ಶಬರಿಮಲೆಗೆ ಮಹಿಳಾ ಪ್ರವೇಶ ತೀರ್ಪಿನ ನಂತರದ ಬೆಳವಣಿಗೆಗಳನ್ನು ಕೇರಳಿಗರು ಮರೆತಿಲ್ಲದಿರಬಹುದು. ಪ್ರಗತಿಗಾಮಿಗಳೆಂದು ಹೇಳಿಕೊಳ್ಳುವ ಬಿಂದು ಅಮ್ಮಿನಿ ಮತ್ತು ಕನಕ ದುರ್ಗಾ ಶಬರಿಮಲೆ ಬೆಟ್ಟದ ಮೇಲೆ ತೆರಳಿ ಆಲಯ ಪ್ರವೇಶಿಸಲು ಯತ್ನಿಸಿದರು.
ಬಳಿಕ ಆಂದೋಲನಗಳು ಮತ್ತು ಪ್ರತಿಭಟನೆಗಳು ಭುಗಿಲೆದ್ದವು. ವರ್ಷಗಳು ಕಳೆದವು. ವಿಧಾನಸಭಾ ಚುನಾವಣೆಗೆ ಎರಡು ದಿನಗಳು ಮಾತ್ರ. ಶಬರಿಮಲೆಯನ್ನು ಮತ್ತೆ ಪ್ರಚಾರ ಅಸ್ತ್ರವಾಗಿಯೂ ಬಳಸಲಾಗಿದೆ. ಅಧಿಕಾರಕ್ಕೆ ಬಂದರೆ ಮಹಿಳೆಯರು ಶಬರಿಮಲೆ ಪ್ರವೇಶಿಸುವುದನ್ನು ತಡೆಯುವ ಕಾನೂನನ್ನು ತರಲಾಗುವುದೆಂದು ಕಾಂಗ್ರೆಸ್ ಹೇಳಿದೆ.ಜೊತೆಗೆ ಇದನ್ನಿಷ್ಟು ಎಳೆ-ಎಳೆದು ತಂದ ಬಿಜೆಪಿಯ ಬಗ್ಗೆ ಬೇರೆ ಹೇಳಬೇಕಿಲ್ಲವಷ್ಟೇ?
ಶಬರಿಮಲೆಯ ಪಾವಿತ್ರ್ಯತೆ ಮರೆತು ರಾಜಕೀಯ ದುರ್ಬಳಕೆ!:
'ಶಬರಿಮಲೆ, 28 ಸೆಪ್ಟೆಂಬರ್ 2018 ರ ತೀರ್ಪು ಈ ಕ್ಷಣದವರೆಗೂ ತಡೆಯಾಜ್ಞೆ ನೀಡಿಲ್ಲ. ಬಿಂದು ಅಮ್ಮಿನಿ ಮತ್ತು ರಹನಾ ಫಾತಿಮಾ ಅವರು ಶಬರಿಮಲೆಗೆ ಸಂತೋಷದಿಂದ ಹೋಗಿ ಪ್ರಾರ್ಥನೆ ಸಲ್ಲಿಸಬಹುದಾದರೆ, ಬನ್ನಿ, ನಮಗೆ ಯಾವುದೇ ಸಮಸ್ಯೆ ಇಲ್ಲ :'ಸುಪ್ರೀಂ ಕೋರ್ಟ್
'ಇದು 2019 ರ ನವೆಂಬರ್‍ನಲ್ಲಿ ಸುಪ್ರೀಂ ಕೋರ್ಟ್ ಮಾಡಿದ ಉಲ್ಲೇಖವಾಗಿದೆ. ಇದರರ್ಥ ಪ್ರಸ್ತುತ ಯಾವುದೇ ವಯಸ್ಸಿನ ಮಹಿಳೆಯರಿಗೆ ಶಬರಿಮಲೆಗೆ ಭೇಟಿ ನೀಡಲು ಯಾವುದೇ ನಿರ್ಬಂಧಗಳು ಅಥವಾ ನಿಷೇಧಗಳಿಲ್ಲ.
ಹಾಗಾದರೆ ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಶಿರಸಾ ವಹಿಸಿ ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಬೆಂಬಲ ನೀಡಿದ ಕಮ್ಯುನಿಸ್ಟ್ ಪಕ್ಷ ಹಾಗೂ ತಾವು ಅಧಿಕಾರಕ್ಕೆ ಬಂದರೆ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ಕಾನೂನು ತರಲಾಗುವುದೆಂದೂ ಹೇಳುವ ಕಾಂಗ್ರೆಸ್ಸ್....ಇವೆರಡೂ ಪಕ್ಷಗಳು ಯಾರನ್ನು ವಂಚಿಸುತ್ತಿದ್ದಾರೆ ಎಂಬುದು ಕೋವಿಡ್ ವೈರಸ್ ಮೂಲವನ್ನು ಪತ್ತೆಹಚ್ಚಲಾಗದಕ್ಕಿಂತಲೂ ಭೀಕರವಾದ ಪ್ರಶ್ನೆಯಾಗಿದೆ....ಹಾಗೆ ಅನ್ನಿಸುವುದಿಲ್ಲವೇ?
ಸ್ತ್ರೀ ಸ್ವತಂತ್ರಮರ್ಹತಿ ಎಂಬುದಷ್ಟೇ ವಿಧಿ...................
ಎಲ್ಲರಿಗೂ ಶಬರಿಮಲೆಗೆ ತೆರಳಬಹುದು ಎಂಬುದು ಸುಪ್ರೀಂ ಕೋರ್ಟ್ ನ ತೀರ್ಪಾಗಿದೆ, ಹೊರತು ಎಲ್ಲರೂ ಕಡ್ಡಾಯವಾಗಿ ಹೋಗಬೇಕೆಂದು ಎಲ್ಲೂ ಹೇಳಿಲ್ಲ.! 10ರಿಂದ 50ರ ಮಧ್ಯೆ ಹರೆಯದ ಮಹಿಳೆಯರು ಶಬರಿಮಲೆ ದರ್ಶನಗೈಯ್ಯಬಾರದು ಎಂದು ಹೇಳಿದ್ದು ಯಾರೆಂದು ನಿಮಗೆ ಗೊತ್ತೇ? ಶ್ರೀಸ್ವಾಮಿ ಅಯ್ಯಪ್ಪ ಹೇಳಿರುವನೇ........ಇಲ್ಲವೇ ಇಲ್ಲ...ಹಾಗಿದ್ದರೆ.....
ಅದು ಹೇಳಲ್ಪಟ್ಟಿರುವುದು Rule 3(b) of the Kerala Hindu Places of Public Worship(Authorization of Entry) Rules 1965 ಎಂಬ ಸರ್ಕಾರಿ ಕಾನೂನುನಲ್ಲಾಗಿದೆ.ಗೊತ್ತೇ?!
ಇದೇ ಕಾನೂನು ಸಂವಿಧಾನ ವಿರುದ್ದವೆಂದು ಪರಿಗಣಿಸಿ ಸುಪ್ರೀಂ ಕೋರ್ಟ್ ರದ್ದುಪಡಿಸಿರುವುದು. ಹೊರತು ಯಾರ ಆಚಾರ-ಅನುಷ್ಠಾನಗಳನ್ನೂ ಅವಹೇಳಿಸಿಲ್ಲ. ಅಂದರೆ ಮೂಢ ನಂಬಿಕೆಯೊಂದನ್ನು ರದ್ದುಪಡಿಸಿದೆ ಎಂದಷ್ಟೇ ಅರ್ಥ!
ಹಾಗಿದ್ದರೆ ಯಾವ ರಾಜಕೀಯ ಪಕ್ಷಗಳೂ ಆರೋಪ ಪ್ರತ್ಯಾರೋಪಗಳನ್ನು ಮಾಡುವ ಅಗತ್ಯವೇ ಇಲ್ಲ. ಅಥವಾ ಮತಗಳಿಕೆಯೋ, ಇನ್ಯಾವುದೋ ಕಾರಣಗಳಿಗೆ ಅಯ್ಯಪ್ಪನನ್ನು ಎಳೆದು ತರುವ ಅಗತ್ಯವೂ ಇಲ್ಲ!
ಮೂಢನಂಬಿಕೆ ಅಲ್ಲವೆಂದಾದರೆ, ಶಾಸ್ತ್ರೀಯ ಸಿದ್ದಾಂತಗಳಿದ್ದರೆ, ಅದರ ಸಾಕ್ಷ್ಯಗಳೊಂದಿಗೆ ಭಾರತೀಯನಾದ ಯಾರೂ ಸುಪ್ರೀಂ ಕೋರ್ಟ್ ನಲ್ಲಿ ಮರು ಅರ್ಜಿ ಸಲ್ಲಿಸಿ ತಡೆಯಾಜ್ಞೆ ತರಬಹುದು. ಯಾಕೆ ಯಾರೂ ಮುಂದಾಗಿಲ್ಲ.? ನ್ಯಾಯಯುತವೆಂದಾದರೆ ರಾಜಕೀಯ ಲಾಭಗಳಿಕೆಗೆ ಯಾರೂ ಅಯ್ಯಪ್ಪ ಸ್ವಾಮಿಯನ್ನು ಬಳಸುವಂತಿಲ್ಲ. ಹೀಗಾದರೆ ಇದನ್ನೂ ಅದೇ ಸುಪ್ರೀಂ ಕೋರ್ಟ್ ಕಾನೂನು ತರುವ ಮೂಲಕ ಬೀಗ ಜಡಿದೀತು....ಅಥವಾ ಅದೇ ಬೇಕೇನೊ!






