ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಎಡರಂಗ ಹಾಗೂ ಎರಡರಲ್ಲಿ ಐಕ್ಯರಂಗ ಗೆಲುವು ಸಾಧಿಸುವ ಮೂಲಕ 2016ರ ಚುನಾವಣಾ ಫಲಿತಾಂಶ ಮರುಕಳಿಸಿದೆ. ಮಂಜೇಶ್ವರದಲ್ಲಿ ಐಕ್ಯರಂಗದ ಎ.ಕೆ.ಎಂ ಅಶ್ರಫ್(65758ಮತ), ಬಿಜೆಪಿಯ ಕೆ.ಸುರೇಂದ್ರನ್(65013), ಸಿಪಿಎಂನ ವಿ.ವಿ ರಮೇಶನ್(40639)ಮತಗಳನ್ನು ಪಡೆದಿದ್ದಾರೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಐಕ್ಯರಂಗದ ಎನ್.ಎ ನೆಲ್ಲಿಕುನ್ನು ಅವರು ಬಿಜೆಪಿಯ ಕೆ.ಶ್ರೀಕಾಂತ್ ಅವರನ್ನು 12901ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಎನ್.ಎ ನೆಲ್ಲಿಕುನ್ನು (63296), ಬಿಜೆಪಿಯ ಕೆ.ಶ್ರೀಕಾಂತ್(50395), ಎಡರಂಗದ ಎಂ.ಎ ಲತೀಫ್(28323)ಮತಗಳನ್ನು ಪಡೆದುಕೊಂಡಿದ್ದಾರೆ. ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂನ ಸಿ.ಎಚ್ ಕುಞಂಬು(78664), ಐಕ್ಯರಂಗದ ಬಾಲಕೃಷ್ಣನ್ ಪೆರಿಯ(65342), ಬಿಜೆಪಿಯ ಎ.ವೇಲಾಯುಧನ್(20360), ಕಾಞಂಗಾಡು ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐನ ಇ.ಚಂದ್ರಶೇಖರನ್(84615), ಐಕ್ಯರಂಗದ ಪಿ.ವಿ ಸುರೇಶ್(57476), ಬಿಜೆಪಿಯ ಬಾಲರಾಜ್(21570)ಮತಗಳನ್ನು ಪಡೆದುಕೊಂಡಿದ್ದಾರೆ.
ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂನ ಎಂ.ರಾಜಗೋಪಾಲ್(86151), ಐಕ್ಯರಂಗದ ಎಂ.ಪಿ ಸೋಸೆಫ್(60014), ಬಿಜೆಪಿಯ ಶಿಬಿನ್ ಟಿ.ವಿ(10961)ಮತಗಳನ್ನು ಪಡೆದುಕೊಂಡಿದ್ದಾರೆ.
2016ರಲ್ಲಿ ನಡೆದ ಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಐಕ್ಯರಂಗದ ಪಿ.ಬಿ ಅಬ್ದುಲ್ ರಜಾಕ್ ಬಿಜೆಪಿಯ ಕೆ.ಸುರೇಂದ್ರನ್ ಅವರನ್ನು 89ಮತಗಳ ಅಂತರದಿಂದ ಪರಾಭವಗೊಳಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು.




