ಪೆರ್ಲ:ಎಣ್ಮಕಜೆ ಗ್ರಾಪಂ.ನಲ್ಲಿ ಬುಧವಾರ ಮಧ್ಯಾಹ್ನ 2020-21ರ ವಾರ್ಷಿಕ ಬಜೆಟ್ ಮಂಡಿಸಲಾಗಿದ್ದು, ಈ ಸಂದರ್ಭದಲ್ಲಿ 2019-20ರ ಜನಪರ ಯೋಜನೆಗಳನ್ನು ಶೇ.100ರಷ್ಟು ಪೂರ್ತೀಕರಿಸಿದ ಪೆರ್ಲ ಕೃಷಿ ಭವನದ ಕೃಷಿ ಅಧಿಕಾರಿ ವಿನೀತ್ ವಿ.ವರ್ಮ ಅವರನ್ನು ಪಂಚಾಯಿತಿ ಆಡಳಿತ ಸಮಿತಿ ನೇತೃತ್ವದಲ್ಲಿ ಅಭಿನಂದಿಸಲಾಯಿತು.ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ, ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಪ್ರಶಂಸಾ ಫಲಕ ನೀಡಿ ಅಭಿನಂದಿಸಿದರು. ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷರು, ವಾರ್ಡ್ ಸದಸ್ಯರು, ವಿವಿಧ ಇಲಾಖೆ ಮತ್ತು ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪೆರ್ಲ ಕೃಷಿ ಅಧಿಕಾರಿಗೆ ಅಭಿನಂದನೆ
0
ಮಾರ್ಚ್ 20, 2020