HEALTH TIPS

ಇದಲ್ಲ ಕೊರೊನಾ ಆಟ, ಮುಂದಿದೆ ಅಸಲಿ ಅಟ್ಟಹಾಸ: ವಾನಿರ್ಂಗ್ ಕೊಟ್ಟ WHO!

 
     ನ್ಯಾಯಾರ್ಕ್:  ವಿಶ್ವದಾದ್ಯಂತ ಇಲ್ಲಿಯವರೆಗೂ 24,99,665 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಡೆಡ್ಲಿ ಕೊರೊನಾ ವೈರಸ್ ನಿಂದ ಈಗಾಗಲೇ 171,338 ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್-19 ನಿಂದ ಜಗತ್ತಿನ ಹಲವು ದೇಶಗಳು ಅಕ್ಷರಶಃ ಜರ್ಜರಿತವಾಗಿವೆ.
      ಹೀಗಿದ್ದರೂ, ಕೊರೊನಾ ಆಟ ಇದಲ್ವಂತೆ. ಕೊರೊನಾ ಅಸಲಿ ಅಟ್ಟಹಾಸ ಇನ್ಮೇಲೆ ಶುರುವಾಗಲಿದೆ. ನೋವೆಲ್ ಕೊರೊನಾ ವೈರಸ್ ಔಟ್ ಬ್ರೇಕ್ ನಿಂದಾಗಿ ಬೆಚ್ಚಿಬೀಳಿಸುವ, ಭಯಾನಕ ದಿನಗಳು ಮುಂದೆ ಬರಲಿವೆ ಎಂಬ ವಾನಿರ್ಂಗ್ ವಿಶ್ವ ಆರೋಗ್ಯ ಸಂಸ್ಥೆಯ ಕಡೆಯಿಂದಲೇ ಬಂದಿದೆ.
    "ಈಗಿನಕ್ಕಿಂತಲೂ ಘನ ಘೋರ ದಿನಗಳು ನಮ್ಮ ಮುಂದಿವೆ'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಎಚ್ಚರಿಕೆಯ ಕರೆಗಂಟೆ ಮೊಳಗಿಸಿದ್ದಾರೆ. ಘನ ಘೋರ ದಿನಗಳು ನಮ್ಮ ಮುಂದಿವೆ. ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಸೃಷ್ಟಿಸಿರುವ ಅವಾಂತರದ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್, ''ನಮ್ಮನ್ನ ನಂಬಿ.. ಘನ ಘೋರ ದಿನಗಳು ನಮ್ಮ ಮುಂದಿವೆ'' ಎಂದು ಹೇಳಿದ್ದಾರೆ.
         ದುರಂತವನ್ನು ತಡೆಯಬೇಕಿದೆ:
      ''ಕೊರೊನಾ ವೈರಸ್ ವಿರುದ್ಧ ಹೋರಾಡಲು ಜಾಗತಿಕ ಒಗ್ಗಟ್ಟು ಮತ್ತು ರಾಷ್ಟ್ರೀಯ ಐಕ್ಯತೆ ಬಹಳ ಮುಖ್ಯ. ಅದಿಲ್ಲದಿದ್ದರೆ, ಹೆಚ್ಚು ಜನ ಸಾವನ್ನಪ್ಪುತ್ತಾರೆ. ಕೆಟ್ಟದ್ದು ನಮಗಾಗಿ ಕಾಯುತ್ತಿದೆ. ಈ ದುರಂತವನ್ನು ನಾವೆಲ್ಲರೂ ಸೇರಿ ತಡೆಯೋಣ'' ಎಂದು ಟೆಡ್ರೋಸ್ ಕರೆ ನೀಡಿದ್ದಾರೆ.
      ಅಪಾಯಕಾರಿ ಕಾಂಬಿನೇಶನ್:
     ''ಸಾರ್ಸ್ ಮತ್ತು ಮೆರ್ಸ್ ಗೆ ಕಾರಣವಾಗುವ ವೈರಸ್ ನಂತೆ ನೋವೆಲ್ ಕೊರೊನಾ ವೈರಸ್ ಕೂಡ ಡೆಡ್ಲಿ. ಅಪಾಯಕಾರಿ ಕಾಂಬಿನೇಶನ್ ಗಳನ್ನು ಈ ವೈರಸ್ ಒಳಗೊಂಡಿದೆ. ಆದರೆ ಈಗಿನ ತಂತ್ರಜ್ಞಾನ ಯುಗದಲ್ಲಿ ಇದನ್ನು ತಡೆಗಟ್ಟಬಹುದಾಗಿದೆ'' ಎಂದು ಟೆಡ್ರೋಸ್ ತಿಳಿಸಿದರು.
         ಎಚ್ಚರಿಕೆ ಕೊಟ್ಟ ಟೆಡ್ರೋಸ್
    ''ಹಲವು ದೇಶಗಳಲ್ಲಿ ಸೋಂಕಿನ ಪ್ರಕರಣಗಳು ಕಡಿಮೆ ಆಗ್ತಿದ್ದಂತೆ, ಲಾಕ್ ಡೌನ್ ಅನ್ನು ಸಡಿಲಗೊಳಿಸಲಾಗುತ್ತಿದೆ. ಆದ್ರೆ, ಇದರಿಂದ ದೊಡ್ಡ ಅಪಾಯ ಕಟ್ಟಿಟ್ಟಬುತ್ತಿ. ಲಾಕ್ ಡೌನ್ ತೆರವುಗೊಳಿಸಿದರೆ, ಸೋಂಕಿನ ಎರಡನೇ ಅಲೆ ಶುರುವಾಗಲಿದೆ'' ಎಂದೂ ಟೆಡ್ರೋಸ್ ಎಚ್ಚರಿಕೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries