ಮುಳ್ಳೇರಿಯ: ಶ್ರೀರಾಮಚಂದ್ರಾಪುರಮಠದ ಮಾರ್ಗದರ್ಶನದಲ್ಲಿರುವ ಮುಳ್ಳೇರಿಯಾ ಹವ್ಯಕ ಮಂಡಲದ ಚಂದ್ರಗಿರಿ ಹವ್ಯಕ ವಲಯದ ಮಾರ್ಚ್ ತಿಂಗಳ ಸಭೆ ಪನೆಯಾಲ ಗೋವಿಂದ ಭಟ್ ಇವರ ಮನೆಯಲ್ಲಿ ಇತ್ತೀಚೆಗೆ ಜರಗಿತು.
ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಆರಂಭವಾಯಿತು. ವಲಯ ಕಾರ್ಯದರ್ಶಿ ಗಣೇಶ್ ಕುಂಜತ್ತೋಡಿ ಗತಸಭೆಯ ವರದಿಯನ್ನು ಮಂಡಿಸಿದರು. ವಲಯ ಕೋಶಾಧಿಕಾರಿ ವಿನೋದ ಮರದ ಮೂಲೆ ಮಾಸಿಕ ಲೆಕ್ಕಪತ್ರವನ್ನು ಮಂಡಿಸಿದರು. ಮಂಡಲ ಶಾಸನತಂತ್ರ ಭದ್ರ ಭವಿಷ್ಯ ಸಂಯೋಜಕರಾದ ನವನೀತ ಪ್ರೀಯ ಇವರು ಉಪಸ್ಥಿತರಿದ್ದರು. ರುದ್ರ ಕಲಿಯಲು ಆಸಕ್ತಿ ಇರುವವರಿಗೆ ಶೀಘ್ರದಲ್ಲಿ ರುದ್ರ ತರಗತಿಯನ್ನು ಮುಳ್ಳೇರಿಯಾದಲ್ಲಿ ಪ್ರಾರಂಭಿಸುವುದಾಗಿ ವಲಯ ವೈದಿಕ ಪ್ರಧಾನರು ತಿಳಿಸಿದರು.
ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ನಿರ್ಮಾಣ ಕಾರ್ಯದ ಸಲುವಾಗಿ ವಲಯದಲ್ಲಿ ಕಾರ್ಯಗತಗೊಳಿಸಬೇಕಾದ ಮಾಹಿತಿಗಳನ್ನು ನೀಡಲಾಯಿತು.ಶ್ರೀ ಗುರುಪೀಠದಿಂದ ಬಂದ ವಿಶೇಷ ಸುತ್ತೋಲೆಯನ್ನು ತಿಳಿಸಲಾಯಿತು.
ಪದಾಧಿಕಾರಿಗಳು, ಗುರಿಕ್ಕಾರರು, ಶಿಷ್ಯ ಬಾಂಧವರು ಉಪಸ್ಥಿತರಿದ್ದರು. ರಾಮತಾರಕ ಮಂತ್ರ, ಶಾಂತಿ ಮಂತ್ರ, ಶಂಖನಾದ ಮತ್ತು ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.


