರು, ಮತ್ತಿತರ ಮೂಲಭೂತ ವ್ಯವಸ್ಥೆ, ಪೂರಕ ಪರಿಕರಗಳನ್ನು ಅನುಷ್ಠಾನಗೊಳಿಸಲಾಗಿದೆ. ಒಪಿ ವಿಭಾಗ, 5 ಬೆಡ್ ಇತರ ಪೂರಕ ವ್ಯವಸ್ಥೆಗಳೊಂದಿಗೆ ತುರ್ತು ಸಂದರ್ಭಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಉಪಯೋಗಿಸುವ ರೀತಿಯ ಸಜ್ಜೀಕರಣ ಪೂರ್ತಿಯಾಗಿದ್ದು ರೋಗ ಲಕ್ಷಣ ಕಂಡು ಬಂದವರನ್ನು ಪ್ರತ್ಯೇಕ ನಿಗಾ ವಹಿಸಲು, ಮನೆಗಳಲ್ಲಿ ನಿಗಾದಲ್ಲಿರಲು ಸಾಧ್ಯವಾಗದವರನ್ನು ಇಲ್ಲಿ ದಾಖಲಿಸಲಾಗುವುದು.ತುರ್ತು ಸಂದರ್ಭದಲ್ಲಿ ಸೇವೆ ಒದಗಿಸುವ ನಿಟ್ಟಿನಲ್ಲಿ ನೂತನ ಕಟ್ಟಡದ ಮುಂಭಾಗದಲ್ಲಿ ಪಂಚಾಯಿತಿ ಅಂಬುಲೆನ್ಸ್ ಇರಿಸಲಾಗಿದೆ.
      ಕೊರೊನಾ ವೈರಸ್ ಕೇರ್ ಸೆಂಟರ್ ನಲ್ಲಿ ವಿಶೇಷ ವೈದ್ಯಕೀಯ ಸೇವೆ ಲಭಿಸಲಿದ್ದು ಅಗತ್ಯದ ಸಿಬ್ಬಂದಿಗಳ ಯಾದಿ ತಯಾರಿಸಿ ನೀಡುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
             

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries