ಕಾಸರಗೋಡು: ಕೊರೊನಾ ದಿನನಿತ್ಯ ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅತೀವ ಜಾಗರೂಕತೆ ಪಾಲಿಸಬೇಕು. ಆರೋಗ್ಯ ಕಾರ್ಯಕರ್ತರು ತಿಳಿಸುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು.
ವಿದೇಶಗಳಿಂದ ಊರಿಗೆ ಮರಳುವವರು ಮತ್ತು ಅವರೊಂದಿಗೆ ಸಂಪರ್ಕ ಇರಿಸುವವರು ಕಡ್ಡಾಯವಾಗಿ ಮನೆಗಳಲ್ಲಿ ನಿಗಾದಲ್ಲಿ ಇರಬೇಕು. ಕೊರೊನಾ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬೇಕು. ಕೊರೊನಾ ವೈರಸ್ ಸಾಮಾಜಿಕವಾಗಿ ಹರಡುವ ನಿಟ್ಟಿನಲ್ಲಿ ಜನಸಂಪರ್ಕ ನಡೆಸಕೂಡದು ಎಂದವರು ತಿಳಿಸಿದ್ದಾರೆ.

