ಕುಂಬಳೆ: ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ, ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ ಸದಸ್ಯ, ಜನಾನುರಾಗಿ ಎ.ಎ.ಕಯ್ಯಾಂಕುಡೇಲು ಎಂದೇ ಪರಿಚಿತರಾಗಿದ್ದ ಮುಹಮ್ಮದಾಲಿ ಕಯ್ಯಾಂಕುಡೇಲ್(71)ಅಲ್ಪಕಾಲದ ಅಸೌಖ್ಯದ ಕಾರಣ ಮಂಗಳವಾರ ನಿಧನರಾದರು. ಪುತ್ತಿಗೆ ಜಮಾಅತ್ ಸಮಿತಿ ಅಧ್ಯಕ್ಷರಾಗಿ, ಪುತ್ತಿಗೆ ಅರ್ಬನ್ ಕೋಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ,ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ಸ್ ಸಮಿತಿ ಅಧ್ಯಕ್ಷರಾಗಿ, ಪುತ್ತಿಗೆ ಮಂಡಲ ಕಾಂಗ್ರೆಸ್ಸ್ ಮಂಡಲ ಕಾಂಗ್ರೆಸ್ಸ್ ನ ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದರು. ಮಾಜಿ ಕೇಂದ್ರ ಸಚಿವ ಎ.ಕೆ.ಆಂಟನಿ ಅವರು ಯುವ ಕಾಂಗ್ರೆಸ್ಸ್ ಅಧ್ಯಕ್ಷರಾಗಿದ್ದ ಸಂದರ್ಭ ಖಜಾಂಜಿಯಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಆರು ಮಂದಿ ಪುತ್ರರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಡಿಸಿಸಿ ಕಾರ್ಯದರ್ಶಿ ಕಯ್ಯಾಂಕುಡೇಲ್ ನಿಧನ
0
ಏಪ್ರಿಲ್ 21, 2020