HEALTH TIPS

ಕೊರೊನಾ ವೈರಸ್ : ಆತಂಕ ಬೇಡ : ಅಲ್ಕೇಷ್ ಕುಮಾರ್ ಶರ್ಮ

 
       ಕಾಸರಗೋಡು: ಎಲ್ಲರೂ ಒಗ್ಗಟ್ಟಿನಿಂದಿದ್ದರೆ ಕೋವಿಡ್-19 ನಿಂದ ಪಾರಾಗಬಹುದು ಎಂದು ಜಿಲ್ಲೆಯ ಕೊರೋನಾ ಪ್ರತಿರೋಧ ಚಟುವಟಿಕೆಗಳ ಅವಲೋಕನ ನಡೆಸಲು ಆಗಮಿಸಿರುವ ವಿಶೇಷ ಅ„ಕಾರಿ, ರಾಜ್ಯ ಉದ್ದಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಲ್ಕೇಷ್ ಕುಮಾರ್ ಶರ್ಮ ಅಭಿಪ್ರಾಯಪಟ್ಟರು.
     ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
         ರಾಜ್ಯ ಸರ್ಕಾರ, ಆರೋಗ್ಯ ಇಲಾಖೆ ಜಿಲ್ಲೆಯ ಕೋವಿಡ್ 19 ಹಾವಳಿ ನಿಯಂತ್ರಣ ನಡೆಸಲು ಪೂರ್ಣ ಸಜ್ಜಾಗಿದೆ. ಸಾರ್ವಜನಿಕರ ಬೆಂಬಲ ಲಭಿಸಿದರೆ ಈ ದುಸ್ಥಿಯಿಂದ ಪರಾಗಬಹುದು. ಈ ಬಗ್ಗೆ ತಮಗೆ ಪರಿಪೂರ್ಣ ವಿಶ್ವಾಸವಿದೆ ಎಂದವರು ತಿಳಿಸಿದರು.
        ಆತಂಕ ಬೇಡ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕು ಬಾಧೆ ಹೆಚ್ಚಳಗೊಳ್ಳುತ್ತಿದೆಯಾದರೂ, ಸಾರ್ವಜನಿಕರು ಆತಂಕಕ್ಕೊಳಗಾಗಬೇಕಾದ ಅಗತ್ಯವಿಲ್ಲ. ಪ್ರತಿರೋಧ ಚಟುವಟಿಕೆಗಳು ಚುರುಕಿನಿಂದ ಸಾಗುತ್ತಿವೆ. ತುರ್ತು ಪರಿಸ್ಥಿಯನ್ನು ಎದುರಿಸಲು ತಾಂತ್ರಿಕ ಸಹಾಯ ಸಹಿತ ಎಲ್ಲ ಸೌಲಭ್ಯಗಳೂ ಸರಕಾರ ಜಾರಿಗೊಳಿಸುತ್ತಿದೆ. ಇದರ ಮೊದಲ ಹಂತವಾಗಿ ಪೆರಿಯ ಕೇಂದ್ರೀಯ ವಿವಿಯಲ್ಲಿ ತಪಾಸಣೆ ಪ್ರಯೋಗಾಲಯ ಚಟುವಟಿಕೆಗೆ ಸಜ್ಜಾಗಿದೆ ಎಂದವರು ಹೇಳಿದರು. ಇಲ್ಲಿ ಟ್ರಯಲ್ ತಪಾಸಣೆ ಆರಂಭಗೊಡಿದೆ. ಶೀಘ್ರದಲ್ಲೇ ಚಟುವಟಿಕೆ ಆರಂಭಗೊಳ್ಳಲಿದೆ ಎಂದು ನುಡಿದರು. 
      ಪಾಸಿಟಿವ್ ಪ್ರಕರಣಗಳ ಪ್ರದೇಶಗಳು ಇನ್ನು ಮುಂದೆ ಪೆÇಲೀಸ್ ಸುಪರ್ದಿಯಲ್ಲಿ :
     ಜಿಲ್ಲೆಯಲ್ಲಿ ಅತ್ಯಧಿಕ ಕೋವಿಡ್ ಪಾಸಿಟಿವ್ ಕೇಸುಗಳು ವರದಿಯಾಗಿರುವ ಪ್ರದೇಶಗಳು ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪೆÇಲೀಸ್ ಸುಪರ್ದಿಗೆ ಬರಲಿವೆ. ಇಲ್ಲಿನ ಜನ ಯಾವ ಕಾರಣಕ್ಕೂ ಮನೆಯಿಂದ ಹೊರಕ್ಕಿಳಿಯಲು ಅನುಮತಿ ನೀಡುವುದಿಲ್ಲ. ಅನಿವಾರ್ಯ ಸಾಮಾಗ್ರಗಳ ರವಾನೆಗೆ ಹೋಂ ಡೆಲಿವರಿ ಸೌಲಭ್ಯ ಆರಂಭಿಸಲು ಯೋಚಿಸಲಾಗುತ್ತಿದೆ. ಮನೆಗಳಲ್ಲಿ ನಿಗಾದಲ್ಲಿರುವ ಕುಟುಂಬಗಳಿಗೆ ಮತ್ತು ಭೋಜನಕ್ಕೆ ತತ್ವಾರ ಅನುಭವಿಸುತ್ತಿರುವ ಮಂದಿಗೆ ಸಮುದಾಯ ಅಡುಗೆ ಮನೆಗಳ ಮೂಲಕ ಆಹಾರ ವಿತರಣೆ ನಡೆಸಲಾಗುತ್ತಿದೆ. ಪರಿಶಿಷ್ಟ ಜಾತಿ-ಪಂಗಡದ ಮಂದಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಗುವುದು ಎಂದವರು ನುಡಿದರು.
      ರಾಜ್ಯ ಸರ್ಕಾರ, ಆರೋಗ್ಯ ಇಲಾS, ಪೆÇಲೀಸರು ನೀಡಿರುವ ಸಲಹೆ-ಸೂಚನೆ ಪಾಲಿಸಿದರೆ ಕೋವಿಡ್ 19 ನಿಯಂತ್ರಣ ಸಾಧ್ಯ. ವ್ಯಕ್ತಿಗತ ಶುಚಿತ್ವ ಪಾಲನೆ ನಡೆಸಬೇಕು. ಅಂಗಡಿಗಳಲ್ಲಿ ಅನಿವಾರ್ಯ ಸಾಮಾಗ್ರಿ ಖರೀದಿಗೂ ಗ್ರಾಹಕರು ನಿಗದಿತ ಅಂತರ ಪಾಲಿಸಬೇಕು ಎಂದು ಹೇಳಿದರು.
      ವಿಶೇಷ ಯೋಜನೆ ರಚನೆ :
    ಜಿಲ್ಲೆಯ ಇತರ ರಾಜ್ಯಗಳ ಕಾರ್ಮಿಕರಿಗ, ವಯೋವೃದ್ಧರಿಗೆ, ವಿಶೇಷ ಚೇತನರಿಗೆ, ಕೃಷಿಕರಿಗೆ ಸಹಿತ ಎಲ್ಲ ಜನರ ಕಲ್ಯಾಣಕ್ಕಾಗಿ ರಾಜ್ಯ ಸರಕಾರ, ಜಿಲ್ಲಾಡಳಿತೆ  ಯೋಜನೆ ರಚಿಸಿದೆ. ಲಾಕ್ ಡೌನ್ ಆದೇಶ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವವರು ಜಿಲ್ಲಾ„ಕಾರಿ ಕಚೇರಿಯ ಕೊರೊನಾ  ವಿಶೇಷ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
      ಲಾಕ್ ಡೌನ್ ಆದೇಶ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವೃದ್ಧಾಶ್ರಮ, ಅನಾಥ ಮಂದಿರ ಇತ್ಯಾದಿಗಳ ಸಮಸ್ಯೆಗಳನ್ನು ಅಧ್ಯಯನ ನಡೆಸಲಾಗುವುದು. ಪ್ರಾಯೋಜಕರ ಮೂಲಕ ಭೋಜನ ಒದಗಿಸಲಾಗುವುದು. ಇಲ್ಲದೇ ಇದ್ದಲ್ಲಿ ಜಿಲ್ಲಾಡಳಿತೆ ಭೋಜನ ಮತ್ತಿತರ ಸೇವೆ ಒದಗಿಸಲಿದೆ.
       ಪೆರ್ಲ ಸಾಯಿ ಗ್ರಾಮದ 36 ಮನೆಗಳನ್ನು ಕೋವಿಡ್ 19 ರೋಗಗಳ ದಾಖಲಾತಿಗೆ ಬಳಸಲಾಗುವುದು. ಇಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸಹಿತ ಅನಿವಾರ್ಯ ಸೌಲಭ್ಯ ಒದಗಿಸಲು ಸಂಬಧಪಟ್ಟ ಸಿಬ್ಬಂದಿಗೆ ಆದೇಶ ನೀಡಲಾಗಿದೆ.   
       ಎಂಡೋಸಲ್ಪಾನ್ ಸಂತ್ರಸ್ತರಿಗಾಗಿ ರಾಜ್ಯ ಸರಕಾರ ನಿರ್ಮಿಸಿದ ಜ್ಯೂನಿಯರ್ ಹೆಲ್ತ್ ಇನ್ಸ್‍ಪೆಕ್ಟರರ ಕಾಲಾವಧಿ ಕಳೆದರೆ ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಿಗಾಗಿ ಅವರ ಕಾಲಾವಧಿಯನ್ನು ಮೂರು ತಿಂಗಳಕಾಲ ಹೆಚ್ಚುವರಿ ಗೊಳಿಸಲಾಗುವಂತೆ ಮಾಡಲು ಸರಕಾರದ ಅನುಮತಿ ಕೋರಲಾಗುವುದು ಎಂದವರು ತಿಳಿಸಿದರು.   ಸಿ.ಐ.ಐ. ನೇತೃತ್ವದಲ್ಲಿ 12 ಯೂನಿಟ್ ಡಯಾಲಿಸಿಸ್ ಸೌಲಭ್ಯವನ್ನು ಜಿಲ್ಲೆಯಲ್ಲಿ ಸಿದ್ಧಪಡಿಸಲಾಗುವುದು ಎಂದು ಹೇಳಿದರು.
         ಆದೇಶ ಉಲ್ಲಂಘಿಸಿದರೆ ಕ್ರಮ :
      ಲಾಕ್ ಡೌನ್ ಆದೇಶ ಉಲ್ಲಂಘಿಸಿದರೆ, ಮನೆಗಳಲ್ಲಿ ನಿಗಾದಲ್ಲಿರುವವರು ಹೊರಗಿಳಿದು ಅಲೆದಾಡಿದರೆ, ಅನಿವಾರ್ಯ ಸಾಮಾಗ್ರಿಗಳಿಗೆ ಅತಿ ಬೆಲೆ ಈಡು ಮಾಡಿದರೆ ಜಿಲ್ಲಾಡಳಿತೆ ಕಾನೂನು ಕ್ರಮಕೈಗೊಳ್ಳಲಿದೆ.
      ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಅರುನ್ ಕೆ.ವಿಜಯನ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries