ಕಾಸರಗೋಡು: ಚಿತ್ರನಟ, ರಾಜ್ಯಸಭಾ ಸದಸ್ಯ ಸುರೇಶ್‍ಗೋಪಿ ಫ್ಯಾನ್ಸ್ ಆ್ಯಂಡ್ ವೆಲ್‍ಫೇರ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ರಕ್ತದಾನ ಶಿಬಿರ ಜನರಲ್ ಆಸ್ಪತ್ರೆಯಲ್ಲಿ ನಡೆಯಿತು. ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಮನೋಜ್‍ಕುಮಾರ್ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ದೇಶ ಕೋವಿಡ್ ಸಂಕಷ್ಟದಲ್ಲಿ ಸಿಲುಕಿದ್ದು, ಈ ಸಂದರ್ಭ ಜೀವದ್ರವವಾಗಿರುವ ರಕ್ತಕ್ಕಾಗಿ ಜನರು ಸಂಕಷ್ಟಪಡದಿರಬೇಕಾದರೆ ಇಂತಹ ಶಿಬಿರ ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯ ಎಂದು ತಿಳಿಸಿದರು.
ಪಿ.ಸತೀಶ್, ಅಖಿಲ್ ಚುಂಡಯಿಲ್, ಜಿತೇಶ್ ಬೋವಿಕ್ಕಾನ, ರಾಜೇಶ್ ಪ್ರಣವಂ, ಇ.ಸುಧೀಶ್ ಕುಮಾರ್, ಎ.ಅಜೇಶ್ ಕುಮಾರ್, ಕೆ. ಅಬಿತ್ ಕುಮಾರ್, ಸುಮೇಶ್ ಮುಂತಾದವರು ರಕ್ತದಾನ ಮಾಡಿದರು.




