ಕಾಸರಗೋಡು: ಸಮಾನ ವಿಷಯಕ್ಕೆ ಸಂಬಂಧಿಸಿ ಏಕಕಾಲಕ್ಕೆ ಒಂದಕ್ಕಿಂತ ಅಧಿಕ ಕಡೆಗಳಲ್ಲಿ ದೂರು ಸಲ್ಲಿಸುವ ರೀತಿ ಸರಿಯಾದುದಲ್ಲ ಎಂದು ರಾಜ್ಯ ಮಹಿಳಾ ಆಯೋಗ ಸದಸ್ಯರಾದ ಷಾಹಿದಾ ಕಮಾಲ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ನಡೆದ ರಾಜ್ಯ ಮಹಿಳಾ ಆಯೋಗದ ಅದಾಲತ್‍ನಲ್ಲಿ ಅವರು ಮಾತನಾಡಿದರು.
ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನ್ಯಾಯಾಲಯದ ಪರಿಶೀಲನೆಯಲ್ಲಿರುವ ವೇಳೆಯೇ ಇದೇ ದೂರನ್ನು ಮಹಿಳಾ ಆಯೋಗಕ್ಕೂ ಸಲ್ಲಿಸುವ ಕ್ರಮ ನಡೆಯುತ್ತಿದೆ. ಈ ವೇಳೆ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ವಿಚಾರವನ್ನು ಕೆಲವರು ಮರೆಮಾಚುತ್ತಾರೆ. ನ್ಯಾಯಾಲಯದ ಪರಿಗಣನೆಯಲ್ಲಿರುವ ಪ್ರಕರಣಗಳನ್ನು ಮಹಿಳಾ ಆಯೋಗ ಪರಿಶೀಲಿಸುವುದಿಲ್ಲ. ಇದರಿಂದ ಸಮಯ ವ್ಯರ್ಥವಾಗುವುದಲ್ಲದೆ, ನ್ಯಾಯಕ್ಕಾಗಿ ಮಹಿಳಾ ಆಯೋಗವನ್ನಷ್ಟೇ ಆಶ್ರಯಿಸುವವರಿಗೂ ಸಮಸ್ಯೆಯನ್ನುಂಟುಮಾಡುತ್ತಿದೆ. ಇತರ ಪ್ರಕರಣಗಳಿಗೆ ಸಂಬಂಧಪಟ್ಟ ತಮ್ಮ ವೈಮನಸ್ಯವನ್ನು ತಮ್ಮಪತ್ನಿಯರ ಹೆಸರಲ್ಲಿ ಬೇರೆ ದೂರುಗಳನ್ನು ಸಲ್ಲಿಸಿ ನೆರೆಮನೆಯ ಮಂದಿಯ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸುತ್ತಿರುವ ಪ್ರಸಂಗಗಳೂ ಜಿಲ್ಲೆಯಲ್ಲಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇದು ಆರೋಗ್ಯ ಪೂರ್ಣ ಕ್ರಮವಲ್ಲ. ಇಂಥಾ 2 ದೂರುಗಳು ಈ ಬಾರಿಯ ಅದಾಲತ್‍ನಲ್ಲಿ ಸಲ್ಲಿಕೆಯಾಗಿವೆ. ಇತರ ಕೆಲವು ಜಿಲ್ಲೆಗಳಲ್ಲಿ ಪೆÇಲೀಸರ ವಿರುದ್ಧ ಮಹಿಳೆಯರನ್ನು ಬಳಸಿ ದೂರು ಕೊಡಿಸುವ ಕ್ರಮವೂ ಕಂಡುಬರುತ್ತಿದೆ.
ಈ ಸಂಬಂಧದ ದೂರಿನ ಬಗ್ಗೆ ದೂರುದಾತೆಯರ ಅಹವಾಲನ್ನುಮತ್ತು ಆರೋಪಿಯ ಹೇಳಿಕೆಯನ್ನು ಆಯೋಗ ಅದಾಲತ್ ನಲ್ಲಿ ಆಲಿಸಿದೆ. ಈ ಸಂಬಂಧ ಡಿ.ವೈ.ಎಸ್.ಪಿ. ನೀಡಿರುವ ವರದಿ ಅಭ್ಯಸಿಸಿ ನಂತರದ ಕ್ರಮ ಕೈಗೊಳ್ಳುವುದಾಗಿ ಆಯೋಗ ತಿಳಿಸಿದೆ.
ಈ ಸಂದರ್ಭ ಸದಸ್ಯರಾದ ಷಾಹಿದಾ ಕಮಾಲ್ ಮತ್ತು ಇ.ಎಂ.ರಾಧಾ ಅವರ ನೇತೃತ್ವದಲ್ಲಿ ಅದಾಲತ್ ಜರುಗಿತು.ನ್ಯಾಯವಾದಿಗಳಾದ ಎಸ್.ರೇಣುಕಾದೇವಿ, ತಂಗಚ್ಚಿ , ಪಿ. ಸಿಂಧು, ಮಹಿಳಾಘಟಕ ಸಿ.ಐ. ಸಿ.ಭಾನುಮತಿ, ಸಿ.ಪಿ.ಒ. ಸುಪ್ರಿಯಾಕೆ.ವಿ., ಫ್ಯಾಮಿಲಿ ಕೌನ್ಸಿಲರ್ ಎಸ್. ರಮ್ಯಾಮೋಳ್ ಉಪಸ್ಥಿತರಿದ್ದರು.
10 ದೂರುಗಳಿಗೆ ತೀರ್ಪು:
ಮಂಗಳವಾರ ನಡೆದ ರಾಜ್ಯ ಮಹಿಳಾ ಆಯೋಗದ ಅದಾಲತ್ ನಲ್ಲಿ 40 ದೂರುಗಳನ್ನು ಪರಿಶೀಲಿಸಲಾಗಿತ್ತು. 10ದೂರುಗಳಿಗೆ ತೀರ್ಪು ನೀಡಲಾಗಿದೆ. ಮೂರು ಪ್ರಕರಣಗಳಲ್ಲಿ ಆಯಾ ವಿಭಾಗಗಳ ವರದಿ ಕೋರಲಾಗಿದೆ. 27 ಪ್ರಕರಣಗಳನ್ನುಮುಂದಿನ ಅದಾಲತ್ ನಲ್ಲಿ ಪರಿಶೀಲಿಸುವುದಾಗಿ ತಿಳಿಸಲಾಗಿದೆ.

