HEALTH TIPS

ವಿವಾಹ ನೋಂದಣಿ ನೋಟೀಸ್ ಇನ್ನು ಉಪ ನೋಂದಣಿ ಕಚೇರಿಗಳಲ್ಲಿ ಮಾತ್ರ-ಸಾರ್ವಜನಿಕ ದುರ್ಬಳಕೆಗೆ ತಡೆ


        ತಿರುವನಂತಪುರ: ರಾಜ್ಯದ ವಿಶೇಷ ವಿವಾಹ ಕಾಯ್ದೆಯಡಿ ಮದುವೆಗೆ ಅರ್ಜಿ ಸಲ್ಲಿಸುವಾಗ ನೋಟಿಸ್ ನೀಡುವ ವಿಧಾನದಲ್ಲಿ ನೋಂದಣಿ ಇಲಾಖೆ ಪ್ರಮುಖ ಬದಲಾವಣೆ ಮಾಡಿದೆ. ಇನ್ನು ವಿವಾಹಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಗಳ ವಿವರಗಳನ್ನು ಕೇಂದ್ರ ಕಾನೂನು ನಿರ್ದೇಶಾನುಸಾರ ಉಪ ನೋಂದಾಣಾಧಿಕಾರಿಗಳ ಕಚೇರಿಯ ನೋಟಿಸ್ ಬೋರ್ಡ್‍ನಲ್ಲಿ ಮಾತ್ರ ಪ್ರದರ್ಶಿಸಲಾಗುವುದು. ಮಾಹಿತಿಯನ್ನು ನೋಂದಣಿ ಇಲಾಖೆಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದಿಲ್ಲ. ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡುವ ಮೂಲಕ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಜಿ ಸುಧಾಕರನ್ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.
        ನೋಂದಣಿ ಇಲಾಖೆಯ ವೆಬ್‍ಸೈಟ್‍ನಿಂದ ಮಾಹಿತಿ ದುರುಪಯೋಗದ ವಿರುದ್ಧ ಅತಿರಾ ಸುಜಾತ ರಾಧಾಕೃಷ್ಣನ್ ಬರೆದ ಟಿಪ್ಪಣಿಯ ಆಧಾರದ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಜಿ.ಸುಧಾಕರನ್ ಸ್ಪಷ್ಟಪಡಿಸಿರುವರು. ಈ ಕುರಿತು ಇಲಾಖೆಯ ಅಧಿಕಾರಿಗಳಿಂದ ವರದಿ ಕೋರಿದ್ದು, ರಾಜ್ಯ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವಿವರಣೆ ಕೇಳಲಾಗಿದೆ  ಎಂದು ಸಚಿವರು ಹೇಳಿರುವರು. ಈ ನಿಟ್ಟಿನಲ್ಲಿ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ನೋಂದಣಿ ಉಪನಿರ್ದೇಶಕರಿಗೆ  ನಿರ್ದೇಶಿಸಲಾಯಿತು.
       ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ಅಧಿಕಾರಿಗೆ ಸಲ್ಲಿಸಿದ ಮದುವೆ ನೋಟಿಸ್ ಅನ್ನು ಕೇಂದ್ರ ಕಾನೂನಿನ ಪ್ರಕಾರ ಉಪ ನೋಂದಣಿ ಕಚೇರಿಯ ನೋಟಿಸ್ ಬೋರ್ಡ್‍ನಲ್ಲಿ ಮಾತ್ರ ಪೆÇೀಸ್ಟ್ ಮಾಡಲಾಗುತ್ತದೆ. ವಿಶೇಷ ವಿವಾಹ ಕಾಯ್ದೆ 1954 ರ ಅಡಿಯಲ್ಲಿ ಮದುವೆಯಾಗಲು ಬಯಸುವವರು ಮದುವೆ ಅಧಿಕಾರಿಗೆ ಕಾನೂನು ನೋಟಿಸ್ ಸಲ್ಲಿಸಬೇಕಾಗುತ್ತದೆ. ಆದ್ದರಿಂದ ಸ್ವೀಕರಿಸಿದ ನೋಟಿಸ್ ನ್ನು ಸಾರ್ವಜನಿಕ ಕಚೇರಿಗಳ ಸಹಿತ üಇತರ ಕಚೇರಿಗಳಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಮದುವೆಗೆ ಯಾವುದೇ ಕಾನೂನು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬೇಕು ಎಂಬ ನಿಯಮ ಜಾರಿಯಲ್ಲಿದೆ.
      2018 ರಲ್ಲಿ, ಕಾನೂನಿನ ನಿಯಮಗಳನ್ನು ತಿದ್ದುಪಡಿ ಮಾಡಲು ಮತ್ತು ಅರ್ಜಿದಾರರ ಫೆÇೀಟೋವನ್ನು ಸೇರಿಸಲು ನಿರ್ಧರಿಸಲಾಗಿತ್ತು. ಫೆÇೀಟೋಗಳು ಮತ್ತು ವಿಳಾಸಗಳು ಸೇರಿದಂತೆ ಮಾಹಿತಿಯು ಕಳೆದ ವರ್ಷದಿಂದ ಇಲಾಖೆಯ ವೆಬ್‍ಸೈಟ್‍ನಲ್ಲೂ ಪರಕಟಿಸಲಾಗುತ್ತಿದೆ. ಆದರೆ, ಮಾಹಿತಿಯನ್ನು ಡೌನ್‍ಲೋಡ್ ಮಾಡಿ ನೋಟಿಸ್ ನೀಡಿದವರ ವಿರುದ್ಧ ಕಿರುಕುಳ ಮತ್ತು ಬೆದರಿಕೆ ದೂರುಗಳು ಗಮನಕ್ಕೆ ಬಂದಿದ್ದು, ಅರ್ಜಿದಾರರ ಗೌಪ್ಯತೆಗೆ ಧಕ್ಕೆ ತರುತ್ತಿದೆ ಎಂದು ಟೀಕಿಸಲಾಗಿದೆ ಎಂದು ಫೇಸ್‍ಬುಕ್ ಪೆÇೀಸ್ಟ್ ತಿಳಿಸಿದೆ. ವಿವಾಹ ನೋಟಿಸ್‍ಗಳನ್ನು ಕೋಮು ಪ್ರಚಾರಕ್ಕಾಗಿ ಬಳಸಲಾಗುತ್ತಿದೆ ಎಂದೂ ಹೇಳಲಾಗಿದೆ. ಇದನ್ನು ತಡೆಗಟ್ಟಲು ಅರ್ಜಿದಾರರ ನಿವಾಸವನ್ನು ಒಳಗೊಂಡಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾತ್ರ ನೋಟಿಸ್ ನೀಡಬೇಕು ಎಂದು ಸಚಿವರು ಹೇಳಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries