HEALTH TIPS

ಆಟವಾಡುವ ಕೈಗಳಲ್ಲಿ ಕೊಡಲಿ- ಸ್ನೇಹಿತನನ್ನು ಕೊಡಲಿಯಿಂದ ಕಡಿದು ದಾರುಣವಾಗಿ ಕೊಲೆಗೈದ ಅಪ್ರಾಪ್ತರು

 
      ಪತ್ತನಂತಿಟ್ಟು: ಪತ್ತನಂತಿಟ್ಟ ಜಿಲ್ಲೆಯ ಮೊಡುಮಾನ್ ಎಂಬಲ್ಲಿ ಬಾಲಕನನ್ನು ಅತಿಕ್ರೂರವಾಗಿ ಥಳಿಸಿ ಹಾಗೂ ಕೊಡಲಿಯಿಂದ ಕಡಿದು, ಆತನ ಸ್ನೇಹಿತರೇ ದಾರುಣವಾಗಿ ಕೊಲೆ ನಡೆಸಿದ್ದಾರೆ. ಕೊಲೆ ಪ್ರಕರಣ ಬಹಿರಂಗಗೊಳ್ಳದಂತೆ ಮೃತದೇಹವನ್ನು ಜನವಾಸವಿಲ್ಲದ ಜಾಗದಲ್ಲಿ ಮಣ್ಣಿನಡಿ ಹೂತುಹಾಕಿದ್ದಾರೆ. ಇಲ್ಲಿನ ಅಂಙËಡಿಕಲ್ ನಿವಾಸಿ ಸುಧೀಶ್ ಎಂಬವರ ಪುತ್ರ, ಹತ್ತನೇ ತರಗತಿ ವಿದ್ಯಾರ್ಥಿ ಎಸ್. ಅಖಿಲ್(18)ದಾರುಣವಾಗಿ ಮೃತಪಟ್ಟ ಬಾಲಕ.
   ಸಮಾನ ಹರೆಯದ ಈತನ ಸ್ನೇಹಿತರೇ ಈ ಕೃತ್ಯವಸೆಗಿರುವುದು ನಾಡಿನ ಜನತೆಯನ್ನು ಆತಂಕಕ್ಕೆ ತಳ್ಳಿದೆ. ಬೇರೊಂದು ಶಾಲೆಯಲ್ಲಿ ಈ ಇಬ್ಬರೂ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಇದಕ್ಕೂ ಮೊದಲು ಎಂಟು ಹಾಗೂ ಒಂಬತ್ತನೇ ತರಗತಿಯಲ್ಲಿ ಆರೋಪಿಗಳಲ್ಲಿ ಒಬ್ಬಾತ ಅಖಿಲ್ ಜತೆಯಾಗಿ ಕಲಿತಿದ್ದನು.
         ಮೂರೂ ಮಂದಿ ವಿದ್ಯಾರ್ಥಿಗಳು ಸ್ನೇಹಿತರಾಗಿದ್ದು, ಆರೋಪಿಗಳಲ್ಲಿ ಒಬ್ಬನ ಸ್ಕೇಟಿಂಗ್ ಶೂವನ್ನು ಅಖಿಲ್ ಕೊಂಡೊಯ್ದಿದ್ದು, ವಾಪಾಸು ತರುವಾಗ ಇದರ ಚಕ್ರ ಕಳಚಿದ ಸ್ಥಿತಿಯಲ್ಲಿತ್ತು. ಇದರ ಬದಲು ಮೊಬೈಲ್ ನೀಡುವುದಾಗಿ ಅಖಿಲ್ ಸ್ನೇಹಿತಗೆ ಮಾತುಕೊಟ್ಟಿದ್ದರೂ, ಇದನ್ನು ಪಾಲಿಸದಿರುವುದರ ದ್ವೇಷದಿಂದ ಕೃತ್ಯವಸೆಗಿರಬೇಕೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಶಾಲೆ ಸನಿಹದ ಜನವಾಸವಿಲ್ಲದ ಮನೆ ಹಿತ್ತಿಲಿಗೆ ಅಖಿಲ್‍ನನ್ನು ಕರೆದೊಯ್ದು, ಅಲ್ಲಿ ಕಲ್ಲೆಸೆದು ಬೀಳಿಸಿದ ನಂತರ ಮನೆಯಿಂದ ಕೊಂಡೊಯ್ದಿದ್ದ ಕೊಡಲಿಯಿಂದ ಕತ್ತಿನ ಭಾಗಕ್ಕೆ ಕಡಿದು ಕೊಲೆಗೈಯಲಾಗಿದೆ. ಮೃತದೇಹವನ್ನು ಸನಿಹದಲ್ಲಿದ್ದ ಸಣ್ಣ ಹೊಂಡಕ್ಕೆಸೆದು, ಅದರ ಮೇಲೆ ಮಣ್ಣು ಸುರಿದಿದ್ದಾರೆ. ಹೊಂಡಕ್ಕೆ ಮೃತದೇಹ ತಳ್ಳಿ ಮಣ್ಣು ಸಉರಿಯುತ್ತಿದ್ದುದನ್ನು ದೂರದಿಂದ ವ್ಯಕ್ತಿಯೊಬ್ಬರು ನೋಡಿದ್ದು, ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಆಸುಪಾಸಿನ ಜನರು ಸ್ಥಳಕ್ಕಾಗಮಿಸುತ್ತಿದ್ದಂತೆ ಪರಾರಿಯಾಗಲೆತ್ನಿಸಿದ ಬಾಲಕರಿಬ್ಬರನ್ನೂ ನಾಗರಿಕರು ಸೆರೆಹಿಡಿದು ಕೈಗಳನ್ನು ಬಿಗಿದು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹ ಮಣ್ಣಿನಡಿಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದರು.  ಇವರು ಮಾದಕವಸ್ತು ಸೇವಿಸಿರಬೇಕೆಂಬ ಸಂಶಯವೂ ವ್ಯಕ್ತವಾಗಿದೆ. ಅಲ್ಲದೆ, ಕೃತ್ಯಕ್ಕೆ ಬೇರೆ ವ್ಯಕ್ತಿಗಳ ಕೈವಾಡವಿರುವ ಬಗ್ಗೆಯೂ ತನಿಖೆ ನಡೆಸುವಂತೆಯೂ ನಾಗರಿಕರು ಆಗ್ರಹಿಸಿದ್ದಾರೆ.
      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ ಸಐಮನ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries