HEALTH TIPS

ಕರೊನಾ ಭೀತಿ ಮಧ್ಯೆ ಗಡಿ ಪ್ರದೇಶದ ವ್ಯಾಪಾರ ಕೇಂದ್ರಗಳಲ್ಲಿ ದುಪ್ಪಟು ಬೆಲೆಗೆ ಸಾಮಾಗ್ರಿಗಳ ಮಾರಾಟ: ಗ್ರಾಹಕರ ಆರೋಪ


         ಮಂಜೇಶ್ವರ: ಕರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಅಂಗಡಿ ಮಗ್ಗಟ್ಟುಗಳಿಗೆ ಜಿಲ್ಲಾಡಳಿತ ನಿಯಂತ್ರಣವನ್ನು ತಂದಿದ್ದು ಸೋಮವಾರಹಾಗೂ ಮಂಗಳವಾರ ಗಡಿ ಪ್ರದೇಶದ ವ್ಯಾಪಾರಿಗಳು ಸಾಮಾಗ್ರಿಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಿ ಲಾಭ ಪಡೆಯುತ್ತಿರುವುದಾಗಿ ಗ್ರಾಹಕರು ಆರೋಪಿಸಿದ್ದಾರೆ.
        ಆವಶ್ಯಕ ಸಾಮಾಗ್ರಿಗಳ ಮೇಲೆ ಕ್ರಯಗಳನ್ನು ಅಧಿಕಗೊಳಿಸಿ ಮಾರಾಟ ನಡೆಸಿರುವ ಬಗ್ಗೆ ಗಡಿ ಪ್ರದೇಶಗಳಿಂದ ವರದಿಯಾಗಿದೆ. ಹಲವರು ಈ ಬಗ್ಗೆ ಪತ್ರಿಕಾ ಕಚೇರಿಗಳಿಗೂ ಜಿಲ್ಲಾಧಿಕಾರಿ ಕಚೇರಿಗಳಿಗೂ, ಜನಪ್ರತಿನಿಧಿಗಳಿಗೂ ಮಾಹಿತಿ ನೀಡಿದ್ದಾರೆ. ಅಂತಹ ವ್ಯಾಪಾರಿಗಳ ವಿರುದ್ದ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳುವಂತೆ ನಾಗರಿಕರು ಹಾಗೂ ಸಂಘಟನೆಗಳು ಒತ್ತಾಯಿಸಿವೆ.
        ಗಡಿ ಪ್ರದೇಶದ ಬಹುತೇಕ ಅಂಗಡಿಗಳಲ್ಲೂ ಸೋಮವಾರ-ಮಂಗಳವಾರಗಳಂದು ಬೆಳಿಗ್ಗೆ 11 ಗಂಟೆಯಿಂದ ಭಾರೀ ಜನಸಂದಣಿ ಕಂಡು ಬಂತು. ಈ ಮಧ್ಯೆ ಕೆಲವೊಂದು ಮಂದಿ ಗಲ್ಪ್ ನಿಂದ ಆಗಮಿಸಿ ಮನೆಯಲ್ಲೇ ಐಸೋಲೆಶನ್ ನಲ್ಲಿದ್ದವರು ಕೂಡಾ ಅಂಗಡಿಗಳಿಗೆ ಸಾಮಾಗ್ರಿ ಖರೀದಿಗೆ ಆಗಮಿಸಿರುವ ಬಗ್ಗೆಯೂ ಮಾಹಿತಿ ಲಭಿಸಿದೆ.
      ಅಭಿಮತ:
   ದುಪ್ಪಟ್ಟು ಬಲೆಗೆ ಗ್ರಾಹಕರಿಂದ ಅಧಿಕ ಹಣ ವಸೂಲು ಮಾಡುತ್ತಿರುವ ಬಗ್ಗೆ ಮಾತುಗಳು ಕೇಳಿ ಬಂದಿದೆ. ಜನರು ಗ್ರಾಹಕರ ವೇದಿಕೆಗೆ ಲಿಖಿತ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಸ್ವಯಂ ಪ್ರೇರಿತವಾಗಿ ಗ್ರಾಹಕರ ವೇದಿಕೆ ಕ್ರಮ ಕೈಗೊಳ್ಳಲು ಚಿಂತಿಸಿದೆ.
                                          ಅಬ್ದುಲ್ ರಹಮಾನ್ ಉದ್ಯಾವರ
                                       ಕಾರ್ಯದರ್ಶಿ. ಗ್ರಾಹಕರ ವೇದಿಕೆ ಮಂಜೇಶ್ವರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries