ಕಾಸರಗೋಡು: ರಾಜ್ಯದ ವಿವಿಧೆಡೆ ವಿತರಣೆಗೆ ಒಯ್ಯುತ್ತಿದ್ದ ಆರೋಪದಲ್ಲಿ 10 ಟನ್ ಕೊಳೆತ ಮೀನುಗಳನ್ನು ಆಹಾರ ಸುರಕ್ಷೆ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆ ಸಿಬ್ಬಂದಿ ವಶಪಡಿಸಿದ್ದಾರೆ. ಬುಧವಾರ ಚೆರುವತ್ತೂರು ಚೆಕ್ ಪೆÇೀಸ್ಟ್ ನಲ್ಲಿ ನಡೆಸಿದ ವಾಹನ ತಪಾಸಣೆಯಲ್ಲಿ ಇವು ಪತ್ತೆಯಾಗಿವೆ. ಗುಜರಾತ್ ನಿಂದ ಇವನ್ನು ತರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು. ವಶಪಡಿಸಲಾದ ಮೀನುಗಳನ್ನು ಮೊಬೈಲ್ ಅಕ್ವಾ ಲ್ಯಾಬ್ ಮೂಲಕ ಸ್ಥಳದಲ್ಲೇ ತಪಾಸಣೆ ನಡೆಸಲಾಗಿತ್ತು. 320 ಪೆಟ್ಟಿಗೆಗಳಲ್ಲಿ ಇರಿಸಲಾಗಿದ್ದ ವಿವಿಧ ಜಾತಿಗಳ ಮೀನುಗಳು ಕೊಳೆತು ದುಗರ್ಂಧ ಬೀರುತ್ತಿದ್ದುವು. ಇವನ್ನು ಮಡಿಕೈಯ ಸಂಸ್ಕರಣ ಕೇಂದ್ರಕ್ಕೆ ಒಯ್ದು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವರು.
10 ಟನ್ ಕೊಳೆತ ಮೀನುಗಳ ಪತ್ತೆ
0
ಏಪ್ರಿಲ್ 22, 2020