HEALTH TIPS

ಉಚಿತ ಪಡಿತರ ವಿತರಣೆ ಬೆಳಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ

   
      ಬದಿಯಡ್ಕ: ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿಶೇಷ ಹಿನ್ನೆಲೆ ಗಮನಿಸಿ ಜಾರಿಗೊಳಿಸಿರುವ ಉಚಿತ ಪಡಿತರ ವಿತರಣೆ ಬುಧವಾರ ಆರಂಭಗೊಂಡಿದ್ದು ಬೆಳಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ ಎಂದು ಅಧಿಕೃತರು ತಿಳಿಸಿದ್ದಾರೆ. 
     ಪಡಿತರ ವಿತರಣೆಯಲ್ಲಿ ಗೊಂದಲಗಳಾಗದಂತೆ ಮಾರ್ಗನಿರ್ದೇಶನ ನೀಡಲಾಗಿದ್ದು ಪ್ರತಿ ಪಡಿತರ ಕಾರ್ಡ್‍ನ ಗ್ರಾಹಕರ ಸಂಖ್ಯೆಯ ಕೊನೆಯ ಸಂಖ್ಯೆಯ ಪ್ರಕಾರ ವ್ಯವಸ್ಥೆಗೆ ನಿರ್ದೇಶಿಸಲಾಗಿದೆ. ಅದರಂತೆ ಪಡಿತರ ಗ್ರಾಹಕರ ಸಂಖ್ಯೆಯ ಕೊನೆಯ ಸಂಖ್ಯೆ  0,1-ಏಪ್ರಿಲ್ 01, 2,3-ಏಪ್ರಿಲ್ 02, 4,5-ಏಪ್ರಿಲ್ 03, 6,7-ಏಪ್ರಿಲ್ 04, 8,9-ಏಪ್ರಿಲ್ 05                             ಎಂಬ ರೀತಿಯಲ್ಲಿ ವಿತರಣೆ ನಡೆಯಲಿದೆ.  ಏ.6ರಿಂದ ಪಡಿತರ ಚೀಟಿಯ ಕೊನೆಯ ನಂಬ್ರ 0,1 ಎಂದು ಆರಂಭಗೊಳ್ಳುವ ರೀತಿಯಲ್ಲಿ 6ರಂದೂ, 02,03 ಎಂಬ ಕ್ರಮದಲ್ಲಿ 7 ರಂದೂ, 03,04 8ರಂದೂ ನಂತರದ ಚಟುವಟಿಕೆಗಳ ದಿನದಂದು ಪಡಿತರ ವಿತರಣೆ ನಡೆಯಲಿದೆ. 
     ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಅಂತ್ಯೋದಯ ಆದ್ಯತೆ ಇರುವವರಿಗೆ, ಮಧ್ಯಾಹ್ನ 2ರಿಂದ 5 ಗಂಟೆ ವರೆಗೆ ಆದ್ಯತೆಯೇತರ ಮಂದಿಗೆ (ನೀಲಿ, ಬಿಳಿ ಕಾರ್ಡ್ ಹೊಂದಿರುವವರಿಗೆ) ಪಡಿತರ ವಿತರಣೆ ಜರುಗಲಿದೆ.
       ಒಂದು ಪಡಿತರ ಅಂಗಡಿಯಲ್ಲಿ ಒಂದು ಅವಧಿಯಲ್ಲಿ 5 ಮಂದಿ ಮಾತ್ರ ಇರಬೇಕು:
    ರಾಜ್ಯ ಸರ್ಕಾರ ಆದೇಶಿಸಿರುವ ದೈಹಿಕ ಅಂತರ ಕಾಯ್ದುಕೊಂಡು ಮಾತ್ರ ವಿತರಣೆ ನಡೆಸಬೇಕು. ಇದಕ್ಕಾಗಿ ಟೋಕನ್ ಕ್ರಮದಂಥಾ ವಿಧಾನಗಳನ್ನು ಕೈಗೊಳ್ಳಬಹುದು. ಪಡಿತರ ಸಾಮಾಗ್ರಿಗಳನ್ನು ಮನೆಗಳಿಗೆ ತಲಪಿಸುವ ನಿಟ್ಟಿನಲ್ಲಿ ಸ್ವಯಂ ಪ್ರೇರಣೆಯಿಂದ ಸಿದ್ಧರಾದವರನ್ನು ಬೆಂಬಲಿಸಲು ಸಾಧ್ಯವಿಲ್ಲ. ಜನಪ್ರತಿನಿಧಿಗಳೋ, ನೋಂದಣಿ ನಡೆಸಿರುವ ಸ್ವಯಂ ಸೇವಕರು ಮಾತ್ರ ಇಂಥಾ ಸಹಾಯಗಳನ್ನು ನಡೆಸಿದಲ್ಲಿ ಪಡಿತರ ವ್ಯಾಪಾರಿಗಳು ಬೆಂಬಲಿಸಬಹುದು ಎಂದು ಅಧಿಕೃತರು ತಿಳಿಸಿದ್ದಾರೆ.
    ನೇರವಾಗಿ ಪಡಿತರ ಅಂಗಡಿಗೆ ಆಗಮಿಸಿ ಸಾಮಾಗ್ರಿ ಖರೀದಿಸಲು ಶಕ್ತರಲ್ಲದ ಮಂದಿಗೆ ನೋಂದಣಿ ನಡೆಸಿರುವ ಸ್ವಯಂ ಸೇವಕರ ಸಹಾಯವನ್ನು ಪಡಿತರ ಅಂಗಡಿಗಳಲ್ಲಿ ಖಚಿತಪಡಿಸಲಾಗುವುದು.
      ಈ ತಿಂಗಳ ಪಡಿತರ ವಿತರಣೆ ಹೆಚ್ಚುವರಿ ಅಳತೆಯಲ್ಲಿ ನಡೆಯಲಿದೆ. ಲಾಕ್ ಡೌನ್ ನಿಯಂತ್ರಣಗಳು ಜಾರಿಯಲ್ಲಿವೆ. ಧಾನ್ಯ ಖರೀದಿಗೆ ಬರುವವರಿಗೆ ತೊಂದರೆಯಾಗದಂತೆ ವ್ಯವಸ್ಥೆ ನಡೆಸಲು ಸ್ಥಳೀಯಾಡಳಿತ ಸಂಸ್ಥೆಗಳ ಕ್ರಮ ಇರಬೇಕು. ಸಾಧಾರಣ ಗತಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ನೇರವಾಗಿ ಪಡಿತರ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸುವ ಕ್ರಮಗಳಿಲ್ಲ. ಆದರೆ ಈ ಹಂತದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಗಮನಹರಿಸಬೇಕು.
       ಅಂತ್ಯೋದಯ ವಿಭಾಗದ ಮತ್ತು ಆದ್ಯತೆ ಪಟ್ಟಿಯಲ್ಲಿರುವವರಿಗೆ ಸ್ವಯಂ ಸೇವಕರು ಧಾನ್ಯ ಲಭ್ಯತೆಯಲ್ಲಿ ಅತ್ಯಧಿಕ ಆದ್ಯತೆ ನೀಡಲಾಗಿದೆ.
    ಮನೆಗಳಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ಹಿರಿಯ ನಾಗರೀಕರಿಗೆ, ದೈಹಿಕ ಅಶಕ್ತತೆ ಹೊಂದಿರುವವರಿಗೆ, ಅಸೌಖ್ಯದಿಂದ ಬಳಲುತ್ತಿರುವವರಿಗೆ ಮೊದಲಾದವರನ್ನು ಪಡಿತರ ಅಂಗಡಿಗೆ ಕರೆತರುವಲ್ಲಿ ಸ್ವಯಂ ಸೇವಕರು ಸಿದ್ಧರಾಗಬೇಕು. ಇದು ಪ್ರಾಮಾಣಿಕತೆಯೊಂದಿಗೆ ಮತ್ತು ಸುಧಾರಿತ ಕ್ರಮಗಳಲ್ಲಿ ನಡೆಯಬೇಕು. ಪಡಿತರ ಅಂಗಡಿಗಳಲ್ಲಿ ಈ ಸಂದರ್ಭ ಅತಿ ಜನನಿಭಿಡತೆ ತಲೆದೋರುವ ಸಾಧ್ಯತೆಗಳಿದ್ದು, ಅದನ್ನು ತೆರವುಗೊಳಿಸಬೇಕು. ದೈಹಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಏರ್ಪಡಿಸಬೇಕು. ಪಿಂಚಣಿ ವಿತರಣೆ ನಡೆಸಿದ ಕ್ರಮದಲ್ಲೇ ಕಾರ್ಡ್ ನಂಬ್ರ ಪ್ರಕಾರ ಪಡಿತರ ವಿತರಣೆ ನಡೆಸಲು ತಿಳಿಸಲಾಗಿದೆ. 
       ಮುಂದಿನ ಮೂರು ತಿಂಗಳಿಗೆ ಬೇಕಾದ ಆಹಾರ ಧಾನ್ಯ ಹೆಚ್ಚುವರಿ ಸಂಗ್ರಹ ಜಿಲ್ಲೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಗೊಂದಲಗೊಂಡು ಪಡಿತರ ಸಾಮಾಗ್ರಿ ಖರೀದಿಗೆ ಧಾವಿಸಬೇಕಿಲ್ಲ ಎಂದು ಅಧಿಕೃತರು ತಿಳಿಸಿರುವರು. 
        (ಚಿತ್ರ ಮಾಹಿತಿ: 1)ನೀರ್ಚಾಲಿನ ಪಡಿತರ ಅಂಗಡಿಯಲ್ಲಿ ಬುಧವಾರ ಕಂಡುಬಂದ ಪಡಿತರ ಗ್ರಾಹಕರ ಸಾಲು,2)ವಿವಿಧ ವಿಭಾಗಗಳ ಪಡಿತರ 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries