HEALTH TIPS

ಡೆಂಗೆ ಜ್ವರ : ಪ್ರತಿರೋಧ ಚಟುವಟಿಕೆ ಚುರುಕು


       ಕಾಸರಗೋಡು: ಜಿಲ್ಲೆಯ ಮಲೆನಾಡ ಪ್ರದೇಶಗಳಲ್ಲಿ ಡೆಂಗೆಜ್ವರ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪ್ರತಿರೋಧ ಚಟುವಟಿಕೆ ಚುರುಕುಗೊಳಿಸಿದೆ.
    ಮಲೆನಾಡ ಪ್ರದೇಶಗಳಾದ ವೆಸ್ಟ್ ಏಳೇರಿ, ಕುತ್ತಿಕೋಲ್, ಪಾಣತ್ತೂರು, ನರ್ಕಿಲಕ್ಕಾಡ್, ಬೇಡಡ್ಕ ಪ್ರದೇಶಗಳಲ್ಲಿ ಡೆಂಗೆಜ್ವರ ವರದಿಯಾಗಿದೆ.
        ಜಿಲ್ಲೆಯ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಫೀಲ್ಡ್ ಸಿಬ್ಬಂದಿ, ಜಿಲ್ಲಾ ವೆಕ್ಟರ್ ಕಂಟ್ರೋಲ್ ಯೂನಿಟ್ ಜಂಟಿಯಾಗಿ ಸೊಳ್ಳೆ ಸಹಿತ ಕೀಟನಾಶಕ ಚಟುವಟಿಕೆ, ಜನಜಾಗೃತಿ ನಡೆಸುತ್ತಿದ್ದಾರೆ. ನರ್ಕಿಲಕ್ಕಾಡ್, ಕುತ್ತಿಕೋಲ್, ಪನತ್ತಡಿ, ಚಿತ್ತಾರಿಕಲ್ಲ್ ಪ್ರದೇಶಗಳಲ್ಲಿ ಫಾಗಿಂಗ್ ಕ್ರಮ ನಡೆಯುತ್ತಿದೆ. ಜನಜಾಗೃತಿ ಅಂಗವಾಗಿ ಮನೆಮನೆ ಸಂದರ್ಶನ ನಡೆಯುತ್ತಿದೆ.                   
    ಸಾರ್ವಜನಿಕರು ಈ ನಿಟ್ಟಿನಲ್ಲಿ ಜಾಗೃತಿ ಕ್ರಮ ಕೈಗೊಳ್ಳಬೇಕು. ಗೆರಟೆ, ಅಡಕೆ ಹಾಳೆ, ಟಯರ್, ಪ್ಲಾಸ್ಟಿಕ್ ಪಾತ್ರೆಗಳು, ಮೊಟ್ಟೆಯ ಅವಶೇಷ, ಟರ್ಪಾಲ್ ಶೀಟ್ ಇತ್ಯಾದಿಗಳನ್ನು ಮನೆಯ ಆವರಣದಿಂದ ತೆರವುಗೊಳಿಸಬೇಕು. ಅವುಗಳಲ್ಲಿ ನೀರು ಕಟ್ಟಿನಿಂತರೆ ಅಲ್ಲಿ ಕೀಟಗಳ ಉತ್ಪತ್ತಿ ಅಧಿಕವಾಗಿ ರೋಗ ಹೆಚ್ಚಳ ಸಂಭವಿಸುತ್ತದೆ. ಜಲಕ್ಷಾಮ ತಲೆದೋರುತ್ತಿರುವ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ನೀರು ತುಂಬಿಸಿದ ಪಾತ್ರೆಗಳನ್ನು ಶುಚೀಕರಿಸಬೇಕು ಸಹಿತ ಆರೋಗ್ಯ ಇಲಾಖೆ ತಿಳಿಸುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. 
              ಡೆಂಗೆ ಡೌನ್:
    ಡೆಂಗೆ ಜ್ವರ, ಮಲೇರಿಯ ಇತ್ಯಾದಿ ಸೊಳ್ಳೆಗಳ ಮೂಲಕ ಹರಡುವ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಡೆಂಗೆ ಡೌನ್ ಚಾಲೆಂಜ್ ಸಹಿತ ರಂಗದಲ್ಲಿದೆ. ಕೊರೋನಾ ಸೋಂಕು ನಿಯಂತ್ರಣದಲ್ಲಿ ಲಾಕ್ ಡೌನ್ ಆದೇಶ ಜಾರಿಗೊಂಡ ಹನ್ನೆಲೆಯಲ್ಲಿ ಸೋಂಕು ಹರಡುವಿಕೆ ಗಮನಾರ್ಹ ವಾಗಿ ನಿಯಂತ್ರಣಗೊಂಡ ಹಿನ್ನೆಲೆಯಲ್ಲಿ ಡೆಂಗೆ ಡೌನ್ ಚಾಲೆಂಜ್ ನಡೆಸಲಾಗುತ್ತಿದೆ. ಇದರ ಅಂಗವಾಗಿ ಮನೆಯ ಆವರಣದಲ್ಲಿ ಸೋರ್ಲಲೆಯ ಸಂತಾನೋತ್ಪತ್ತಿಯ ಕೇಂದ್ರಗಳನ್ನು ಪತ್ತೆಮಾಡಿ ಫೆÇೀಟೋ ಕ್ಲಿಕ್ಕಿಸಿ ವಾಟ್ಸ್ ಆಪ್ ನಂಬ್ರ : 6282154544 ಯಾ massmediaksd2019@gmail.comಎಂಬ ವಿಳಾಸಕ್ಕೆ ಕಳುಹಿಸಬೇಕು. ಜೊತೆಗೆ ಫೆÇಟೋ ಕಳುಹಿಸುವವರ ಹೆಸರು, ವಿಳಾಸ, ದೂರವಾಣಿ ನಂಬ್ರ, ವಾರ್ಡ್ ನಂಬ್ರ, ಸ್ಥಳೀಯಾಡಳಿತ ಸಂಸ್ಥೆಯ ಹೆಸರು ಇತ್ಯಾದಿ ಕಳುಹಿಸಬೇಕು.
                                                                         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries