ಕಾಸರಗೋಡು: ಜಿಲ್ಲೆಯ ತುರ್ತು ಪರಿಸ್ಥಿತಿ ಪರಿಶೀಲಿಸಿ 3 ವೆಂಟಿಲೆಟರ್ ಗಳು ಲಭ್ಯವಾಗಿವೆ. ದೇಹಕ್ಕೆ ಪಾಶ್ರ್ವ ಫಲ ನೀಡದೇ ಇರುವ (ನಾನ್ ಇನ್ವಾಸಿವ್) , 7 ಲಕ್ಷ ರೂ. ಮೌಲ್ಯದ ವೆಂಟಿಲೇಟರ್ ಗಳನ್ನು ತರಲಾಗಿದೆ. ಕೊಯಮತ್ತೂರು ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ವಿ-ಗಾರ್ಡ್ ಸಂಸ್ಥೆಯ ಹಿರಿಯ ಪ್ರಬಂಧಕ ಪ್ರದೀಷ್ ಪಿ. ಅವರ ಮುತುವರ್ಜಿಯಿಂದ ಈ ವೆಂಟಿಲೇಟರ್ ಲಭ್ಯವಾಗಿದೆ. ಜಿಲ್ಲೆಯ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶೇಷ ವಾಹನದಲ್ಲಿ ಕೊಯಮತ್ತೂರಿನಿಂದ ಕಾಞಂಗಾಡಿಗೆ ವೆಂಟಿಲೇಟರ್ ತಲಪಿಸಲಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆ, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ, ಪನತ್ತಡಿ ತಾಲೂಕು ಆಸ್ಪತ್ರೆ ಗಳಲ್ಲಿ ತಲಾ ಒಂದು ಬಳಸುವಂತೆ ನೀಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಕೆ.ವಿ. ವೆಂಟಿಲೇಟರ್ ಗಳನ್ನು ಪಡೆದುಕೊಂಡರು. ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಜಿಲ್ಲಾ ಆಸ್ಪತ್ರೆ ಆರ್.ಎಂ.ಒ. ಡಾ.ರಿಜಿತ್ ಕೃಷ್ಣನ್, ಹಿರಿಯ ವರಿಷ್ಠಾಧಿಕಾರಿ ಗಿರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲೆಗೆ 3 ವೆಂಟಿಲೇಟರ್ ಗಳು
0
ಏಪ್ರಿಲ್ 22, 2020