HEALTH TIPS

ಕೊರೊನಾ : ಕಾಸರಗೋಡಿನಲ್ಲಿ ಹೊಸ ಪ್ರಕರಣವಿಲ್ಲ-ರಾಜ್ಯದಲ್ಲಿ 11 ಪ್ರಕರಣ ನಿಖರ-4 ಹಾಟ್ ಸ್ಪೋಟ್ ಗಳಿಗೆ ವಿನಾಯಿತಿ

       
                     
       ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಇದೇ ವೇಳೆ ಕೇರಳದಲ್ಲಿ 11 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಪಾಲ್ಘಾಟ್‍ನ ಒಬ್ಬರು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ.
       ಬುಧವಾರ ದೃಢಗೊಂಡಿರುವ 11 ಮಂದಿಯ ಪೈಕಿ ಕಣ್ಣೂರು ಜಿಲ್ಲೆಯಲ್ಲಿ 7 ಮಂದಿ,  ಕಲ್ಲಿಕೋಟೆ-2, ಮಲಪ್ಪುರಂ ಮತ್ತು ಕೋಟ್ಟಯಂ ತಲಾ ಒಬ್ಬರಂತೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಕೇರಳದಲ್ಲಿ ಈ ವರೆಗೆ 437 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೀಗ ವಿವಿಧ ಆಸ್ಪತ್ರೆಗಳಲ್ಲಿ 127 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
       ರಾಜ್ಯದಲ್ಲಿ ಒಟ್ಟು 29150 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 28804 ಮಂದಿ ಮನೆಗಳಲ್ಲೂ, 346 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. 20821 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು ಲಭ್ಯ 19998 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. ಬುಧವಾರ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 95 ಮಂದಿ ದಾಖಲಾಗಿದ್ದಾರೆ.
ಕೊರೊನಾ ಬಾ„ತರಲ್ಲಿ ಐವರು ವಿದೇಶದಿಂದ ಬಂದವರು. ಮೂವರು ಸಂಪರ್ಕದ ಮೂಲಕ ಸೋಂಕು ಬಾ„ಸಿದೆ. ಕಲ್ಲಿಕೋಟೆಯ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಕೊರೊನಾ ಖಾತರಿಗೊಂಡಿದೆ. ಮೆಡಿಕಲ್ ಕಾಲೇಜಿನ ಇಬ್ಬರು ಹೌಸ್ ಸರ್ಜನ್‍ಗಳು ಕೇರಳದ ಹೊರಗಿನಿಂದ ರೈಲುಗಾಡಿಯಲ್ಲಿ ಬಂದವರು. 
           ಜಿಲ್ಲೆಯ 4 ಪಂಚಾಯತ್‍ಗಳು ಹಾಟ್ ಸ್ಪೋಟ್‍ನಿಂದ ವಿನಾಯಿತಿ :
     ಕಾಸರಗೋಡು ಜಿಲ್ಲೆಯಲ್ವಿ ಕೋವಿಡ್ ಹಾಟ್‍ಸ್ಪೋಟ್ ಯಾದಿಯಿಂದ ನಾಲ್ಕು ಪಂಚಾಯತ್‍ಗಳನ್ನು ಕೈಬಿಡಲಾಗಿದೆ.  ರೋಗ ಬಾಧಿತರಿಲ್ಲದ ಮಂಜೇಶ್ವರ, ಕೋಡೋಂ-ಬೇಳೂರು ಪಂಚಾಯತ್‍ಗಳೂ, ರೋಗ ಬಾಧಿತರಿದ್ದ ಪಳ್ಳಿಕೆರೆ ಮತ್ತು ಕುಂಬಳೆ ಗ್ರಾಮ ಪಂಚಾಯತ್‍ಗಳನ್ನು ಈ ಯಾದಿಯಿಂದ ಕೈಬಿಡಲಾಗಿದೆ. ಇದೇ ವೇಳೆ ಮುಳಿಯಾರು ಪಂಚಾಯತ್‍ನ್ನು ಹೊಸದಾಗಿ ಹಾಟ್‍ಸ್ಪೋಟ್ ಯಾದಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಹಾಟ್ ಸ್ಟೋಟ್‍ಗಳು 11 ಕ್ಕಿಳಿಯಿತು.
            148 ಕೇಸು ದಾಖಲು :
     ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 148 ಕೇಸುಗಳನ್ನು ದಾಖಲಿಸಲಾಗಿದೆ. 88 ಮಂದಿಯನ್ನು ಬಂಧಿಸಲಾಗಿದ್ದು, 29 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 6 ಕೇಸುಗಳು, ಕುಂಬಳೆ 4, ಕಾಸರಗೋಡು 12, ವಿದ್ಯಾನಗರ 13, ಬದಿಯಡ್ಕ 12, ಬೇಡಗಂ 4, ಆದೂರು 8, ಅಂಬಲತ್ತರ 1, ಬೇಕಲ 9, ಹೊಸದುರ್ಗ 3, ನೀಲೇಶ್ವರ 3, ಚಂದೇರ 8, ಚಿತ್ತಾರಿಕಲ್ 4, ವೆಳ್ಳರಿಕುಂಡ್ 4, ರಾಜಪುರಂ 4, ಮೇಲ್ಪ್ಪರಂಬ 53 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 1446 ಕೇಸುಗಳನ್ನು ದಾಖಲಿಸಲಾಗಿದೆ. 1864 ಮಂದಿಯನ್ನು ಬಂ„ಸಲಾಗಿದ್ದು, 628 ವಾಹನಗಳನ್ನು ವಶಪಡಿಸಲಾಗಿದೆ.
         ಜಿಲ್ಲೆಗೆ 3 ವೆಂಟಿಲೇಟರ್‍ಗಳು : ಜಿಲ್ಲೆಯ ತುರ್ತು ಪರಿಸ್ಥಿತಿ ಪರಿಶೀಲಿಸಿ 3 ವೆಂಟಿಲೇಟರ್‍ಗಳು ಲಭ್ಯವಾಗಿವೆ. 7 ಲಕ್ಷ ರೂ. ಮೌಲ್ಯದ ವೆಂಟಿಲೇಟರ್‍ಗಳನ್ನು ತರಲಾಗಿದೆ. ಕೊಯಂಬತ್ತೂರು ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ವಿ-ಗಾರ್ಡ್ ಸಂಸ್ಥೆಯ ಹಿರಿಯ ಪ್ರಬಂಧಕ ಪ್ರದೀಷ್ ಪಿ. ಅವರ ಮುತುವರ್ಜಿಯಿಂದ ಈ ವೆಂಟಿಲೇಟರ್ ಲಭ್ಯವಾಗಿದೆ. ಜಿಲ್ಲೆಯ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶೇಷ ವಾಹನದಲ್ಲಿ ಕೊಯಂಬತ್ತೂರಿನಿಂದ ಕಾಂಞಂಗಾಡಿಗೆ ವೆಂಟಿಲೇಟರ್ ತಲಪಿಸಲಾಗಿದೆ.   ಕಾಸರಗೋಡು ಜನರಲ್ ಆಸ್ಪತ್ರೆ, ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆ, ಪನತ್ತಡಿ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಒಂದು ಬಳಸುವಂತೆ ನೀಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆ ವರಿಷ್ಠಾ„ಕಾರಿ ಡಾ.ಪ್ರಕಾಶ್ ಕೆ.ವಿ. ವೆಂಟಿಲೇಟರ್‍ಗಳನ್ನು ಪಡೆದುಕೊಂಡರು. ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಜಿಲ್ಲಾ ಆಸ್ಪತ್ರೆ ಆರ್.ಎಂ.ಒ. ಡಾ.ರಿಜಿತ್ ಕೃಷ್ಣನ್, ಹಿರಿಯ ವರಿಷ್ಠಾ„ಕಾರಿ ಗಿರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
         ರೋಗಾಣು ಮುಖ್ಯವಾಗಿಸುವ ಕೇಂದ್ರ :
      ಕರ್ನಾಟಕದಿಂದ ಕೇರಳಕ್ಕೆ ಪ್ರವೇಶಿಸುವ ದ್ವಾರವಾಗಿರುವ ಮಂಜೇಶ್ವರದಲ್ಲಿ ವಾಹನಗಳನ್ನು ರೋಗಾಣು ಮುಕ್ತವಾಗಿಸುವ ಕೇಂದ್ರ (ವೆಹಿಕಲ್ ಡಿಸಿನ್‍ಫೆಕ್ಷನ್ ಟನಲ್) ಎ.23 ರಂದು ಆರಂಭಗೊಳ್ಳಲಿದೆ.
              ಪೆÇೀಷಣ್ ವಾಣಿ ವಾಟ್ಸ್ ಆಪ್ ಚಾನೆಲ್ ಪ್ರಸಾರ ಆರಂಭ :
        ಕೋವಿಡ್ ಪ್ರತಿರೋಧ ಅಂಗವಾಗಿ ಮಹಿಳಾ ಶಿಶು ಅಭಿವೃದ್ಧಿ  ಇಲಾಖೆ ಮನೆಯಲ್ಲಿರುವ ಶಿಶುಗಳಿಗೆ, ಹಾಲುಣಿಸುವ ತಾಯಂದಿರಿಗೆ, ಗರ್ಭಿಣಿಯರಿಗೆ, ಯುವತಿಯರಿಗಾಗಿ ಪ್ರತಿದಿನ ವಾಟ್ಸ್ ಆ್ಯಪ್ ವಾಹಿನಿ (ಚಾನೆಲ್) ಪ್ರಸಾರ ಆರಂಭಿಸಿದೆ. ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಈ ಪ್ರಸಾರ ಇರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries