ತಿರುವನಂತಪುರ: ಕೊರೋನಾ ವಿಸ್ತರಣೆ ಮುಂದುವರಿದಂತೆ ರಾಜ್ಯದಲ್ಲಿ ಮಿನಿ ಲಾಕ್ ಡೌನ್ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸ್ತುತ, ನಿಬರ್ಂಧಗಳು ಮಂಗಳವಾರದಿಂದ ಮೇ.9ರ ವರೆಗೆ ವಿಧಿಸಲಾಗಿದ್ದು, ಮೇ. 16 ವರೆಗೂ ವಿಸ್ತರಿಸುವ ಸಾಧ್ಯತೆಯಿದೆ.
ಸೋಂಕು ಹರಡುವಿಕೆ ಮೇ.15 ರವರೆಗೆ ಮುಂದುವರಿಯುತ್ತದೆ ಎಂದು ಆರೋಗ್ಯ ತಜ್ಞರು ಮತ್ತು ತಜ್ಞರ ಸಮಿತಿ ಹೇಳಿದೆ. ಈ ಹಿನ್ನೆಲೆಯಲ್ಲಿ ನಿಬರ್ಂಧಗಳನ್ನು ವಿಸ್ತರಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಮಂಗಳವಾರ ಇಂದು ನಡೆದ ಸಿಪಿಎಂ ರಾಜ್ಯ ಸಚಿವಾಲಯ ಸಭೆಯಲ್ಲಿ ವಿವರಿಸಲಾಗಿದೆ.
ಭಾನುವಾರದೊಳಗೆ ಸೋಂಕು ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮುಂದಿನ ಒಂದು ವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಹೇರುವ ಯೋಜನೆಗಳಿವೆ ಎಂದು ಅಧಿಕೃತರು ತಿಳಿಸಿದ್ದಾರೆ. ಸೋಂಕಿನ ತೀವ್ರತೆಯು ಕ್ಷೀಣಿಸುತ್ತಿದ್ದರೂ, ನಿಯಂತ್ರಣಗಳು ಮುಂದುವರಿಯಲಿವೆ.





