ತಿರುವನಂತಪುರ: ಎರಡನೇ ಪಿಣರಾಯಿ ಸರ್ಕಾರದ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ವಿಳಂಬವಾಗಲಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಮೇ. 18 ರಂದು ನಡೆಯಲಿದೆ. ಹೆಚ್ಚುತ್ತಿರುವ ಕೊರೋನಾ ವಿಸ್ತರಣೆಯ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕಾರವನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಹೊಸ ಮುಖಗಳೊಂದಿಗೆ ನೂತನ ಕ್ಯಾಬಿನೆಟ್ ರಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಿಣರಾಯಿ ವಿಜಯನ್, ಕೊಡಿಯೇರಿ ಬಾಲಕೃಷ್ಣನ್, ಎಂ.ಎ. ಬೇಬಿ, ಎಸ್. ರಾಮಚಂದ್ರನ್ ಪಿಳ್ಳೈ ಮತ್ತು ಪೆÇಲಿಟ್‍ಬ್ಯುರೊ ಸದಸ್ಯರ ನಡುವಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ದಾಖಲೆಯ ಬಹುಮತದೊಂದಿಗೆ ಗೆದ್ದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರನ್ನು ಬದಲಿಸಲಾಗುವುದಿಲ್ಲ ಎಂಬ ಸೂಚನೆಗಳಿವೆ.
ಮಾಜಿ ಸಚಿವರಾದ ಎಸಿ ಮೊಯಿದೀನ್, ಟಿಪಿ ರಾಮಕೃಷ್ಣನ್ ಮತ್ತು ಕೆ.ಟಿ.ಜಲೀಲ್ ತಮ್ಮ ಮಂತ್ರಿ ಹುದ್ದೆಗಳನ್ನು ಕಳೆದುಕೊಳ್ಳಲಿದ್ದಾರೆ. ಹೊಸ ಸರ್ಕಾರದಲ್ಲಿ ಸಿಪಿಐ ಕಡಿಮೆ ಪ್ರಾತಿನಿಧ್ಯವನ್ನು ಪಡೆಯುವ ಸೂಚನೆಗಳಿವೆ.





