ಕುಂಬಳೆ: ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ಕಿಮೋ ಥೆರಪಿಗೆ ಗತ್ಯಂತರವಿಲ್ಲದೇ ಆದ ಬಾಲಕಿಗೆ ಸೌಲಭ್ಯ ಒದಗಿಸುವ ಮೂಲಕ ರಾಜ್ಯ ಸರ್ಕಾರ ತನ್ನ ಜನಪರ ನೀತಿಯನ್ನು ಖಚಿತಪಡಿಸಿದೆ.
ಕಾಸರಗೋಡು ಜಿಲ್ಲೆಯ ಗ್ರಾಮಾಂತರ ಪ್ರದೇಶವಾಗಿರುವ ಪುತ್ತಿಗೆಯ ಪಳ್ಳ ದಲ್ಲಿ ವಾಸಿಸುತ್ತಿರು ಹಮೀದ್-ಆಯಿಷತ್ ಮಿಸ್ರ ದಂಪತಿ ಪುತ್ರಿ ಫಾತಿಮತ್ ಷಹಲ(4) ಳಿಗೆ ಸರ್ಕಾರ ಈ ವ್ಯವಸ್ಥೆ ಒದಗಿಸಿದೆ. ಕಣ್ಣಿನಲ್ಲಿ ಅರ್ಬುದ (ಕ್ಯಾನ್ಸರ್) ಹೊಂದಿರುವ ಈಕೆಗೆ ಚೆನೈಯ ಶಂಕರ ನೇತ್ರಾಲಯದಲ್ಲಿ ಕಿಮೋ ಥೆರಪಿ ನಡೆಸಲಾಗುತ್ತಿದೆ. ಆದರೆ ಲಾಕ್ ಡೌನ್ ಆದೇಶ ಜಾರಿಗೊಂಡ ಹಿನ್ನೆಲೆಯಲ್ಲಿ ಈ ಚಿಕಿತ್ಸೆ ಮೊಟಕುಗೊಳ್ಳುವ ಬಗ್ಗೆ ಈ ಕುಟುಂಬ ಭೀತಿಹೊಂದಿತ್ತು. ರಾಜ್ಯ ಯುವಜನ ಕಮೀಷನ್ ಸದಸ್ಯ ಕೆ.ಮಣಿಕಂಠನ್ ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದರು. ಆರೋಗ್ಯ, ಸಮಾಜನೀತಿ, ಮಹಿಳಾ-ಶಿಶು ಕಲ್ಯಾಣ ಇಲಾಖೆಗಳ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರು ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದರು. ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿರುವ ಈ ಕುಟುಂಬಕ್ಕೆ ಪ್ರಯಾಣ, ಚಿಕಿತ್ಸೆ, ಔಷಧ ಎಲ್ಲವನ್ನೂ ಸರ್ಕಾರವೇ ಒದಗಿಸಲಿದೆ ಸಮಾಜ ಸುರಕ್ಷೆ ಮಿಷನ್ ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್ ತಿಳಿಸಿರುವರು.
ಷಹಲಳನ್ನು ಚೆನೈಗೆ ಕರೆದೊಯ್ದ ಆಯ್ಯಂಬುಲೆನ್ಸ್:
ಫಾತಿಮತ್ ಷಹಲಳನ್ನು ಆಯ್ಯಂಬುಲೆನ್ಸ್ ಮೂಲಕ ಮಂಗಳವಾರ ಚೈನೈಗೆ ಕರೆದೊಯ್ಯಲಾಗಿದೆ. ಬೆಳಗ್ಗೆ 10 ಗಂಟೆಗೆ ಹೆತ್ತವರ ಜೊತೆಗೆ ಬಾಲಕಿ ಚೆನೈಗೆ ತೆರಳಿದ್ದಾಳೆ. ಮಡಿಕೈ ಪಾಲಿಯೇಟಿವ್ ಕೇರ್ ಸಂಸ್ಥೆಯ ಆಂಬುಲೆನ್ಸ್ ಮೂಲಕ ಇವರು ಚೈನೈಗೆ ತೆರಳಿದ್ದಾರೆ. ಶಿರಾಗ್ ಮೋನುಚ್ಚ ಮತ್ತು ಅಜೀಷ್ ಶಂಕರ್ ವಾಹನದ ಚಾಲಕರಾಗಿದ್ದಾರೆ. ಯುವಜನ ಆಯೋಗ ಸದಸ್ಯ ಕೆ.ಮಣಿಕಠಣ್, ಸಮಾಜ ಸುರಕ್ಷ ಮಿಷನ್ ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್, ಯುವಜನ ಕಲ್ಯಾಣ ಮಂಡಳಿ ಜಿಲ್ಲಾ ಸಂಚಾಲಕ ನ್ಯಾಯವಾದಿ ಶಿವಪ್ರಸಾದ್, ಸಿ.ಎ.ಝುಬೈರ್ ವಿದಾಯ ಕೋರಿದರು.
ಚೆನ್ನೈಯ ಆಸ್ಪತ್ರೆಯಲ್ಲಿ ನಡೆಸಲಾಗುವ ಶಸ್ತ್ರಚಿಕಿತ್ಸೆಯಿಂದ ಬಾಲಕಿಯ ಕಂಗಳು ಸಹಜ ಸ್ಥಿತಿಗೆ ಬರಲಿವೆ ಎಂಬ ನಿರೀಕ್ಷೆಯಲ್ಲಿದೆ ನಾಡು. ಎಲ್ಲವೂ ನಿರೀಕ್ಷಿಸಿದ ಪ್ರಕಾರವೇ ನಡೆದರೆ ಇಂದು(ಏ.22) ಈಕೆಗೆ ಶಸ್ತ್ರಚಿಕಿತ್ಸೆ (ಕಿಮೋ ಥೆರಪಿ ಸಹಿತ) ನಡೆಯಲಿದೆ. ಈಕೆ ಪೂರ್ಣ ರೂಪದಲ್ಲಿ ಗುಣಮುಖಳಾದ ಮೇಲೆ ಆಂಬುಲೆನ್ಸ್ ಮೂಲಕ ಊರಿಗೆ ಮರಳಿಸಲಾಗುವುದು ಎಂದು ಯುವಜನ ಕಲ್ಯಾಣ ಆಯೋಗ ಸದಸ್ಯ ಮಣಿಕಂಠಣ್ ತಿಳಿಸಿದರು.
ಕೇರಳ ಸಮಾಜ ಸುರಕ್ಷ ಮಿಷನ್ ನ ವಿ ಕೇರ್ ಯೋಜನೆಯಲ್ಲಿ ಅಳವಡಿಸಿ ಅಗತ್ಯದ ಸಹಾಯಗಳನ್ನು ಒದಗಿಸಲು ರಾಜ್ಯ ಸಕಾರ ತೀರ್ಮಾನಿಸಿದೆ. ಈ ಪ್ರಕಾರ 2 ತಂಡಗಳು ಚಟುವಟಿಕೆಗಳ ಏಕೀಕರಣ ನಡೆಸಲಿವೆ. ಸರ್ಕಾರದ ಆರ್ಥಿಕ ಸಹಾಯ ಲಭ್ಯತೆಗಾಗಿ ಮತ್ತು ಡಿ.ಜಿ.ಪಿ. ಸಹಿತ ಅಧಿಕಾರಿಗಳ ಅನುಮತಿ ಲಭ್ಯತೆಗೆ ಕೆ.ಎಸ್.ಎಸ್.ಎಂ. ಕಾರ್ಯಕಾರಿ ನಿರ್ದೇಶಕ ಡಾ.ಮಹಮ್ಮದ್ ಅಷೀಲ್ ಅವರು ನೇತೃತ್ವ ನೀಡಿರುವ ತಂಡ ತಿರುವನಂತಪುರಂ ಕೇಂದ್ರೀಕರಿಸಿ ಚಟುವಟಿಕೆಗಳನ್ನು ಏಕೀಕರಣ ನಡೆಸುತ್ತಿದೆ. ಕಾಸರಗೋಡಿನಿಂದ ಷಹಲಳಿಗೆ ಬೇಕಾದ ಸಹಾಯ ಒದಗಿಸುವ ನಿಟ್ಟಿನಲ್ಲಿ ಅಂತರ್ ರಾಜ್ಯ ಪ್ರಯಾಣ ಪಾಸ್ ದೊರಕಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಗತ್ಯದ ಕ್ರಮ ಮತ್ತು ಕೆ.ಎಸ್.ಎಸ್.ಎಂ. ಇಲ್ಲಾ ಸಂಚಾಲಕ ಜಿಷೋ ಜೋಸೆಪ್ ಅನಿವಾರ್ಯ ಕ್ರಮಗಳನ್ನು ನಡೆಸಿದ್ದಾರೆ. ತಮಿಳುನಾಡು ಸರ್ಕಾರದ ಅನುಮತಿ ಪಡೆಯುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

