HEALTH TIPS

ಜಿಲ್ಲೆಗೆ ಮತ್ತೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ!- ರೂಪು ರೇಖೆ ರೆಡಿ!

     
          ಮಂಜೇಶ್ವರ: ಭಯಾನಕ ಕೊರೋನಾ ವೈರಸ್ ನಿಂದ ಉಂಟಾದ ಲಾಕ್ ಡೌನ್ ನಿಂದಾಗಿ ತತ್ತರಿಸಿರುವ ಕಾಸರಗೋಡು ಜಿಲ್ಲೆಗೆ ಆಸ್ಪತ್ರೆಗಳು ವರದಾನವಾಗುತ್ತಿದೆ.
          ಮಂಗಳೂರನ್ನೇ ಆಶ್ರಯಿಸಿದ್ದ ಕಾಸರಗೋದು ಜಿಲ್ಲೆಯ ಜನತೆಯನ್ನು ಲಾಕ್ ಡೌನ್ ಹೆಸರಲ್ಲಿ ಪರಿಚಯವೇ ಇಲ್ಲದಂತೆ ಮಾಡಿ ಗಡಿ ಭಾಗದಲ್ಲಿ 15 ರೋಗಿಗಳು ಚಿಕಿತ್ಸೆ ಇಲ್ಲದೆ ಸಾವನ್ನಪ್ಪಲು ಕಾರಣರಾದ ಕರ್ನಾಟಕ ಸರಕಾರ ಹಾಗೂ ಮಂಗಳೂರು ಆಸ್ಪತ್ರೆಯ ವೈದ್ಯರುಗಳ ಹಾಗೂ ಆಡಳಿತ ಮಂಡಳಿಯ ಕಠಿಣ ನಿಲುವಿನಿಂದ ರೋಸಿ ಹೋಗಿರುವ ಕಾಸರಗೋಡಿನ ಉದ್ಯಮಿಗಳು ಇದೀಗ ಕೇರಳ ಸರಕಾರದ ಬೆಂಬಲದೊಂದಿಗೆ ಜಿಲ್ಲೆಯಲ್ಲೇ ಉತ್ತಮ ಸೌಕರ್ಯವಿರುವ ನುರಿತ ವೈದ್ಯರುಗಳನ್ನೊಳಗೊಂಡ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭಿಸುವ ರೀತಿಯಲ್ಲಿ ಆಸ್ಪತ್ರೆ ನಿರ್ಮಿಸಲು ಮುಂದಾಗಿರುವುದು ಕಾಸರಗೋಡು ಜಿಲ್ಲೆಯ ಜನತೆಗೆ ವರದಾನವಾಗುತ್ತಿದೆ.
       ಇದರಂತೆ ಬಿಲ್ಡಪ್ ಕಾಸರಗೋಡು ನ ಭಾಗವಾಗಿ ಮಂಜೇಶ್ವರ ತಾಲೂಕಿನ ವ್ಯಾಪ್ತಿಯಲ್ಲಿರುವ ಮಂಜೇಶ್ವರದ ಹೃದಯಭಾಗ ಹೊಸಂಗಡಿ ಪರಿಸರದಲ್ಲಿ ಎಲ್ಲಾ ಭಾಗದ ಜನರಿಗೂ ಅನುಕೂಲವಾಗುವ ರೀತಿಯಲ್ಲಿ ಸುಮಾರು 50 ಸಾವಿರ ಸ್ಕ್ಯಾರ್ ಫೀಟ್ ವಿಸ್ತೀರ್ಣದಲ್ಲಿ ದೋಹಾ ಜದೀದ್ ಗ್ರೂಪ್ ಹಾಗೂ ಪ್ರಿಯದರ್ಶಿನಿ ಗ್ರೂಪ್ ಜಂಠಿಯಾಗಿ ಸುಸಜ್ಜಿತವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ರೂಪು ರೇಖೆಯನ್ನು ತಯಾರಿಸಿ ಸುಮಾರು ಆರು ತಿಂಗಳಿನಿಂದ ಹನ್ನೆರಡು ತಿಂಗಳಿನೊಳಗೆ ಈ ಆಸ್ಪತ್ರೆಯನ್ನು ನಾಡಿಗೆ ಸಮರ್ಪಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ.
      ಇದರ ಮೊದಲ ಘಟ್ಟವೆಂಬಂತೆ ಆಸ್ಪತ್ರೆ ನಿರ್ಮಿಸಲು ಯೋಜನೆ ಹಾಕಿಕೊಂಡಿರುವ ಸ್ಥಳಕ್ಕೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಸಂದರ್ಶನ ನಡೆಸಿ ಕಾಮಗಾರಿಯ ರೂಪು ರೇಖೆಯ ನಕ್ಷೆಯನ್ನು ಪರಿಶೀಲಿಸಿ ಇಂಜಿನಿಯರ್ ರವರಿಂದ ಮಾಹಿತಿಯನ್ನು ಕಲೆ ಹಾಕಿದರು.
      ಈಗಾಗಲೇ ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಹೊಸಂಗಡಿಯಲ್ಲಿ ಪ್ರಿಯದರ್ಶಿನಿ ಲ್ಯಾಬ್ ನ್ನು ನಡೆಸಿಕೊಂಡು ಬರುತ್ತಿರುವ ಮಂಜೇಶ್ವರದ ಜನತೆಯ ಮನವನ್ನು ಗೆದ್ದ ಹಾಗೂ ಇದೀಗ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿರುವ ಪ್ರಿಯದರ್ಶಿನಿ ಆಸ್ಪತ್ರೆಯ ಎಂ ಡಿ ಯೂ ಆಗಿರುವ ಹಮೀದ್ ಹೊಸಂಗಡಿಯವರು ಏಷ್ಯಾವಿಷನ್ ನ್ಯೂಸಿನೊಂದಿಗೆ ನೊಂದಿಗೆ ಮಾತನಾಡಿ ಸಪ್ತಭಾಷಾ ಭೂಮಿಯಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಆರೋಗ್ಯ ಸೇವೆಯಲ್ಲಿ ಬಹಳ ಹಿಂದಿರುವುದನ್ನು ಮನಗಂಡು ಮಾತ್ರವಲ್ಲದೆ ಕೊರೋನಾ ಲಾಕ್ ಡೌನ್ ಸಮಯದಲ್ಲಿ ಗಡಿ ಭಾಗದ ರೋಗಿಗಳು ಚಿಕಿತ್ಸೆಗಾಗಿ ಪರಿತಪಿಸುತ್ತಿರುವ ಕರುಣಾಜನಕವಾದ ಸ್ಥಿತಿಯನ್ನು ಅರ್ಥೈಸಿಕೊಂಡು ನಾವು ಈ ಒಂದು ಸೂಪರ್ ಸ್ಪೆಷ್ಜಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಮುಂದಾಗಿರುವುದಾಗಿ ಅವರು ಹೇಳಿದರು.
      ಈ ಸಂದರ್ಭ ಸಮರಸ ಸುದ್ದಿಯೊಂದಿಗೆ ಪ್ರತಿಕ್ರಿಯಿಸಿದ ಸದ್ರಿ ನಿರ್ಮಾಣವಾಗಲಿರುವ ಪ್ರಿಯದರ್ಶಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಉಸ್ತುವಾರಿಯನ್ನು ವಹಿಸಿಕೊಂಡಿರುವ ಆಮ್ಕೋ ಕನ್ ಸ್ಟ್ರಕ್ಷನ್ಸ್ ಗ್ರೂಪಿನ ಇಂಜಿನಿಯರ್ ಅಕ್ನಾಸ್ ರವರು ಮಾತನಾಡಿ ಹೊಸಂಗಡಿಯಲ್ಲಿ ನಿರ್ಮಾಣವಾಗಲಿರುವ ಪ್ರಿಯದರ್ಶಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸುಸಜ್ಜಿತವಾದ ಎಲ್ಲಾ ಸೌಕರ್ಯಗಳಿಂದೊಡಗೂಡಿದ ವ್ಯವಸ್ಥೆಯೊಂದಿಗೆ ನಿರ್ಮಿಸುವಂತೆ ಆಡಳಿತ ಮಂಡಳಿ ನನಗೆ ಜವಾಭ್ದಾರಿಯನ್ನು ನೀಡಿದೆ. ಕೊರೋನಾ ಲಾಕ್ ಡೌನ್ ಮುಗಿದ ಕೂಡಲೇ ಆಸ್ಪತ್ರೆಯ ಕಾಮಗಾರಿಯನ್ನು ಆರಂಭಿಸಲಿದ್ದೇವೆ. ಸುಮಾರು 50 ಕ್ಕಿಂತಲೂ ಮಿಗಿಲಾದ ಹಾಸಿಗೆಗಳಿರುವ ಮಂಗಳೂರಿನಲ್ಲಿ ಲಭಿಸುವ ಬಹುತೇಕ ಸೌಕರ್ಯುಗಳನ್ನೊಳಗೊಂಡ ರೀತಿಯಲ್ಲಿ ನಿರ್ಮಿಸುವಂತೆ ಸಲಹೆ ಲಭಿಸಿರುವುದಾಗಿ ಅವರು ಹೇಳಿದರು.
     ರೋಗಿಗಳ ರಕ್ತ ಹೀರುವ ದರವನ್ನು ವಸೂಲಿ ಮಾಡಿ ತುರ್ತು ಸಂದರ್ಭ ಚಿಕಿತ್ಸೆ ನೀಡದೆ ರೋಗಿಗಳು ಸಾವನ್ನಪ್ಪುವ ಸ್ಥಿತಿಗೆ ತಲುಪಿಸಿದ ಮಂಗಳೂರು ಆಸ್ಪತ್ರೆಗಳ ಆಡಳಿತ ಸಮಿತಿಯಿಂದ ಬೇಸತ್ತ ನಾವು ಕಡಿಮೆ ದರದಲ್ಲಿ ರೋಗಿಗಳು ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಈ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಅವರು ಹೇಳಿರುವರು.  ಈ ಸಂದರ್ಭ ಕಾರ್ಯದರ್ಶಿ ಇಮ್ತಿಯಾಝ್ ಪಾಪಿಲ ಹಾಗೂ ಮೆಡಿಕಲ್ ಡಿಸೈನರ್ ಗೈಡ್ ಆಸಿಫ್ ಜೊತೆಗಿದ್ದರು.
    ಏನೇನಿರಲಿದೆ:
      ಮೊದಲ ಹಂತದಲ್ಲಿ 50 ಕ್ಕಿಂತಲೂ ಮಿಕ್ಕ ಹಾಸಿಗೆಗಳನ್ನು ಒಳಗೊಂಡ ಆಸ್ಪತ್ರೆಯಲ್ಲಿ ವಿವಿಧ ರೀತಿಯ ಹತ್ತು ಡಿಪಾರ್ಟ್ ಮೆಂಟ್ ಗಳಲ್ಲಾಗಿ ಒ ಬಿ ಜಿ, ಓರ್ಥೋ, ಎಮ್ಮರ್ ಜೆನ್ಸಿ ಟ್ರೋಮಾ, ಪೀಡಿಯಾಟ್ರಿಕ್, ನೆಫೆÇ್ರೀಲೋಜಿ, ಆಪರೇಶನ್ ಥಿಯೇಟರುಗಳನ್ನು ಅಳವಡಿಸಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries