ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಗೋಡ್ಳು ಕಂಠಪ್ಪಾಡಿ ಶ್ರೀಸುಬ್ರಹ್ಮಣ್ಯ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವನ್ನು ಕೊರೊನಾ ರೋಗಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕ್ಷೇತ್ರ ಆಡಳಿತ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ತುರ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರೋಗ ನಿಯಂತ್ರಣದ ಬಳಿಕ ಅಧಿಕೃತರ ಸಂಪೂರ್ಣ ಆದೇಶ ಬಂದ ಮೇಲೆ ಬ್ರಹ್ಮಕಲಶೋತ್ಸವ ವಿಧಿವಿಧಾನಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಶುಕ್ರವಾರ ಆರಂಭಗೊಂಡು ಮಾ.28ರ ವರೆಗೆ ನಡೆಯಲಿತ್ತು.
ಕುಕ್ಕಂಗೋಡ್ಲು ಕ್ಷೇತ್ರ ಬ್ರಹ್ಮಕಲಶ ತಾತ್ಕಾಲಿಕ ಮುಂದೂಡಿಕೆ
0
ಮಾರ್ಚ್ 20, 2020