ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ನ ಕಳಪೆ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ತಾನೇ ವಹಿಸಿಕೊಳ್ಳುವೆ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದ್ದಾರೆ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಸ್ವೀಕರಿಸುತ್ತೇನೆ ಎಂದು ಮುಲ್ಲಪ್ಪಳ್ಳಿ ಸ್ಪಷ್ಟಪಡಿಸಿರುವರು. ಹೋರಾಟದಲ್ಲಿ ನನ್ನನ್ನು ಪರಾಜಯಗೊಳಿಸಲಾಗದು. ತಾನಾಗಿ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಗುಂಪುಗಾರಿಕೆಗಳಿಲ್ಲದೆ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬೇಡಿಕೆ ಹೆಚ್ಚುತ್ತಿದೆ. ಈ ಬಗ್ಗೆ ಕೇಂದ್ರ ನಾಯಕತ್ವಕ್ಕೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಕಾಂಗ್ರೆಸ್ ಐ ಗ್ರೂಪ್ ರಮೇಶ್ ಚೆನ್ನಿತ್ತಲ ಅವರು ಪ್ರತಿಪಕ್ಷದಿಂದ ಕೆಳಗಿಳಿಯುವ ಅಗತ್ಯವಿಲ್ಲ ಎಂದು ಹೇಳಿದೆ. ಚೆನ್ನಿತ್ತಲ ಅವರ ಪ್ರತಿಪಕ್ಷ ಸ್ಥಾನಕ್ಕೆ ನೀಡಲಿರುವ ರಾಜೀನಾಮೆಯನ್ನು ಐ ಗ್ರೂಪ್ ವಿರೋಧಿಸಿದೆ.
ಕೇರಳದಲ್ಲಿ ಯುಡಿಎಫ್ ಅಭ್ಯರ್ಥಿಗಳ ಸೋಲಿನ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ವರದಿ ಕೋರಿದೆ. ಕಾರಣವನ್ನು ಒಂದು ವಾರದೊಳಗೆ ಸ್ಪಷ್ಟಪಡಿಸಬೇಕು ಎಂದು ಸೂಚಿಸಲಾಗಿದೆ. ವರದಿಯನ್ನು ಸ್ವೀಕರಿಸಿದ ಬಳಿಕ ಕೆಪಿಸಿಸಿ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಕಾಂಗ್ರೆಸ್ ರಾಷ್ಟ್ರೀಯ ಮಾನಿಟರಿಂಗ್ ಸಮಿತಿಯು ವೈಫಲ್ಯವನ್ನು ನಿರ್ಣಯಿಸುತ್ತದೆ.





