ಮಂಜೇಶ್ವರ: ಕೋವಿಡ್ ಬಾಧಿಸಿ ಮಂಜೇಶ್ವರದ ವ್ಯಕ್ತಿಯೊಬ್ಬರು ದುಬೈ ಯಲ್ಲಿ ಮೃತರಾಗಿದ್ದಾರೆ.
ಮಂಜೇಶ್ವರ ಮಜೀರ್ಪಳ್ಳ ಧರ್ಮನಗರ ನಿವಾಸಿ ಹಮೀದ್ ಮುನ್ನಿಪ್ಪಾಡಿ (35) ಮೃತ ದುರ್ದೈವಿ. ಕಳೆದ ಹತ್ತು ವರ್ಷಗಳಿಂದ ದುಬೈ ಯಲ್ಲಿ ಉದ್ಯೋಗದಲ್ಲಿದ್ದ ಹಮೀದ್ ಐದು ತಿಂಗಳ ಹಿಂದೆ ಊರಿಗೆ ಆಗಮಿಸಿ ಹೊಸತಾಗಿ ಕಟ್ಟಿಸಿದ ಮನೆಯಲ್ಲಿ ವಾಸ ಆರಂಭಿಸಿದ ಬಳಿಕ ದುಬೈಗೆ ಮರಳಿದ್ದರು. ಕಳೆದ ಕೆಲವು ದಿನಗಳಿಂದ ಕೋವಿಡ್ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರೆಂದು ತಿಳಿದು ಬಂದಿದೆ. ಸೋಮವಾರ ರಾತ್ರಿ ಭಾರತದ ಕಾಲಮಾನ 11 ಘಂಟೆಯ ಸುಮಾರಿಗೆ ಮೃತ ಪಟ್ಟಿದ್ದಾರೆ.


